Wednesday, November 27, 2024
ಸುದ್ದಿ

ತೆರಿಗೆ ವಸೂಲಾತಿ ಪಾರದರ್ಶಕತೆಗಾಗಿ ಗ್ರಾ.ಪಂ.ಗಳಲ್ಲಿ ಪಿಒಎಸ್ ಯಂತ್ರ –ಕಹಳೆ ನ್ಯೂಸ್

ಗ್ರಾಮ ಪಂಚಾಯತ್‌ಗಳಲ್ಲಿ ತೆರಿಗೆ ವಸೂಲಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರುವುದಕ್ಕಾಗಿ ಗ್ರಾಮೀಣಾಭಿವೃದ್ಧಿ ಇಲಾಖೆ ಆ್ಯಂಡ್ರಾಯ್ಡ ಪಿಒಎಸ್ ಮೆಷಿನ್ ಗಳ ಬಳಕೆಯನ್ನು ಕಡ್ಡಾಯ ಗೊಳಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ರಾಜ್ಯದಲ್ಲಿ ಮೊದಲ ಹಂತದಲ್ಲಿ ಒಟ್ಟು 2 ಸಾವಿರ ಗ್ರಾ.ಪಂ. ಗಳಿಗೆ ಪಂಚಾಯತ್ ರಾಜ್ ಇಲಾಖೆಯಿಂದ ಮೆಷಿನ್ ಒದಗಿಸಲಾಗಿದೆ.

ಗ್ರಾಮೀಣ ಜನರಿಗೆ ವಿವಿಧ ಇಲಾಖೆಗಳ ಸೇವೆಗಳ ದಾಖಲೆಗಳನ್ನು ತ್ವರಿತವಾಗಿ ಮತ್ತು ಸಮೀಪದಲ್ಲಿ ಒಂದೇ ಸೂರಿ ನಡಿ ಒದಗಿಸುವ ಉದ್ದೇಶದಿಂದ ಬಾಪೂಜಿ ಸೇವಾ ಕೇಂದ್ರಗಳನ್ನು ಈಗಾಗಲೇ ಎಲ್ಲ ಗ್ರಾ.ಪಂ. ಗಳಲ್ಲಿ ಸ್ಥಾಪಿಸಲಾಗಿದೆ. ಜತೆಗೆ ಆನ್‌ಲೈನ್ ಮೂಲಕ ಸೇವೆ ಒದಗಿಸಲು ಬಾಪೂಜಿ ಸೇವಾ ಕೇಂದ್ರ ತಂತ್ರಾAಶವನ್ನೂ ಅಭಿವೃದ್ಧಿಪಡಿಸಿ ಅನುಷ್ಠಾನಗೊಳಿಸಲಾಗಿದೆ.