ಗೆಳೆಯನ ಮದುವೆಗೆ ವಿಳಂಭವಾಗುತ್ತದೆ ಎಂದು ಉರಗ ರಕ್ಷಕರೊಬ್ಬರು ಹಾವನ್ನ ಹಿಡುದುಕೊಂಡೇ ಮದುವೆ ಮಂಟಪಕ್ಕೆ ತೆರಳಿದ ಘಟನೆ ವಿಜಯ ಪುರದಲ್ಲಿ ನಡೆದಿದೆ.
೩೪ ವರ್ಷದ ಹನುಮೇಶ್ ಉರಗರಕ್ಷಕರಾಗಿದ್ದು, ನಗರ ವ್ಯಾಪ್ತಿಯಲ್ಲಿ ಹಾವು ರಕ್ಷಣೆಗೆ ಹೋಗಿದ್ದರು. ಈ ನಡುವೆ ತನ್ನ ಸ್ನೇಹಿತನ ಮದುವೆಗೆ ವಿಳಂಬವಾಗುತ್ತಿತ್ತು, ಹಾಗಾಗಿ ಅವರು ತಾವು ಹಿಡಿದ ಹಾವಿನ ಜೊತೆಯೇ ಮದುವೆ ಮನೆಗೆ ಹೋಗಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.ಕೈಯಲ್ಲಿ ಹಸಿರು ಬಳ್ಳಿಯ ಹಾವನ್ನು ಹಿಡಿದುಕೊಂಡು ಮದುವೆ ಮನೆಯಲ್ಲಿ ವರನ ಜೊತೆಗೆ ಫೋಟೋಗೆ ಪೋಸ್ ನೀಡಿದ್ದಾರೆ. ಈ ಫೋಟೋ ವೈರಲ್ ಆಗ್ತಾ ಇದ್ದಂತೆ ಅರಣ್ಯಾಧಿಕಾರಿಗಳು ಹನುಮೇಶ್‌ನನ್ನ ಹುಡುಕಿಕೊಂಡು ಬಂದು ವಾರ್ನಿಂಗ್ ನೀಡಿದ್ದಾರೆ.
ಅರಣ್ಯಾಧಿಕಾರಿಗಳು ಹನುಮೇಶನನ್ನು ಆತನ ಸಾಮಾಜಿಕ ಜಾಲತಾಣದ ಮೂಲಕ ಪತ್ತೆ ಹಚ್ಚಿ, ಆತನ ಮನೆಗೆ ಬಂದು ಹಾವುಗಳನ್ನು ಹಿಡಿಯುವುದು ಮತ್ತು ಅವುಗಳನ್ನು ಕಾಡಿಗೆ ಮರಳಿ ಬಿಡುವ ನೈತಿಕ ವಿಧಾನಗಳನ್ನು ವಿವರಿಸಿದ್ದಾರೆ.
ಇನ್ನು ಈ ಬಗ್ಗೆ ವಿಜಯಪುರದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ್ ಮಾಹಿತಿಯನ್ನ ನೀಡಿದ್ದು, ಹನುಮೇಶ್ ತನ್ನ ತಪ್ಪು ಒಪ್ಪಿಕೊಂಡಿದ್ದಾನೆ ಜೊತೆಗೆ ತನಗೆ ಬೇರೆ ಯಾವುದೇ ಉದ್ದೇಶವಿಲ್ಲ ಎಂದು ಹೇಳಿದ್ದಾನೆ. ಹೀಗಾಗಿ ಅವನಿಗೆ ಎಚ್ಚರಿಕೆ ನೀಡಿದ್ದೇವೆ. ನಾವು ಅವನಿಗೆ ಹಾವು ಹಿಡಿಯುವ ಕಿಟ್ ಸಹ ನೀಡಿದ್ದೇವೆ. ಕಿಟ್‌ನಲ್ಲಿ ಕೋಲು, ಸುರಕ್ಷತಾ ವಸ್ತು ಮತ್ತು ಹಾವನ್ನು ಸಾಗಿಸಲು ಕವರ್ ಇದೆ ಎಂದು ಹೇಳಿದ್ದಾರೆ.