Friday, September 20, 2024
ಸುದ್ದಿ

ಕೇರಳದಲ್ಲಿ ನವಂಬರ್ 1ರಿಂದ ಅನಿರ್ಧಿಷ್ಟಾವಧಿ ಮುಷ್ಕರ – ಕಹಳೆ ನ್ಯೂಸ್

ಕಾಸರಗೋಡು: ನಿರಂತರ ಇಂಧನ ಬೆಲೆ ಏರಿಕೆಯಿಂದ ಬಸ್ ಉದ್ಯಮ ಸಂಕಷ್ಟದಲ್ಲಿದ್ದು, ನವಂಬರ್ ಒಂದರಿಂದ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲು ಕೇರಳ ರಾಜ್ಯ ಖಾಸಗಿ ಬಸ್ ಮಾಲಕರ ಸಂಘದ ಕಾಸರಗೋಡು ಜಿಲ್ಲಾ ಸಮಿತಿ ತೀರ್ಮಾನಿಸಿದೆ.

ಇದರ ಪೂರ್ವಭಾವಿಯಾಗಿ ಆಕ್ಟೊಬರ್ 9 ರಂದು ಬೆಳಿಗ್ಗೆ 10 ಗಂಟೆಯಿಂದ ಕಾಸರಗೋಡು ಹೊಸ ಬಸ್ಸು ನಿಲ್ದಾಣ ಪರಿಸರದಲ್ಲಿ ಧರಣಿ ಸತ್ಯಾಗ್ರಹ ನಡೆಸಲಿದೆ. ಪೆಟ್ರೋಲಿಯಂ ಉತ್ಪನ್ನ ಗಳನ್ನು ಜಿ ಎಸ್ ಟಿ ವ್ಯಾಪ್ತಿಗೆ ತರಬೇಕು, ಖಾಸಗಿ ಬಸ್ಸುಗಳ ಕಾಲಾವಧಿ 20 ವರ್ಷವಾಗಿ ಹೆಚ್ಚಿಸಬೇಕು, ವಿದ್ಯಾರ್ಥಿಗಳ ಪ್ರಯಾಣ ದರ ಏರಿಕೆ ಮಾಡಬೇಕು, ರಾಜ್ಯ ಸರಕಾರಕ್ಕೆ ಲಭಿಸುವ ತೆರಿಗೆ ಕೈ ಬಿಡಬೇಕು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

ಕೇರಳಕ್ಕಿಂತ ಲೀಟರ್ ಗೆ ಕಡಿಮೆ ದರ ಇರುವ ಕರ್ನಾಟಕದಿಂದ ಡೀಸೆಲ್ ಆಮದು ಮಾಡಿಕೊಳ್ಳಲು ಅನುಮತಿ ನೀಡಬೇಕು, ಕೆ ಎಸ್ ಆರ್ ಟಿ ಸಿ ಬಸ್ಸುಗಳಲ್ಲೂ ವಿದ್ಯಾರ್ಥಿಗಳಿಗೆ ರಿಯಾಯಿತಿ ನೀಡಬೇಕು, ಸಮಾಂತರ ಸಂಚಾರವನ್ನು ನಿಲ್ಲಿಸಬೇಕು, ಜಿಲ್ಲೆಯ ಎಲ್ಲಾ ರಸ್ತೆಗಳನ್ನು ಸಂಚಾರ ಯೋಗ್ಯಗೊಳಿಸಬೇಕು ಮೊದಲಾದ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮುಷ್ಕರ ನಡೆಸಲಾಗುತ್ತಿದೆ.

ಈ ಕುರಿತು ಚರ್ಚಿಸಲು ನಡೆದ ಸಂಘದ ಕಾರ್ಯಕಾರಿ ಸಮಿತಿ ಸಭೆ ಯಲ್ಲಿ ಅಧ್ಯಕ್ಷ ಗಿರೀಶ್ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಸತ್ಯನ್ ಪೂಚಕ್ಕಾಡ್, ಉಪಾಧ್ಯಕ್ಷ ತಿಮ್ಮಪ್ಪ ಭಟ್ , ಕೋಶಾಧಿಕಾರಿ ಪಿ.ಎ ಮುಹಮ್ಮದ್ ಕುಂಞ ಮತ್ತಿತರರು ಉಪಸ್ಥಿತರಿದ್ದರು.