Recent Posts

Monday, January 20, 2025
ಸುದ್ದಿ

ದಸರಾ ರಜೆ ಕಡಿತಗೊಳಿಸಿದ್ದ ಸರ್ಕಾರ ತನ್ನ ಆದೇಶ ಹಿಂಪಡೆದಿದೆ: ಯು.ಟಿ.ಖಾದರ್ – ಕಹಳೆ ನ್ಯೂಸ್

ಮಂಗಳೂರು: ಮಳೆಗಾಲದಲ್ಲಿ ಉಂಟಾದ ನೆರೆಯಿಂದಾಗಿ ಈ ಬಾರಿಯ ದಸರಾ ರಜೆ ಕಡಿತಗೊಳಿಸಿದ್ದ ಸರ್ಕಾರ ತನ್ನ ಆದೇಶ ಹಿಂಪಡೆದಿದ್ದು, ಈ ಬಾರಿ ಎಂದಿನಂತೆ ದಸರಾ ರಜೆ ಇರಲಿದೆ ಎಂದು ದ.ಕ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.

ಈ ವರ್ಷದ ದಸರಾ ರಜೆಯಲ್ಲಿ ಕಡಿತ ಮಾಡಲ್ಲ. ಇದರ ಬಗ್ಗೆ ಜಿಲ್ಲಾಧಿಕಾರಿ, ಡಿಡಿಪಿಐ, ಸಿಇಒ ಜತೆಗೆ ಚರ್ಚೆ ನಡೆಸಿ ತೀರ್ಮಾನಿಸಲಾಗಿದೆ ಎಂದು ಅವರು ನಗರದ ಸರ್ಕ್ಯೂಟ್ ಹೌಸ್ ನಲ್ಲಿ ಅವರು ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಮುಲ್ಲಪಟ್ಣದಲ್ಲಿ ಕುಸಿದು ಬಿದ್ದಿರುವಂತಹ ಸೇತುವೆಯನ್ನು ದುರಸ್ತಿಪಡಿಸುವ ಬದಲು ಹೊಸ ಸೇತುವೆ ನಿರ್ಮಾಣ ಮಾಡುವುದು ಒಳಿತು ಎಂದು ಖಾದರ್ ಅಭಿಪ್ರಾಯಪಟ್ಟರು.

ಜಾಹೀರಾತು
ಜಾಹೀರಾತು
ಜಾಹೀರಾತು