Wednesday, November 27, 2024
ಸುದ್ದಿ

ಸಮಾಜ ಕಾರ್ಯ ಗ್ರಾಮೀಣ ಅಧ್ಯಯನ ಶಿಬಿರದದಿಂದ ಹರಟೆ ಕಟ್ಟೆ ಕಾರ್ಯಕ್ರಮ – ಕಹಳೆ ನ್ಯೂಸ್

ದೊಡ್ಡಬೈರನಕುಪ್ಪೆ .ದಿ.24 ಮಂಗಳೂರು ವಿಶ್ವವಿದ್ಯಾನಿಲಯ ಸ್ನಾತಕೋತ್ತರ ಸಮಾಜ ಕಾರ್ಯ ಸಂಶೋಧನಾ ಮತ್ತು ಅಧ್ಯಯನ ವಿಭಾಗದ ಆಶ್ರಯದಲ್ಲಿ ಆಯ್ದಿಸಲಾದ ಆಯೋಜಿಸಲಾದ ಸಮಾಜಕಾರ್ಯ ಗ್ರಾಮೀಣ ಅಧ್ಯಯನ ಶಿಬಿರದ 5 ನೇ ದಿನದ ಅಂಗವಾಗಿ ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳಿಗೆ ಹರಟೆ ಕಟ್ಟೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು


ಕಾರ್ಯಕ್ರಮ ದಲ್ಲಿ ವಿದ್ಯಾರ್ಥಿಗಳು ಬುಡಕಟ್ಟು ಜನಾಂಗದ ನಾಯಕರು ಆಗಿರುವ ಕೆಂಚಯ್ಯ ರವರೊಂದಿಗೆ ಸಂವಾದ ಮಾಡಲಾಯ್ತು.
ಬುಡಕಟ್ಟು ಜನಾಂಗದ ನಾಯಕರಾಗಿರುವ ಕೆಂಚಿಯ್ಯ ರವರು “ನಾವು ಕಾಡಿನ ಶತ್ರುಗಳಲ್ಲ ಕಾಡಿನ ಮಿತ್ರರು ” ಎಂಬ ಸಂದೇಶವನ್ನು ಸಾರಿದರು .
ಗ್ರಾಮಸ್ಥರು ಯಾವ ರೀತಿ ಕಾಡಿನ ನಿಯಮಗಳಿಗೆ ಒಗ್ಗಿಕೊಳ್ಳುತ್ತಿದ್ದಾರೆ, ಯಾವ ರೀತಿ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಎನ್ನುವುದರ ಕುರಿತು ವಿಚಾರ ವಿನಿಮಯ ಮಾಡಲಾಯ್ತು.ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ ಸಮಾಜಕಾರ್ಯ ವಿಭಾಗದ ಉಪನ್ಯಾಸಕರು ಶ್ರೀಮತಿ ವಿನುತ ಮತ್ತು ದೀಪಕ್ ಬಿ ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು