Wednesday, November 27, 2024
ಸುದ್ದಿ

ರೇಷನ್ ಅಕ್ಕಿಯ ಅಕ್ರಮ ಮಾರಾಟ: ಆರೋಪಿಯ ಬಂಧನ – ಕಹಳೆ ನ್ಯೂಸ್

ಮಂಗಳೂರು: ರೇಶನ್ ಅಕ್ಕಿಯನ್ನು ಮಾರಾಟ ಮಾಡಲು ವಾಹನದಲ್ಲಿ ಸಾಗಿಸುತ್ತಿದ್ದ ಸಂದರ್ಭದಲ್ಲಿ ಬಂಟ್ವಾಳ ಗ್ರಾಮಾಂತರ ಠಾಣಾ ಎಸ್‌ಐ ಪ್ರಸನ್ನ ನೇತ್ರತ್ವದಲ್ಲಿ ದಾಳಿ ನಡೆಸಿ ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿದ ಘಟನೆ ನಡೆದಿದೆ.

ಪರ್ಲಿಯಾ ನಿವಾಸಿ ನಿಯಾಜ್ ಹಸನ್ ಬಂಧಿತ ಆರೋಪಿ. ಬಂಧಿತನಿಂದ ಅಕ್ಕಿ ಅಹಿತ ಒಟ್ಟು 1.82 ಸಾವಿರ ರೂ ಮೌಲ್ಯದ ಸೊತ್ತುಗಳನ್ನು ವಶಪಡಿಕೊಳ್ಳಲಾಗಿದೆ ತುಂಬೆ ಸಮೀಪದ ರಾಮಾಲಕಟ್ಟೆ ಎಂಬಲ್ಲಿ ಘಟನೆ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ರಾತ್ರಿ ವಿಶೇಷ ಕರ್ತವ್ಯದಲ್ಲಿದ್ದ ಬಂಟ್ವಾಳ ಗ್ರಾಮಾಂತರ ಠಾಣಾ ಎಸ್‌ಐ ಪ್ರಸನ್ನ ಕುಮಾರ್ ಅವರು ವಾಹನಗಳ ತಪಾಸಣೆ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಪಿಕಪ್ ವಾಹನವನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸಿದಾಗ ತುಂಬೆಯಿಂದ 30 ಸಾವಿರ ರೂ ಮೌಲ್ಯದ 20 ಕಿಂಟ್ವಾಲ್ ಅಕ್ಕಿ ಯ 50 ಕೆ.ಜಿ.ಯ 40.

ಜಾಹೀರಾತು
ಜಾಹೀರಾತು
ಜಾಹೀರಾತು

ಚೀಲಗಳಲ್ಲಿ ರೇಶನ್ ಅಕ್ಕಿಯನ್ನು ತುಂಬಿಸಿಕೊಂಡು ಬಿಸಿರೋಡಿನ ಕಡೆಗೆ ಹೋಗುವ ವಿಚಾರ ಬೆಳಕಿಗೆ ಬಂದಿದೆ. ಜೊತೆಗೆ ಪಿಕಪ್ ವಾಹನ ದಲ್ಲಿ ಗೋಣಿ ಚೀಲವನ್ನು ಹೊಲಿಯುವ 2 ಸಾವಿರ ರೂ ಮೌಲ್ಯ ದ ಮೆಶಿನ್ ಹಾಗೂ 50 ಖಾಲಿ ಗೋಣಿ ಚೀಲವನ್ನು ಮತ್ತು 1.50 ಲಕ್ಷ ಮೌಲ್ಯದ ಪಿಕಪ್ ವಾಹನವನ್ನು ಪೋಲೀಸರು ವಶಪಡಿಸಿಕೊಂಡು ಅಹಾರ ಇಲಾಖೆಗೆ ಹಸ್ತಾಂತರ ಮಾಡಿದ್ದಾರೆ.

ಕಾರ್ಯಾಚರಣೆ ಯಲ್ಲಿ ಬಂಟ್ವಾಳ ಗ್ರಾಮಾಂತರ ಪೋಲೀಸ್ ಸಿಬ್ಬಂದಿ ಗಳಾದ ಸುರೇಶ್, ಜಯರಾಮ್, ಜನಾರ್ದನ, ಶಿವಕುಮಾರ್ ನಾಯಕ್, ಕಿರಣ್ ಮತ್ತಿರರು ಪಾಲ್ಗೊಂಡಿದ್ದರು