ಅಣೆಕಟ್ಟಿನೊಳಗೆ ಬಿದ್ದ ತನ್ನ ಮೊಬೈಲ್ ಫೋನ್‌ಗಾಗಿ ಡ್ಯಾಮ್‌ನಲ್ಲಿದ್ದ ನೀರನ್ನೇ ಖಾಲಿ ಮಾಡಿಸಿದ ಅಧಿಕಾರಿ..! –ಕಹಳೆ ನ್ಯೂಸ್
ಅಣೆಕಟ್ಟಿನೊಳಗೆ ತಮ್ಮ ಮೊಬೈಲ್ ಫೋನ್ ಬಿದ್ದ ಕಾರಣ, ಒಂದು ಫೋನ್‌ಗಾಗಿ ಅಧಿಕಾರಿಯೊಬ್ಬರು ಡ್ಯಾಮ್‌ನಲ್ಲಿದ್ದ ಸಂಪೂರ್ಣ ನೀರನ್ನೇ ಖಾಲಿ ಮಾಡಿಸಿದ ಘಟನೆ ಛತ್ತೀಸ್‌ಗಢ್‌ನ ಖೇರ್ಕಟ್ಟಾದಲ್ಲಿ ನಡೆದಿದೆ.
ಆಹಾರ ಅಧಿಕಾರಿ ರಾಜೇಶ್ ವಿಶ್ವಾಸ್ ರಜಾ ನಿಮಿತ್ತ ಕುಟುಂಬ ಸಮೇತರಾಗಿ ಜಲಾಶಯಕ್ಕೆ ಹೋಗಿದ್ರು. ಈ ವೇಳೆ 15ಅಡಿಯಷ್ಟು ನೀರು ತುಂಬಿದ ಜಲಾಶಯಕ್ಕೆ ಆಕಸ್ಮಿಕವಾಗಿ ತಮ್ಮ 1.5 ಲಕ್ಷದ ಮೊಬೈಲ್ ಜಾರಿ ಬಿದ್ದಿದೆ. ಫೋನ್‌ನಲ್ಲಿ ಸರ್ಕಾರದ ಸೂಕ್ಷ್ಮ ಡೇಟಾ ಇದೆ ಎಂದು ಸುಮಾರು 21 ಲಕ್ಷ ಲೀಟರ್ ನೀರನ್ನ ಅಣೆಕಟ್ಟಿನಿಂದ ಹೊರ ಬಿಟ್ಟಿದ್ದಾರೆ. ಇನ್ನು 21ಲಕ್ಷ ಲೀಟರ್ ನೀರನ್ನು ಸುಮಾರು 1500ಎಕರೆ ಕೃಷಿ ಭೂಮಿಗೆ ಬಳಕೆ ಮಾಡಬಹುದಿತ್ತು.
ಅಧಿಕಾರಿಯ ಹುಚ್ಚುತನದ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ನೀರಾವರಿ ಮತ್ತು ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು ಧಾವಿಸಿ ಕಾಮಗಾರಿ ಸ್ಥಗಿತಗೊಳಿಸಿದ್ದಾರೆ. ಈ ಬಗ್ಗೆ ಸಂಬAಧಪಟ್ಟ ಅಧಿಕಾರಿಯಿಂದ ಅನುಮತಿ ಪಡೆಯದ ಆರೋಪದ ಮೇಲೆ ಜಿಲ್ಲಾಧಿಕಾರಿ ಪ್ರಿಯಾಂಕಾ ಶುಕ್ಲಾ ಅವರು ರಾಜೇಶ್‌ವರನ್ನು ಅಮಾನತುಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.