ನಗರದಲ್ಲಿ ಬೀದಿ ನಾಯಿಗಳ ಉಪಟಳ ಹೆಚ್ಚಾಗುತ್ತಿದೆ ಎಂಬ ದೂರುಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.
ನಗರದ ಶಕ್ತಿನಗರ, ಪ್ರೀತಿನಗರ, ಬಿಕರ್ನಕಟ್ಟೆ, ಉರ್ವಸ್ಟೋರ್, ಪಚ್ಚನಾಡಿ, ವಾಮಂಜೂರು, ಕದ್ರಿ, ಕೊಟ್ಟಾರ, ಸುರತ್ಕಲ್, ದಡ್ಡಲಕಾಡು, ಮಣ್ಣಗುಡ್ಡೆ, ಉರ್ವ ಸಹಿತ ವಿವಿಧ ಕಡೆಗಳಲ್ಲಿ ಬೀದಿನಾಯಿಗಳ ಕಾಟ ಹೆಚ್ಚಾಗುತ್ತಿದೆ.
ವಾಹನಗಳನ್ನು ಅಟ್ಟಾಡಿಸುತ್ತಿದ್ದು, ಚಾಲಕರಿಗೆ ಅಪಾಯ ಒಡ್ಡುತ್ತಿದೆ. ಇನ್ನು, ನಾಯಿ, ಬೆಕ್ಕಿನ ಮರಿಗಳನ್ನು ಮನೆಗಳಲ್ಲಿ ಸಾಕಲು ಸಾಧ್ಯವಾಗದ ಮಂದಿ ಪಚ್ಚನಾಡಿ, ಮಂಗಳಾ ಜ್ಯೋತಿ, ಆಶ್ರಯನಗರ, ಸಂತೋಷ್ ನಗರ, ದೇವಿನಗರ ಮುಂತಾದ ಕಡೆಗಳಲ್ಲಿ ಬಿಡುತ್ತಿದ್ದಾರೆ. ಈ ರೀತಿ ನಾಯಿ, ಬೆಕ್ಕಿನ ಮರಿಗಳನ್ನು ತಂದು ಬಿಡುವವುದನ್ನು ಖಂಡಿಸಿ ಮಂಗಳಜ್ಯೋತಿ ನಗರದಲ್ಲಿ ಬ್ಯಾನರ್‌ವೊಂದನ್ನು ಇತ್ತೀಚೆಗೆ ಅಳವಡಿಸಲಾಗಿತ್ತು.
ಈ ಬಗ್ಗೆ ಮಹಾನಗರ ಪಾಲಿಕೆ ಅಲೋಚಿಸಿ ಸೂಕ್ತ ಪರಿಹಾರವನ್ನು ನೀಡಬೇಕಾಗಿ ಸಾರ್ವಜನಿಕರ ಆಗ್ರಹ .