ತ್ರಿಪುರಾ ಮೂಲದ ವ್ಯಕ್ತಿಯಾಗಿರುವ ರಿಪನ್ ನಾಮ ಎಂಬವರು ಮಂಗಳೂರಿನಲ್ಲಿ ವಾಸವಾಗಿದ್ದರು. ಇವರ ಪತ್ನಿ ಸುಮಿತಾ ರಾಣಿ ಸರ್ಕಾರ್ (23) ಮತ್ತು ರಿಯಾ ನಾಮ (6)ಎಂಬುವರು ನಾಪತ್ತೆಯಾಗಿದ್ದಾರೆ.
2 ತಿಂಗಳ ಹಿಂದೆ ತ್ರಿಪುರ ರಾಜ್ಯದಿಂದ ಹೆಂಡತಿ ಸಂಸಾರ ಸಮೇತ ಮಂಗಳೂರಿಗೆ ಬಂದು ಸೆಂಟ್ರಿAಗ್ ಕೆಲಸ ಮಾಡಿಕೊಂಡಿದ್ದರು. ಮೇ 23ರಂದು ಸೆಂಟ್ರಿAಗ್ ಕೆಲಸಕ್ಕೆ ಹೋಗಿ ಮಧ್ಯಾಹ್ನ ಸುಮಾರು 12ಗಂಟೆ ವೇಳೆಗೆ ಮನೆಗೆ ಬಂದು ನೋಡಿದಾಗ ಮನೆಯಲ್ಲಿ ಪತ್ನಿ ಮತ್ತು ಮಗಳು ಇರಲಿಲ್ಲ. ಮೊಬೈಲ್ಗೆ ಕರೆಮಾಡಿದಾಗ ಸ್ವಿಚ್ಆಪ್ ಬಂದಿದೆ. ಈ ಕುರಿತಂತೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.