ವಾರದ ರಜೆ, ಶಾಲಾರಂಭದ ರಜೆ ಹಿನ್ನೆಲೆಯಲ್ಲಿ ರವಿವಾರ ಕರಾವಳಿಯ ಪ್ರಮುಖ ದೇವಸ್ಥಾನಗಳಲ್ಲಿ ಭಕ್ತರ ದಂಡೇ ಹರಿದು ಬಂದಿದೆ.
ದ.ಕ. ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ, ಶ್ರೀಕ್ಷೇತ್ರ ಧರ್ಮಸ್ಥಳ, ಸೌತಡ್ಕ ಶ್ರೀ ಮಹಾಗಣಪತಿ, ಕಟೀಲು ದುರ್ಗಾಪರಮೇಶ್ವರೀ, ಉಡುಪಿ ಜಿಲ್ಲೆಯ ಶ್ರೀ ಕೃಷ್ಣಮಠ, ಆನೆಗುಡ್ಡೆ ಶ್ರೀ ವಿನಾಯಕ, ಕೊಲ್ಲೂರು ಶ್ರೀ ಮುಕಾಂಬಿಕಾ ದೇಗುಲ ಸಹಿತ ಪ್ರಮುಖ ದೇಗುಲಗಳಿಗೆ ಭಕ್ತರು ಭೇಟಿ ನೀಡಿ ಶ್ರೀ ದೇವರ ದರ್ಶನÀ ಪಡೆದು, ಅನ್ನಪ್ರಸಾದ ಸ್ವೀಕರಿಸಿದ್ದಾರೆ.
ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಮತ್ತು ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ರವಿವಾರ ಭಕ್ತರ ಸಂಖ್ಯೆ ಹೆಚ್ಚಾಗಿ ಕಂಡುಬAದಿದ್ದು, ಸುಡು ಬಿಸಿಲನ್ನು ಲೆಕ್ಕಿಸದೆ ಭಕ್ತರು ಆಗಮಿಸಿ ಶ್ರೀ ದೇವರ ದರ್ಶನ ಪಡೆದಿದ್ದಾರೆ. ಅನ್ನ ಪ್ರಸಾದ ಸ್ವೀಕರಿಸಲು ಆದಿ ಸುಬ್ರಹ್ಮಣ್ಯದಲ್ಲೂ ಭೋಜನ ಪ್ರಸಾದ ವಿತರಣೆ ವ್ಯವಸ್ಥೆ ಮಾಡಲಾಗಿತ್ತು.
ಧರ್ಮಸ್ಥಳ ಮತ್ತು ಸುಬ್ರಹ್ಮಣ್ಯ ಪೇಟೆಯಲ್ಲಿ ವಾಹನಗಳ ಓಡಾಟವೂ ಅಧಿಕವಾಗಿತ್ತು. ರಥ ಬೀದಿ, ಹೊರಾಂಗಣ ಭಕ್ತರಿಂದ ತುಂಬಿದ್ದು, ವಾಹನ ಪಾರ್ಕಿಂಗ್ ಪ್ರದೇಶವೂ ವಾಹನಗಳಿಂದ ಭರ್ತಿಯಾಗಿದ್ದವು.
ಉಡುಪಿ ಜಿಲ್ಲೆಯ ಶ್ರೀಕೃಷ್ಣಮಠ, ಆನೆಗುಡ್ಡೆಯ ವಿನಾಯಕ ದೇಗುಲ, ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇಗುಲ ಸಹಿತ ಪ್ರಮುಖ ದೇವಾಲಯಗಳಿಗೆ ಭಾರೀ ಸಂಖ್ಯೆಯ ಭಕ್ತರು ಭೇಟಿ ನೀಡಿ ಶ್ರೀ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.
ಇನ್ನೂ ಮಂಗಳೂರಿನ ಉಳ್ಳಾಲ, ಪಣಂಬೂರು, ಮಲ್ಪೆ, ತ್ರಾಸಿ ಮರವಂತೆ ಬೀಚ್‌ಗಳಲ್ಲಿ ರವಿವಾರ ಭಾರೀ ಸಂಖ್ಯೆಯ ಪ್ರವಾಸಿಗರು ಭೇಟಿ ನೀಡಿ ರಜೆಯ ಖುಷಿಯನ್ನು ಸಂಭ್ರಮಿಸಿದ್ದಾರೆ. ಬೇಸಗೆ ರಜೆ ಮುಕ್ತಾಯದ ಹಿನ್ನೆಲೆಯಲ್ಲಿ ಕರಾವಳಿಯ ಪ್ರಮುಖ ಪ್ರವಾಸಿ ತಾಣಗಳಿಗೆ ಪ್ರವಾಸಿಗರ ದಂಡೇ ಹರಿದು ರ‍್ತಾ ಇದೆ.