Wednesday, November 27, 2024
ಸುದ್ದಿ

ಶ್ರೀ ರಾಮ ಬಾಲಗೋಕುಲದ ಮಕ್ಕಳಿಗೆ ಪುಸ್ತಕ ವಿತರಿಸಿದ ಶಾಸಕ ಡಾ. ಭರತ್ ಶೆಟ್ಟಿ – ಕಹಳೆ ನ್ಯೂಸ್

ಮಂಗಳೂರು : ಹಿಂದೂ ಸಂಸ್ಕøತಿ ಸಂಸ್ಕಾರಗಳನ್ನು ಎಳೆಯರ ಮನಸ್ಸಿನಲ್ಲಿ ಮೂಡುವಂತೆ ಪ್ರೆರೇಪಿಸುವ ಶಿಕ್ಷಣ ಬಾಲಗೋಕುಲ ಕೇಂದ್ರಗಳಲ್ಲಿ ಸಿಗುತ್ತದೆ. ಉತ್ಕ್ರಷ್ಟ ಭಾರತೀಯ ಪರಂಪರೆಯ ನಡವಳಿಕೆ ಸಮಾಜವನ್ನು ಒಗ್ಗೂಡಿಸುತ್ತದೆ. ಒಡೆದು ಆಳುವ ನೀತಿಗೆ ನಾವು ಚದುರಬಾರದು. ಸಾಂಘಿಕ ಶಕ್ತಿಯಾಗಿ ಪ್ರೀತಿ ಗೌರವಗಳ ಅಮೃತ ಭಾವನೆಯಿಂದ ಸಮಾಜದಲ್ಲಿ ಶಕ್ತಿಶಾಲಿ ಹಿಂದೂ ಸಮಾಜವಾಗಬೇಕು ಎಂದು ಶ್ರೀ ರಾಮ ಯುವಕ ಸಂಘ ಪ್ರಾಯೋಜಿಸಿದ ಶ್ರೀ ರಾಮ ಬಾಲಗೋಕುಲದ ಮಕ್ಕಳಿಗೆ ಪುಸ್ತಕ ವಿತರಿಸಿ ಮಂಗಳೂರು ನಗರ ಉತ್ತರದ ಶಾಸಕರಾದ ಡಾ. ಭರತ್ ಶೆಟ್ಟಿ ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು


ಜಾತಿ ವೈಶಮ್ಯಗಳು ವಿನಾಶಕಾರಿ ಪ್ರವೃತ್ತಿಯಾಗುತ್ತದೆ. ಸದ್ರಡ ಹಿಂದೂ ಸಮಾಜ ನಿರ್ಮಾಣಕ್ಕೆ ಎಲ್ಲರೂ ಒಂದಾಗಬೇಕು ದ್ವೇಷ ಏನನ್ನೂ ಸಾಧಿಸದು ಪ್ರೀತಿ ಸಾಧನೆಯ ಪ್ರತೀಕ ನಾವೆಲ್ಲಾ ಪ್ರೀತಿಯಿಂದ ಬಾಳೋಣ ಎಂದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಭಾರತ ಸರಕಾರದ ನಾಗರಿಕ ವಿಮಾನಯಾನ ಇಲಾಖೆಯ ಉಪ ನಿರ್ದೇಶಕ ರಾದ ಜಗದೀಶ್ ಬಳ್ಳಾಲಬೈಲ್ ಶುಭಾಶಯಗಳು ಹಾರೈಸಿದರು. ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಜನಾರ್ದನ ಗೌಡ ಮುಚ್ಚೂರು ಪ್ರಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಸಂಘದ ಅಧ್ಯಕ್ಷರಾದ ಆನಂದ್. ಮಿಜಾರ್ ಶಕ್ತಿಕೇಂದ್ರದ ಅಧ್ಯಕ್ಷ ಗೋಪಾಲ್ ಕಂದಲಬೆಟ್ಟು ಉಪಸ್ಥಿತರಿದ್ದರು. ಗ್ರಾಮ ಪಂಚಾಯತ್ ಸದಸ್ಯರಾದ ರೂಪೇಶ್ ಕುಮಾರ್ ಕಾರ್ಯಕ್ರಮ ನಿರೂಪಿಸಿ ಬಾಲಗೋಕುಲದ ಮಾತಾಜಿಯವರಾದ ಸರಿತಾ ಮಾಲತಿ, ಧನ್ಯ, ಪೂಜಾ, ಚಂದ್ರಿಕಾ, ದಿವ್ಯಾ ನಿರ್ವಹಣೆಗೈದರು.116 ಮಂದಿ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಲಾಯಿತು

ಜಾಹೀರಾತು
ಜಾಹೀರಾತು
ಜಾಹೀರಾತು