ಪರಬ್ರಹ್ಮ ಡಾ.ಜಯಂತ ಆಠವಲೆಯವರ 81ನೇ ಜನ್ಮೋತ್ಸವದ ಪ್ರಯುಕ್ತ ಮಂಗಳೂರಿನಲ್ಲಿ “ಹಿಂದೂ ಏಕತಾ ಶೋಭಯಾತ್ರೆ” ಸಮಾರಂಭ –ಕಹಳೆ ನ್ಯೂಸ್
ಮಂಗಳೂರು : ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆಯವರ 81 ನೇ ಜನ್ಮೋತ್ಸವದ ನಿಮಿತ್ತ ಮಂಗಳೂರಿನ ಪಿ. ವಿ. ಎಸ್.ಸರ್ಕಲ್ ನಲ್ಲಿ ಧರ್ಮಧ್ವಜದ ಪೂಜೆಯೊಂದಿಗೆ ಪ್ರಾರಂಭವಾದ ಶೋಭಾಯಾತ್ರೆಯು ಲಾಲ್ ಬಾಗ್ ನ ವರೆಗೆ ಸಾಗಿ ಸಮಾರೋಪ ಕಾರ್ಯಕ್ರಮದೊಂದಿಗೆ ಸಂಪನ್ನ ಗೊಂಡಿತು.
ಈ ಸಮಾರೋಪ ಸಭೆಯಲ್ಲಿ ಸನಾತನ ಸಂಸ್ಥೆಯ ಸಾಧಕರಾದ ಸೌ. ಲಕ್ಷ್ಮಿ ಪೈ ಮಾತನಾಡುತ್ತ ನಮ್ಮ ಹಿಂದೂ ಧರ್ಮದ ಶ್ರೇಷ್ಠತೆ ಏನಂದರೆ ಮುಂದೆ ಭವಿಷ್ಯತ್ ಕಾಲದಲ್ಲಿ ನಡೆಯುವಂತಹ ವಿಚಾರಗಳನ್ನು ತ್ರಿಕಾಲ ಜ್ಞಾನಿಗಳಂತ ಸಂತರು ಮೊದಲೇ ಹೇಳಿರುತ್ತಾರೆ. ಯಾವ ರೀತಿ ರಾಮಾಯಣವನ್ನು ವಾಲ್ಮೀಕಿ ಮುನಿಗಳು ರಾಮಾಯಣ ಘಟಿಸುವ ಮೊದಲೇ ತಮ್ಮ ದಿವ್ಯ ದೃಷ್ಟಿಯಿಂದ ಕಂಡುಕೊAಡ ನಂತರ ಅದನ್ನು ರಚನೆ ಮಾಡಿದರು. ಆಮೇಲೆ ಭವ್ಯ ದಿವ್ಯ ರಾಮರಾಜ್ಯದ ಸ್ಥಾಪನೆಯಾಯಿತು. ಅದೇ ರೀತಿ 2025 ಕ್ಕೆ ಈಶ್ವರಿ ರಾಜ್ಯ ಅಂದರೆ ಹಿಂದೂ ರಾಷ್ಟ್ರ ಬರಲಿದೆ ಎಂದು ಹೇಳಿದರು.
ಹಿಂದೂ ಜನಜಾಗೃತಿ ಸಮಿತಿಯ ಗುರುಪ್ರಸಾದ್ ಗೌಡರವರು ಮಾತನಾಡಿ, ಹಿಂದೂ ಜನಜಾಗೃತಿ ಸಮಿತಿಯು ಇಡೀ ವಿಶ್ವದಲ್ಲಿ ಧರ್ಮ ಸಂಸ್ಥಾಪನೆ ಮಾಡುವ ಕಾರ್ಯವನ್ನು ಮಾಡ್ತಾ ಇದೆ. ಯಾವ ರೀತಿ ರಾಮಾಯಣದಲ್ಲಿ ವಾನರ ಸೇನೆಗಳು ಶ್ರೀ ರಾಮನ ನಾಮ ಮಾಡುತ್ತಾ ಭವ್ಯ ಸೇತುವೆ ನಿರ್ಮಾಣವಾಯಿತು ಅದೇ ರೀತಿ ನಾವು ಮಾಡುವ ಪ್ರತಿಯೊಂದು ಆಂದೋಲನ, ಧರ್ಮ ಸಭೆಗಳು, ಧರ್ಮ ಶಿಕ್ಷಣ ವರ್ಗಗಳು ಹಾಗೂ ಇವತ್ತಿನ ಶೋಭಾಯಾತ್ರೆಯು ಕೂಡಾ ನಮ್ಮೆಲ್ಲರನ್ನು ರಾಮ ರಾಜ್ಯದ ಕಡೆಗೆ ಕೊಂಡಯುತ್ತದೆ ಎಂದು ಶೋಭಾಯಾತ್ರೆಯ ಮಹತ್ವ ವನ್ನು ತಿಳಿಸಿ ಹೇಳಿದರು.
ವಕೀಲರಾದ ಉದಯಕುಮಾರ್ ಬಿ. ಕೆ ಮಾತನಾಡಿ, ಇಡೀ ಜಗತ್ತಿಗೆ ಇರುವಂತಹ ವಿಶ್ವಗುರು ಅಂದರೆ ಅದು ಭಾರತ. ಭಾರತ ಸದೃಢವಾಗಿ ಇದ್ದರೆ ಮಾತ್ರ ಇಡೀ ಜಗತ್ತು ಉಳಿಯುತ್ತೆ. ಈ ನಿಟ್ಟಿನಲ್ಲಿ ಸನಾತನ ಸಂಸ್ಥೆಯ ಸಂಸ್ಥಾಪಕರು, ಪರಾತ್ಪರ ಗುರುಗಳು ಸಮಾಜಕ್ಕೆ ಆಧ್ಯಾತ್ಮಿಕ ಸಾಧನೆಯನ್ನು ಕಲಿಸುತ್ತಾ ಮಾನವ ಕುಲದ ಉದ್ಧಾರವನ್ನು ಮಾಡುತ್ತಾ ಈ ಭಾರತವನ್ನು ಸಾತ್ವಿಕ ಭೂಮಿಯನ್ನಾಗಿ ಮಾಡುತ್ತಿದ್ದಾರೆ ಎಂದ್ರು.
ಈ ಶೋಭಾಯಾತ್ರೆಯ ಆಯೋಜನೆಯನ್ನು ಸನಾತನ ಸಂಸ್ಥೆಯ ಕು. ಪುಷ್ಪ ಮೇಸ್ತಾರವರು ಮಾಡಿದರು. ಈ ಶೋಭಯಾತ್ರೆಯಲ್ಲಿ ಉದ್ಯಮಿಗಳಾದ ಮಧುಸೂದನ ಆಯರ್, ದಿನೇಶ್ ಎಂಪಿ, ಬಾಲಗಂಗಾಧರ್ ಕೋಡಿಕಲ್, ವರದರಾಜ್ ಕೋಡಿಕಲ್, ಪ್ರಶಾಂತ್ ಕಾಂಚನ್, ಭಾಸ್ಕರ ಸುವರ್ಣ, ಆನಂದ ಗೌಡ ಉಜಿರೆ, ಮುಂತಾದವರು ಉಪಸ್ಥಿತರಿದ್ದರು.
ಸನಾತನ ಸಂಸ್ಥೆಯ ಸಂತರು, ಸನಾತನ ಸಂಸ್ಥೆಯ ಸಾಧಕರು,ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತರು, ನೂರಾರು ಸಂಖ್ಯೆಯಲ್ಲಿ ವಿವಿಧ ಹಿಂದೂ ಸಂಘಟನೆಗಳ ಕಾರ್ಯಕರ್ತರು, ಮಹಿಳಾ ಮಂಡಳಿಗಳ ಕಾರ್ಯಕರ್ತರು ಭಾಗಿಯಾಗಿದ್ದರು. ಭಜನಾ ಮಂಡಳಿಯವರ ಕುಣಿತ ಭಜನೆಯೊಂದಿಗೆ, ಚಂಡೆ, ವಾದ್ಯಗಳ ಝೇಂಕಾರದೊoದಿಗೆ, ವಿಶೇಷವಾಗಿ ರಣರಾಗಿಣೆ ಶಾಖೆಯ ಯುವತಿಯರು ಕಿತ್ತೂರು ರಾಣಿ ಚೆನ್ನಮ್ಮ, ಓನಕೆ ಓಬವ್ವ, ಬಾಲ ಗಂಗಾಧರ ತಿಲಕ್ ಮುಂತಾದ ವೇಷದಲ್ಲಿ ಮಿಂಚಿದರು.ಶೋಭಾಯಾತ್ರೆಯ ಉದ್ದಕ್ಕೂ ಸಂಸ್ಥೆಯ ಸಾಧಕರು ಧರ್ಮಜಾಗೃತಿ, ಹಿಂದೂ ಏಕತೆ , ರಾಷ್ಟ್ರಪ್ರೇಮ ಜಾಗೃತಿ ಮೂಡಿಸುವ ಘೋಷಣೆಗಳನ್ನು ಕೂಗುತ್ತಾ ಸಮಾಜದಲ್ಲಿ ಜಾಗೃತಿ ಮೂಡಿಸಿದರು.
ಕೊನೆಯದಾಗಿ ವಿವೇಕ್ ಪೈ ಯವರ ನಿರೂಪಣೆಯೊಂದಿಗೆ ಗುರುಗಳ ಚರಣಗಳಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಾ ಶೋಭಯಾತ್ರೆಯು ಸಂಪನ್ನ ಗೊಂಡಿತು.