Recent Posts

Monday, January 20, 2025
ಸುದ್ದಿ

ನೆರೆಯ ನೆಪದಲ್ಲಿ ಸರ್ಕಾರ ದೇವಸ್ಥಾನಗಳ ಹಣ ಲೂಟಿ: ಪ್ರಭಾಕರ್ ಭಟ್ – ಕಹಳೆ ನ್ಯೂಸ್

ಮಂಗಳೂರು: ಕಲ್ಲಡ್ಕ ಶಾಲಾ ಮಕ್ಕಳ ಅನ್ನಕ್ಕೆ ಕಲ್ಲು ಹಾಕಿದ ಸರಕಾರ ನೆರೆ ಸಂತ್ರಸ್ತರ ಹೆಸರಿನಲ್ಲಿ ಹಿಂದೂ ದೇವಸ್ಥಾನಗಳ ಹಣವನ್ನು ಲೂಟಿ ಮಾಡುತ್ತಿದೆ ಇದನ್ನು ನಾವು ಖಂಡಿಸುತ್ತೇವೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅದ್ಯಕ್ಷ ಡಾ! ಪ್ರಭಾಕರ ಭಟ್ ಹೇಳಿದರು.

ಮಾಧ್ಯಮದ ಜೊತೆ ಮಾತನಾಡಿದ ಸಂಧರ್ಭದಲ್ಲಿ ಕೊಡುಗು ಮತ್ತು ಕೇರಳದ ನೆರೆ ಸಂತ್ರಸ್ತರಿಗೆ ನೆರವು ನೀಡಿದರಲ್ಲಿ ಸಂಸ್ಥೆ ಮುಂಚೂಣಿಯಲ್ಲಿದೆ. ಈ ಹಿಂದೆಯೂ ಅನೇಕ ಸಂಧರ್ಭದಲ್ಲಿ ಸಂತ್ರಸ್ತರಿಗೆ ಸಹಾಯ ಮಾಡಿದೆ ಮುಂದೆಯೂ ಮಾಡುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಆದರೆ ಸರಕಾರ ಮಾತ್ರ ದ್ವಂದ್ವ ನೀತಿ ಅನುಸರಿಸುತ್ತಿದೆ. ದೇವಸ್ಥಾನದ ಹಣವನ್ನು ಶಾಲಾ ಮಕ್ಕಳ ಊಟಗಳಿಗೆ ಬಳಸುಲು ಸಾಧ್ಯವಿಲ್ಲ ಎಂದ ಸರಕಾರವೇ ಈಗ ನೆರೆ ಸಂತ್ರಸ್ತರಿಗೆ ನೆರವು ಎಂಬ ನೆಪವೊಡ್ಡಿ ದೇವಸ್ಥಾನದ ಹಣವನ್ನು ಲೂಟಿಮಾಡುತ್ತಿದೆ ಎಂದು ಆರೋಪ ವ್ಯಕ್ತಪಡಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಹಿಂದೂಗಳ ದೇವಸ್ಥಾನಗಳ ಹಣವನ್ನು ಮಾತ್ರ ಉಪಯೋಗಿಸುವ ಸರಕಾರ ಮಸೀದಿ ಚರ್ಚ್ಗಳ ಹಣವನ್ನು ಯಾಕೆ ಬಳಸುತ್ತಿಲ್ಲ. ಹಾಗಾದರೆ ಇದು ಹಿಂದೂ ರಾಷ್ಟ್ರ ಅಂತ ಸರಕಾರ ಒಪ್ಪಿಕೊಳ್ಳುತ್ತಾ, ಹಾಗಾದರೆ ಸಂತೋಷ ಎಂದು ಅವರು ಹೇಳಿದರು. ಮಸೀದಿ ಚಚ್‌ಗಳ ವಕ್ಪ್ ಬೋರ್ಡ್ ನಿರ್ಮಾಣ ಮಾಡಿದಂತೆ ಸರಕಾರ ಹಿಂದೂ ವಕ್ಪ್ ಬೋರ್ಡ್ ಸ್ಥಾಪಿಸಲಿ ಎಂದು ಅವರು ಹೇಳಿದರು.