Thursday, November 28, 2024
ಸುದ್ದಿ

ನೂತನ ಸಂಸತ್ ಭವನ : ವಿಶೇಷವಾಗಿದೆ ಮೂರು ಮುಖ್ಯದ್ವಾರಗಳ ಹೆಸರು..!? – ಕಹಳೆ ನ್ಯೂಸ್

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ 9 ವರ್ಷ ಪೂರೈಸಿದ ಈ ಸಂದರ್ಭದಲ್ಲಿ ಕಣ್ಮನ ಸೆಳೆಯುವ ಭವ್ಯ ಸಂಸತ್ ಭವನ ಲೋಕಾರ್ಪಣೆಗೆ ಸಜ್ಜಾಗಿದೆ.. ಇಡೀ ದೇಶವೇ ಕಾದು ಕುಳಿತಿದ್ದ ಆ ಅಪೂರ್ವ ಕ್ಷಣ ಬಂದಾಗಿದ್ದು, ಸುಮಾರು 13 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿರೋ ನಾಲ್ಕು ಅಂತಸ್ಥಿನ ಸಂಸತ್ ಕಟ್ಟಡವನ್ನ ಪ್ರಧಾನಿ ನರೇಂದ್ರ ಮೋದಿ ಇಂದು ಉದ್ಘಾಟನೆ ಮಾಡಲಿದ್ದಾರೆ.

ನಾಲ್ಕು ಅಂತಸ್ತಿನ ಈ ಕಟ್ಟಡದಲ್ಲಿ ಮೂರು ಮುಖ್ಯದ್ವಾರಗಳನ್ನ ಮಾಡಲಾಗಿದೆ. ಅದಕ್ಕೆ ಜ್ಞಾನ ದ್ವಾರ, ಶಕ್ತಿ ದ್ವಾರ ಮತ್ತು ಕರ್ಮ ದ್ವಾರ ಎಂದು ಹೆಸರಿಡಲಾಗಿದೆ. ಕಟ್ಟಡದ ಒಳಾಂಗಣದಲ್ಲಿ ಸಚಿವರಿಗೆ, ಅಧಿಕಾರಿಗಳಿಗೆ ಕಚೇರಿಯ ವ್ಯವಸ್ಥೆಯಿದೆ. ದೊಡ್ಡ ದೊಡ್ಡ ಸಭಾಂಗಣಗಳು, ಕಚೇರಿಗಳು, ಕೋಣೆಗಳು ಪಾರ್ಕಿಂಗ್ ವ್ಯವಸ್ಥೆ ನೂತನ ಕಟ್ಟಡದಲ್ಲಿದೆ. ಇದಲ್ಲದೆ ಸಾಂವಿಧಾನಿಕ ಭವನ ಅನ್ನೋ ಮತ್ತೊಂದು ಹಾಲ್ ಕೂಡಾ ಇದೆ.. ಕಚೇರಿಗಳಂತೂ ವಿಶಾಲವಾಗಿ ಹಾಗೂ ಅತ್ಯಾಧುನಿಕ ವಿನ್ಯಾಸದಿಂದ ಕೂಡಿವೆ. ಆಡಿಯೋ ಮತ್ತು ವಿಡಿಯೋ ಕಾನ್ಫರೆನ್ಸ್ ನಡೆಸಲು ಸಭಾಂಗಣಗಳಲ್ಲಿ ವ್ಯವಸ್ಥೆ ಕಲ್ಪಿಸಲಾಗಿದ್ದು, ದೊಡ್ಡ ಗ್ರಂಥಾಲಯವನ್ನ ಕೂಡ ನಿರ್ಮಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು


ಕಟ್ಟಡದ ಎತ್ತರ – 50 ಮೀಟರ್
ಸಂಸತ್ ಭವನ ಸುತ್ತಳತೆ- 13 ಎಕರೆ
ಒಟ್ಟು ವಿಸ್ತೀರ್ಣ- 64,500 ಚದರ್ ಮೀಟರ್
ನಿರ್ಮಾಣ ವಿಸ್ತೀರ್ಣ – 58,700 ಚದರ ಮೀಟರ್
ಒಟ್ಟು ನಿರ್ಮಾಣ ವೆಚ್ಚ – 971 ಕೋಟಿ ರೂಪಾಯಿ
ಸಂಸದರ ಆಸನ ಸಾಮರ್ಥ್ಯ- 1,224
ಹೆಚ್ಚುವರಿ ಆಸನ -1,140
ಲೋಕಸಭಾ ಸದಸ್ಯರಿಗೆ ಆಸನ ವ್ಯವಸ್ಥೆ- 888
ರಾಜ್ಯಸಭೆ ಸದಸ್ಯರಿಗೆ ಆಸನ ವ್ಯವಸ್ಥೆ- 384
ಪ್ರದರ್ಶಿತ ಕಲಾಕೃತಿ- 5,000
ಕಬ್ಬಿಣ ಬಳಕೆ- 26,045 ಮೆಟ್ರಿಕ್ ಟನ್
ಸಿಮೆಂಟ್ ಬಳಕೆ – 63,807 ಮೆಟ್ರಿಕ್ ಟನ್
ಉದ್ಯೋಗ ಸೃಷ್ಟಿ- 23,04,095
ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ – 5000
ಟಾಟಾ ಪ್ರಾಜೆಕ್ಟ್ ಲಿಮಿಟೆಡ್‌ನಿಂದ ನಿರ್ಮಿಸಲಾಗಿರುವ ಭವ್ಯ ಭವನಕ್ಕೆ ಬರೋಬ್ಬರಿ 1200 ಕೋಟಿ ರೂಪಾಯಿ ವೆಚ್ಛ ತಗುಲಿದೆ..

ಜಾಹೀರಾತು
ಜಾಹೀರಾತು
ಜಾಹೀರಾತು