Tuesday, November 26, 2024
ಸುದ್ದಿ

ಮಂಗಳೂರು- ಮರುಸಾಗರ್ ಎಕ್ಸ್ಪ್ರೆಸ್‌ಗೆ ದಿವ್ಯಾಂಗ ಸ್ನೇಹಿ ಬೋಗಿ ಅಳವಡಿಸಲು ರೈಲ್ವೇ ಇಲಾಖೆ ನಿರ್ಧಾರ –ಕಹಳೆ ನ್ಯೂಸ್

ಮಂಗಳೂರು ; ನಂ. 12978 ಅಜ್ಮೀರ್-ಎರ್ನಾಕುಲಂ ಜಂಕ್ಷನ್ ಸಾಪ್ತಾಹಿಕ ಮರುಸಾಗರ್ ಎಕ್ಸ್ ಪ್ರಸ್ (ಶುಕ್ರವಾರ ಸೇವೆ)ಗೆ ಜನರೇಟರ್ ಕಾರ್ ಬೋಗಿಗೆ ಬದಲಾಗಿ ಸೆಕೆಂಡ್ ಕ್ಲಾಸ್ (ದಿವ್ಯಾಂಗ ಸ್ನೇಹಿ) ಕಂ ಲಗೇಜ್/ಬ್ರೇಕ್ ವ್ಯಾನ್ ಕೋಚ್ ಅನ್ನು ಮೇ 26ರಿಂದ ಶಾಶ್ವತವಾಗಿ ಅಳವಡಿಸಲಾಗುತ್ತಿದೆ.

ನಂ. 12977 ಎರ್ನಾಕುಲಂ ಜಂಕ್ಷನ್-ಅಜ್ಮೀರ್ ಸಾಪ್ತಾಹಿಕ ಮರುಸಾಗರ್ ಎಕ್ಸ್ಪ್ರೆಸ್ (ರವಿವಾರ ಸೇವೆ)ಗೆ ಜನರೇಟರ್ ಕಾರ್ ಕೋಚ್ ಬದಲಿಗೆ ಸೆಕೆಂಡ್ ಕ್ಲಾಸ್ (ದಿವ್ಯಾಂಗ ಸ್ನೇಹಿ) ಕಂ ಲಗೇಜ್/ ಬ್ರೇಕ್ ವ್ಯಾನ್ ಕೋಚ್ ಶಾಶ್ವತವಾಗಿ ಅಳವಡಿಸಲಾಗುತ್ತಿದೆ ಎಂದು ರೈಲ್ವೇ ಇಲಾಖೆ ಮಾಹಿತಿ ನೀಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ತಿರುನೆಲ್ವೇಲಿ ಎಕ್ಸ್ಪ್ರೆಸ್‌ಗೆ ತಾತ್ಕಾಲಿಕ ಸ್ಲಿಪರ್ ಕೋಚ್ ಪ್ರಯಾಣಿಕರ ದಟ್ಟಣೆಯನ್ನು ನಿಯಂತ್ರಿಸುವ ಸಲುವಾಗಿ ಮೇ 26 ಮತ್ತು 27ರಂದು ಪ್ರಯಾಣ ಬೆಳೆಸಲಿರುವ ನಂ. 19578 ಜಾಮ್ನಗರ್-ತಿರುನೆಲ್ವೇಲಿ ಎಕ್ಸ್ಪ್ರೆಸ್‌ಗೆ ಹಾಗೂ ಮೇ 29 ಮತ್ತು 30ರಂದು ಪ್ರಯಾಣಿಸಲಿರುವ ನಂ. 19577 ತಿರುನೆಲ್ವೇಲಿ-ಜಾಮ್ನಗರ್ ಎಕ್ಸ್ಪ್ರೆಸ್‌ಗೆ ತಾತ್ಕಾಲಿಕವಾಗಿ ತಲಾ ಒಂದರAತೆ ಸ್ಲಿಪರ್ ಕೋಚ್ ಸೇರ್ಪಡೆಗೊಳಿಸಲು ಸಂಬAಧ ಪಟ್ಟ ಇಲಾಖೆ ನಿರ್ಧರಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು