ಯಕ್ಷಧ್ರುವ ಪಟ್ಲ ಫೌಂಡೇಶನ್ ವತಿಯಿಂದ ‘ಯಕ್ಷಧ್ರುವ ಪಟ್ಲ ಸಂಭ್ರಮ 2023’ ಕಾರ್ಯಕ್ರಮ ಮಂಗಳೂರಿನ ಅಡ್ಯಾರ್ ಗಾರ್ಡನ್‌ನಲ್ಲಿ ಅದ್ದೂರಿಯಾಗಿ ನಡೆದಿದೆ. ಯಕ್ಷಧ್ರುವ ಪಟ್ಲ ಸಂಭ್ರಮ 2023ದಲ್ಲಿ ವಿಧ್ಯಾರ್ಥಿ ಯಕ್ಷಗಾನ ಸ್ಪರ್ಧೆಯನ್ನ ಆಯೋಜಿಸಲಾಗಿದ್ದು ವಿವಿಧ ವಿದ್ಯಾಸಂಸ್ಧೆಯ ಹಲವು ವಿದ್ಯಾರ್ಥಿಗಳು ಭಾಗಿಯಾಗಿದ್ದು, ಯಕ್ಷಗಾನ ಸ್ಪರ್ಧೆಯನ್ನ ವಿಜೇತರ ಪಟ್ಟಿ ಬಿಡುಗಡೆಯಾಗಿದೆ.
ಹೈಸ್ಕೂಲ್ ವಿಭಾಗದಲ್ಲಿ 12 ಹಾಗು ಕಾಲೇಜು ವಿಭಾಗದಲ್ಲಿ 22 ತಂಡಗಳು ಭಾಗವಹಿಸಿದ್ದವು. ಹಿಮ್ಮೇಳ ಕಲಾವಿದರಾಗಿ ಹೊರಗಿನವರನ್ನು ಬಳಸಿಕೊಳ್ಳ ಅವಕಾಶವನ್ನ ಮಾಡಿಕೊಡಲಾಗಿತ್ತು. ಆದರೂ ಹಲವು ಶಾಲಾ ಕಾಲೇಜುಗಳ ತಂಡದಲ್ಲಿ ವಿದ್ಯಾರ್ಥಿಗಳು ಹಾಗು ಶಿಕ್ಷಕರು ಭಾಗವಹಿಸುವ ಮೂಲಕ ಹಿಮ್ಮೇಳದಲ್ಲಿದ್ದು ಗಮನ ಸೆಳೆದಿದ್ದಾರೆ.
ಹೈಸ್ಕೂಲ್ ವಿಭಾಗ: (ಕುಂಬ್ಳೆ ಸುಂದರ ರಾವ್ ವೇದಿಕೆ)
1. ಸಮಗ್ರ ತಂಡ ಪ್ರಶಸ್ತಿ
ಪ್ರಥಮ – ಆಳ್ವಾಸ್ ಆಂಗ್ಲಮಾಧ್ಯಮ ಪ್ರೌಢಶಾಲೆ ಮೂಡಬಿದಿರೆ(ಶ್ರೀ ಹರಿಲೀಲಾ)
ದ್ವಿತೀಯ – ಲೂಡ್ಸ್ ಸೆಂಟ್ರಲ್ ಸ್ಕೂಲ್ ಬಿಜೈ (ತರಣಿ ಸೇನಾ)
ತೃತೀಯ – ಶ್ರೀ ರಾಮ ವಿದ್ಯಾಸಂಸ್ಧೆ ಫರಂಗಿಪೇಟೆ(ಮೋಕ್ಷ ಸಂಗ್ರಾಮ )
ಶಿಸ್ತಿನ ತಂಡ – ಶ್ರೀಧರ್ಮಸ್ಧಳ ಮಂಜುನಾಥೇಶ್ವರ ಹೈಸ್ಕೂಲ್ ಉಜಿರೆ(ರತಿ ಕಲ್ಯಾಣ)
2 .ಪುಂಡುವೇಷ
ಪ್ರಥಮ – ಚಮನ್ ಎನ್.ಎಸ್ (ತರಣಿಸೇನ) – ಲೂಡ್ಸ್ ಸೆಂಟ್ರಲ್ ಸ್ಕೂಲ್ ಬಿಜೈ
ದ್ವಿತೀಯ – ಗೌತಮ್ ( ಸುದರ್ಶನ) ಆಳ್ವಾಸ್ ಆಂಗ್ಲಮಾಧ್ಯಮ ಶಾಲೆ ಮೂಡಬಿದ್ರೆ
3. ಸ್ತ್ರೀ ವೇಷ
ಪ್ರಥಮ – ಚಂದನಾ (ಸರಮೆ – ಶ್ರೀರಾಮ ವಿದ್ಯಾ ಸಂಸ್ಧೆ ಪರಂಗಿಪೇಟೆ
ದ್ವಿತೀಯ- ಅಭಿಜ್ಞಾ ( ಲಕ್ಷ್ಮೀ ) – ಆಳ್ವಾಸ್ ಆಂಗ್ಲ ಮಾಧ್ಯಮ ಫ್ರೌಢ ಶಾಲೆ ಮೂಡಬಿದ್ರೆ.
4. ರಾಜವೇಷ
ಪ್ರಥಮ – ಆದಿತ್ಯ ಹೊಳ್ಳ (ಕೌಂಡ್ಲಿಕ) ಶ್ರೀಧರ್ಮಸ್ಧಳ ಮಂಜುನಾಥೇಶ್ವರ ಹೈಸ್ಕೂಲ್ ಉಜಿರೆ
ದ್ವಿತೀಯ – ಮೇಘನಾ (ಅರ್ಜುನ) ಶ್ರೀ ಗುರುದೇವಾ ಆಂಗ್ಲ ಮಾಧ್ಯಮ ಶಾಲೆ ಒಡಿಯೂರು
5. ಬಣ್ಣದ ವೇಷ
ಪ್ರಥಮ – ಆಯುಷ್-( ಶತ್ರುಪ್ರಸೂಧನ) – ಆಳ್ವಾಸ್ ಆಂಗ್ಲಮಾಧ್ಯಮ ಫ್ರೌಢಶಾಲೆ ಮೂಡಬಿದ್ರೆ
ದ್ವಿತೀಯ – ಸ್ತ್ರೀ ವೇಷ – ದೀಕ್ಷಿತ್-(ರಾವಣ) – ಶ್ರೀರಾಮ ವಿದ್ಯಾಸಂಸ್ಧೆ ಫರಂಗಿಪೇಟೆ
6. ಹಾಸ್ಯವೇಷ
ಪ್ರಥಮ – ರಶ್ಮಿತಾ(ರಾವಣದೂತ) – ಶ್ರೀ ರಾಮ ವಿದ್ಯಾಸಂಸ್ಧೆ ಫರಂಗಿಪೇಟೆ
ದ್ವಿತೀಯ – ಮಂಥನ್(ದೇವದೂತ) – ಆಳ್ವಾಸ್ ಆಂಗ್ಲಮಾಧ್ಯಮ ಫ್ರೌಢಶಾಲೆ ಮೂಡಬಿದ್ರೆ
7 .ತಂಡದ ಶ್ರೇಷ್ಠ ಕಲಾವಿದರಾಗಿ ಗುರುತಿಸಲ್ಪಟ್ಟವರು
ಬ್ರಾಹ್ಮೀ ಮಯ್ಯ (ಕೃಷ್ಣ), ಶ್ರೀಜ ಎಸ್.ಎ. (ಮಾತಾರ್ಂಡತೇಜ), ಪ್ರೀತಿ (ಮಾಲಿನಿ), ಕಾರ್ತಿಕ್ (ದೇವೇಂದ್ರ), ಅಭಿಜ್ಞಾ (ಲಕ್ಷಿ್ಮೀ), ಚಮನ್ ಎನ್.ಎಸ್. (ತರಣಿಸೇನ), ಆದಿತ್ಯ ಹೊಳ್ಳ (ಕೌಂಡ್ಲಿಕ), ಮೇಘನಾ (ಅರ್ಜುನ), ಪ್ರಗತಿ ( ವಿಭೀಷಣ), ಎಸ್. ಸಂದೇಶ್ (ಕೃಷ್ಣ), ಉಪಾಶಸನಾ ಪಿ (ಲಕ್ಷಿ್ಮೀ), ಪ್ರಖ್ಯಾತ್ (ಬಾಲಕೃಷ್ಣ).
ಹೈಸ್ಕೂಲ್ ವಿಭಾಗದ ತೀರ್ಪುಗಾರರು : ವಾಟೆಪಡ್ಪು ವಿಷ್ಣುಶರ್ಮ, ದಿವಿತ್ ಎಸ್. ಕೋಟ್ಯಾನ್, ಪೆರಾಡಿ
ಕಾಲೇಜು ವಿಭಾಗ :(ಡಾ. ಪುತ್ತೂರು ಶ್ರೀಧರ ಭಂಡಾರಿ ವೇದಿಕೆ )
1) ಸಮಗ್ರ ತಂಡ ಪ್ರಶಸ್ತಿ
ಪ್ರಥಮ : ಎನ್.ಎಂ.ಎ.ಎಂ ತಾಂತ್ರಿಕ ಮಹಾವಿದ್ಯಾಲಯ, ನಿಟ್ಟೆ (ಶರಣ ಸೇವಾರತ್ನ), ನಿರ್ದೇಶನ – ರಕ್ಷಿತ್ ಶೆಟ್ಟಿ ಪಡ್ರೆ
ದ್ವಿತೀಯ : ಆಳ್ವಾಸ್ ಕಾಲೇಜು, ಮೂಡಬಿದ್ರೆ (ನರಶಾರ್ದೂಲ), ನಿರ್ದೇಶನ – ಪ್ರಸಾದ್ ಚೇರ್ಕಾಡಿ, ಆದಿತ್ಯ ಅಂಬಲಪಾಡಿ
ತೃತೀಯ : ಗೋವಿಂದದಾಸ ಕಾಲೇಜು, ಸುರತ್ಕಲ್ (ನರಕಾಸುರ ಮೋಕ್ಷ), ನಿರ್ದೇಶನ – ಶ್ರೀಮತಿ ಪೂರ್ಣಿಮ ಯತೀಶ್ ರೈ
ಶಿಸ್ತಿನ ತಂಡ : ಕೆನರಾ ಕಾಲೇಜು (ತರಣಿಸೇನ ಕಾಳಗ), ನಿರ್ದೇಶನ – ರಾಕೇಶ್ ರೈ ಅಡ್ಕ
2) ಪುಂಡು ವೇಷ
ಪ್ರಥಮ : ಪ್ರಶಾಂತ್ ಐತಾಳ್ (ಸುದರ್ಶನ – ಶ್ರೀಹರಿಲೀಲಾ) – ಎಸ್.ಡಿ.ಎಂ. ಲಾ ಕಾಲೇಜು, ಮಂಗಳೂರು
ದ್ವಿತೀಯ : ವರುಣ್ ಆಚಾರ್ಯ (ತರಣಿಸೇನ – ಶರಣ ಸೇವಾರತ್ನ) – ಎನ್.ಎಂ.ಎ.ಎಂ. ತಾಂತ್ರಿಕ ಮಹಾವಿದ್ಯಾಲಯ, ನಿಟ್ಟೆ
3) ಸ್ತ್ರೀ ವೇಷ
ಪ್ರಥಮ : ಈಶ್ವರಿ ಆರ್. ಶೆಟ್ಟಿ (ಯಕ್ಷಿ ತಾಟಕಿ – ನರಶಾರ್ದೂಲ) – ಆಳ್ವಾಸ್ ಕಾಲೇಜು, ಮೂಡಬಿದ್ರೆ
ದ್ವಿತೀಯ : ಪುನೀತ್ (ದಾಕ್ಷಾಯಿಣಿ – ದಕ್ಷಯಜ್ಞ) – ಸರಕಾರಿ ಪ್ರಥಮ ದರ್ಜೆ ಕಾಲೇಜು, ವಾಮದಪದವು
4) ರಾಜ ವೇಷ
ಪ್ರಥಮ : ಅನ್ವೇಶ್ ಆರ್. ಶೆಟ್ಟಿ (ಶ್ರೀರಾಮ – ಶರಣ ಸೇವಾರತ್ನ) – ಎನ್.ಎಂ.ಎ.ಎಂ. ತಾಂತ್ರಿಕ ಮಹಾವಿದ್ಯಾಲಯ, ನಿಟ್ಟೆ
ದ್ವಿತೀಯ : ಪ್ರಜ್ವಲ್ ಶೆಟ್ಟಿ (ಸುಂದಾಸುರ – ನರಶಾರ್ದೂಲ) – ಆಳ್ವಾಸ್ ಕಾಲೇಜು, ಮೂಡಬಿದ್ರೆ
5) ಬಣ್ಣದ ವೇಷ
ಪ್ರಥಮ : ವೈಶಾಖ್ (ನರಕಾಸುರ – ನರಕಾಸುರ ಮೋಕ್ಷ) ಗೋವಿಂದದಾಸ ಕಾಲೇಜು, ಸುರತ್ಕಲ್
ದ್ವಿತೀಯ : ಜೀವನ್ ಶೆಟ್ಟಿ (ತಾಟಕಿ – ನರಶಾರ್ದೂಲ) – ಆಳ್ವಾಸ್ ಕಾಲೇಜು, ಮೂಡಬಿದ್ರೆ
6) ಹಾಸ್ಯ ವೇಷ
ಪ್ರಥಮ : ಪ್ರಣವ್ ಮೂಡಿತ್ತಾಯ (ರಾವಣದೂತ – ಶರಣ ಸೇವಾರತ್ನ) – ಎನ್.ಎಂ.ಎ.ಎಂ. ತಾಂತ್ರಿಕ ಮಹಾವಿದ್ಯಾಲಯ, ನಿಟ್ಟೆ
ದ್ವಿತೀಯ : ಸತ್ಯಜಿತ್ ರಾವ್ (ಭಲ್ಲೂಕ – ನರಶಾರ್ದೂಲ) – ಆಳ್ವಾಸ್ ಕಾಲೇಜು, ಮೂಡಬಿದ್ರೆ
7. ಪೋಷಕ ವೇಷ
ಪ್ರಥಮ : ಟಿ.ಎಂ. ಶ್ರವಣ್ (ವಿಭೀಷಣ – ಶರಣ ಸೇವಾರತ್ನ) – ಎನ್.ಎಂ.ಎ.ಎಂ. ತಾಂತ್ರಿಕ ಮಹಾವಿದ್ಯಾಲಯ, ನಿಟ್ಟೆ
ದ್ವಿತೀಯ : ಸುಶ್ಮಿತಾ (ಘೋರ ಅಜಮುಖಿ – ಕುಮಾರ ವಿಜಯ) – ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರಥಮ ದರ್ಜೆ ಕಾಲೇಜು, ಕಾಬೆಟ್ಟು, ಕಾರ್ಕಳ
8) ತಂಡದ ಶ್ರೇಷ್ಠ ಕಲಾವಿದ
ವಿದ್ಯಾಭೂಷಣ್ ಪಿ. (ರಾವಣ – ತರಣಿಸೇನಾ ಕಾಳಗ), ಪರೀಕ್ಷಿತ ಗೋಖಲೆ (ದೇವೇಂದ್ರ – ಕುಮಾರ ವಿಜಯ), ವμರ್Á ಲಕ್ಷ್ಮಣ್ (ವಿಷ್ಣು – ಏಕಾದಶೀ ದೇವಿಮಹಾತ್ಮೆ), ಕೃತಿಕಾ (ಕೌಶಿಕೆ – ಶಾಂಭವಿ ವಿಜಯ), ಪುನೀತ್ (ದಾಕ್ಷಾಯಿಣಿ – ದಕ್ಷಯಜ್ಞ), ಕ್ಷಿತಿಜ್ (ಅಭಿಚಾರ ಕೃತಿ – ಸುದಕ್ಷಿಣ ವಧೆ), ನಿರೀಕ್ಷಾ (ಬಭ್ರುವಾಹನ – ವೀರ ಬಭ್ರುವಾಹನ), ಅನನ್ಯ (ವಿಷ್ಣು – ಸುದರ್ಶನ ವಿಜಯ), ಮೈತ್ರಿ ಭಟ್ (ಕೌರವ – ಗದಾಯುದ್ಧ), ವರುಣ್ ಆಚಾರ್ಯ (ತರಣಿಸೇನ – ಶರಣ ಸೇವಾರತ್ನ), ಭುವನ್ ಶೆಟ್ಟಿ (ದಾಕ್ಷಾಯಿಣಿ – ದಕ್ಷಯಜ್ಞ), ಚಿನ್ಮಯಕೃಷ್ಣ ಕೆ. (ಕಾರ್ತವೀರ್ಯ – ಭಾರ್ಗವ ವಿಜಯ), ಲೋಹಿತ್ ಕಟೀಲ್ (ತರಣಿಸೇನ – ಮೋಕ್ಷ ಮೋಹರ)
ತೀರ್ಪುಗಾರರು : ಉಬರಡ್ಕ ಉಮೇಶ್ ಶೆಟ್ಟಿ, ಗೋಣಿಬೀಡು ಸಂಜಯಕುಮಾರ್ ಶೆಟ್ಟಿ, ಕೃಷ್ಣಪ್ರಕಾಶ್ ಉಳಿತ್ತಾಯ
ಸ್ಪರ್ಧೆಯ ಪ್ರಧಾನ ಸಂಚಾಲಕರು : ಕದ್ರಿ ನವನೀತ ಶೆಟ್ಟಿ
ಸಂಚಾಲಕರು : ಕೃಷ್ಣ ಶೆಟ್ಟಿ ತಾರೆಮಾರ್, ಡಾ| ಪ್ರಖ್ಯಾತ್ ಶೆಟ್ಟಿ ಅಳಿಕೆ
ನಿರೂಪಕರು : ನಿತೇಶ್ ಶೆಟ್ಟಿ ಎಕ್ಕಾರು, ರಾಜೇಂದ್ರ ಎಕ್ಕಾರು, ಡಾ. ಪ್ರಿಯಾ ಹರೀಶ್, ಬಿಂದಿಯಾ ಶೆಟ್ಟಿ, ಪ್ರಕಾಶ್ ಮೇಲಾಂಟ, ಶೋಭಾ ಐತಾಳ್
ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳು ಅನುಕ್ರಮವಾಗಿ ರೂ. 50,000/-, ರೂ. 30,000/- ಮತ್ತು ರೂ. 20,000/- ನೀಡಲಾಗಿದ್ದು, ಉಳಿದ ಎಲ್ಲಾ ತಂಡಗಳಿಗೆ ರೂ. 10,000/- ಗೌರವಧನ ನೀಡಲಾಗಿದೆ. ವೈಯಕ್ತಿಕ ವಿಭಾಗ ವಿಜೇತರಿಗೆ ಪ್ರಥಮ ರೂ. 5,000/-, ದ್ವಿತೀಯ ರೂ. 3,000/- ಹಾಗೂ ತಂಡಗಳ ಶ್ರೇಷ್ಠ ಕಲಾವಿದರಿಗೆ ತಲಾ ರೂ. 2,000/- ದೊಂದಿಗೆ ಪ್ರಶಂಸಾ ಫತ್ರ, ಶಾಶ್ವತ ಫಲಕ, ಪದಕಗಳನ್ನು ನೀಡಲಾಗಿದೆ.
ಸಮಯಪ್ರಜ್ಞೆಯೊಂದಿಗೆ ಶಿಸ್ತುಬದ್ಧವಾಗಿ ವಿದ್ಯಾರ್ಥಿ ಯಕ್ಷಗಾನ ಸ್ಪರ್ಧೆಯನ್ನು ಯಶಸ್ವಿಗೊಳಿಸಿದ ಎಲ್ಲರನ್ನೂ ಯಕ್ಷಧ್ರುವ ಪಟ್ಲ ಪೌಂಡೇಶನ್ ಟ್ರಸ್ಟ್ನ ಸ್ಥಾಪಕಾಧ್ಯಕ್ಷ ಶ್ರೀ ಪಟ್ಲ ಸತೀಶ್ ಶೆಟ್ಟಿ ಅಭಿನಂದಿಸಿದ್ದಾರೆ.