Tuesday, November 26, 2024
ಸುದ್ದಿ

ಗ್ರಾಮೀಣ ಅಧ್ಯಯನ ಶಿಬಿರದ ಸಮಾರೋಪ ಸಮಾರಂಭ ಕಾರ್ಯಕ್ರಮ. – ಕಹಳೆ ನ್ಯೂಸ್

ದೊಡ್ಡಬೈರನಕುಪ್ಪೆ.ದಿ.26.ಗ್ರಾಮೀಣ ಅಧ್ಯಯನ ಶಿಬಿರವು ಸಮಾಜ ಕಾರ್ಯದ ಒಂದು ಅಂಗವಾಗಿದೆ ಈ ಶಿಬಿರದಿಂದಾಗಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ ಆಗುತ್ತದೆ . ವಿದ್ಯಾರ್ಥಿಗಳು ಎಲ್ಲಾ ಸೌಕರ್ಯ ಗಳಿಗೆ ಹೊಂದಿಕೊಂಡಿರುತ್ತಾರೆ ಆದರೆ ಶಿಬಿರಕ್ಕೆ ಬಂದು ಏಳು ದಿನದ ಶಿಬಿರದಲ್ಲಿ ಗಿರಿಜನರ ಮಧ್ಯೆ ಶಿಬಿರವನ್ನು ನಡೆಸಿ ಯಶಸ್ವಿಗೊಳಿಸುವುದು ಸುಲಭವಾಕರ ಅಲ್ಲ ಇದು ವಿದ್ಯಾರ್ಥಿಗಳ ಬೆಳವಣಿಗೆಗೆ ಪೂರಕವಾಗಿದೆ ಎಂದು ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ ಸ್ನಾತಕೊತ್ತರ ಸಮಾಜ ಕಾರ್ಯ ಸಂಶೋಧನಾ ಮತ್ತುಲಅಧ್ಯಯನ ವಿಭಾಗದ ಮುಖ್ಯಸ್ಥ ಡಾ.ಮೋಹನ್ ಸಿಂಗ್ ಎಸ್ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

 

ಮಂಗಳೂರು ವಿಶ್ವವಿದ್ಯಾನಿಲಯ ಸಮಾಜಕಾರ್ಯ ಸಂಶೋಧನಾ ಮತ್ತು ಅಧ್ಯಯನ ವಿಭಾಗದಿಂದ ಆಯೋಜಿಸಲಾದ ಸಮಾಜಕಾರ್ಯ ಗ್ರಾಮೀಣ ಶಿಬಿರದ ಸಮಾರೋಪ ಸಮಾರಂಭ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶುಕ್ರವಾರ ಮಾತನಾಡಿದರು .
ವಿದ್ಯಾರ್ಥಿಗಳು ಮೇ 20 ರಿಂದ 26ರವರೆಗೆ ಗ್ರಾಮೀಣ ಅಧ್ಯಯನ ಶಿಬಿರ ಏರ್ಪಡಿಸಿದ್ದು ಏಳು ದಿನದ ಶಿಬಿರದ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳು ಯಶಸ್ವಿಗೊಳಿಸಿದ್ದಾರೆ. ವಿದ್ಯಾರ್ಥಿ ಜೀವನದಲ್ಲಿ ಎನ್ಎನ್ಎಸ್, ಎನ್ ಸಿಸಿ ಅಂತಹ ಹಲವಾರು ರೀತಿಯ ಶಿಬಿರಗಳು ಏರ್ಪಡಿಸಲಾಗುತ್ತದೆ ಆದರೆ ಸಮಾಜ ಕಾರ್ಯ ವಿಭಾಗದ ಶಿಬಿರಗಳು ಅದರದೇ ಆದ ವೈಶಿಷ್ಟ್ಯಗಳನ್ನು ಮೌಲ್ಯಗಳನ್ನು ಹೊಂದಿದೆ. ಗ್ರಾಮೀಣ ಅಧ್ಯಯನ ಶಿಬಿರವು ಒಂದು ಗ್ರಾಮದ ಸಂಪ್ರದಾಯ ಆಚಾರ ವಿಚಾರಗಳನ್ನು ಸ್ವಾಂಗೀಕರಣ ಮಾಡುವಲ್ಲಿ ಸಹಾಯಕವಾಗಿದೆ ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ ಬುಡಕಟ್ಟು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ನಾರಾಯಣ ಕಾರ್ಯಕ್ರಮದ ಕುರಿತು ಹೀಗಿಂದರು ವಿದ್ಯಾರ್ಥಿಗಳು ಇಂತಹ ಶಿಬಿರಗಳನ್ನು ವಿದ್ಯಾರ್ಥಿ ಜೀವನದಲ್ಲಿ ಮಾಡುತ್ತಿರಬೇಕು ಶಿಬಿರಗಳು ವಿದ್ಯಾರ್ಥಿಗಳ ಶೈಕ್ಷಣಿಕ ಅಧ್ಯಯನಕ್ಕೆ ಅನುಕೂಲವಾಗುತ್ತದೆ ಹಾಗೂ ಈ ಅಧ್ಯಯನವು ಗ್ರಾಮಸ್ಥರ ಅಭಿವೃದ್ಧಿಗೂ ಅನುಕೂಲವಾಗುವುದು . ಸಾಮಾಜಿಕ ತೊಂದರೆಗಳ ಬಗ್ಗೆ ಅಧಿಕಾರಿಗಳು ತಿಳಿಸುವುದಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ತಿಳಿಸಿದರೆ ಜನರಿಗೆ ಸರಿಯಾದ ರೀತಿಯಲ್ಲಿ ಮನದಟ್ಟಾಗುವುದು ಎಂದು ತಿಳಿಸಿದರು
ಕಾರ್ಯಕ್ರಮಕ್ಕೆ ಆಗಮಿಸಿದ ನಾಗರಹೊಳೆ ರಾಷ್ಟ್ರೀಯ ಉದ್ಯಾನವನಲ ದೊಡ್ಡಬೈರನಕುಪ್ಪೆ ವಲಯದ ಉಪವಲಯ ಅಧಿಕಾರಿ ನಾರಾಯಣ ಆರ್ ವಿದ್ಯಾರ್ಥಿಗಳು ಮಂಗಳೂರಿನಿಂದ ಬಂದು ಕರ್ನಾಟಕ – ಕೇರಳ ಗಡಿ ಭಾಗದಲ್ಲಿ ಶಿಬಿರವನ್ನು ಏರ್ಪಡಿಸಿದ್ದು ಇಲ್ಲಿನ ಜೀವನಶೈಲಿ ಹಾಗೂ ಪದ್ಧತಿಗಳಿಗೆ ಆದಷ್ಟು ಬೇಗ ಹೊಂದಿಕೊಂಡಿದ್ದರೆ ಹಾಗೂ ಇಲ್ಲಿನ ಜೀವನ ಶೈಲಿ ಸಂಪ್ರದಾಯಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಇಂತಹ ಜಾಗೃತಿ ಕಾರ್ಯಕ್ರಮ ಸಾಮಾಜಮುಖಿ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಂದ ನಡೆಯುತ್ತಿರಬೇಕೆಂದು ತಿಳಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ದೊಡ್ಡಬೈರನಕುಪ್ಪಯ ಮಾಜಿ ಅಧ್ಯಕ್ಷ ತಿರುಪತಿಯವರು ಬಾಲ್ಯ ವಿವಾಹ ಮಧ್ಯಪಾನ ಹೀಗೆ ಹಲವಾರು ಸಾಮಾಜಿಕ ತೊಂದರೆಗಳನ್ನು ತಡೆಯಲು ಅಧಿಕಾರಿಗಳ ಜೊತೆಗೆ ವಿದ್ಯಾರ್ಥಿಗಳ ಸಹಕಾರ ಯುವಕರ ಸಹಕಾರ ಬೇಕಾಗುವುದು ವಿದ್ಯಾರ್ಥಿಗಳು ಒಳ್ಳೆಯ ರೀತಿಯಲ್ಲಿ ಜಾನರ್ಜನೆ ಮಾಡಿದರೆ ಭವಿಷ್ಯದಲ್ಲಿ ಕೆಟ್ಟ ಚಟಗಳಿಂದ ದೂರವಿರಲು ಸಹಾಯಕವಾಗುವುದೆಂದು ತಿಳಿಸಿದರು.
ಹಾಗೂ ಗ್ರಾಮೀಣ ಅಧ್ಯಯನ ಶಿಬಿರದ ಸಮೀಕ್ಷೆ ವರದಿಯನ್ನು ಬುಡಕಟ್ಟು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಮತ್ತು ದೊಡ್ಡಭರಣಕೊಪ್ಪೆ ಅರಣ್ಯ ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು.
ಕಾರ್ಯಕ್ರಮದಲ್ಲಿ ಗಿರಿಜನ ಆಶ್ರಮ ಶಾಲಾ ಮುಖ್ಯೋಪಾಧ್ಯಾಯ ಅಶೋಕ್ ಹಾಗೂ ಸಮಾಜಕಾರ್ಯ ವಿಭಾಗದ ಉಪನ್ಯಾಸಕರಾದ ಉಷಾರಾಣಿ, ವಿನುತಾ ,ದೀಪಕ್ ಬಿ ರಾಜೇಶ್ವರಿ ಮತ್ತು ಕೊಡುಗು ವಿಶ್ವವಿದ್ಯಾಲಯದ ಉಪನ್ಯಾಸಕರು ಉಪಸ್ಥಿತರಿದ್ದರು .

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ರಚನಾ ಪ್ರಾರ್ಥಮಿಸಿದರು ,ಅರ್ಚನಾ ಸ್ವಾಗತಿಸಿದರು ಮನೋಹರ್ ವಂದಿಸಿದರು ಹಾಗೂ ಅರ್ಪಣ ಕಾರ್ಯಕ್ರಮವನ್ನು ನಿರೂಪಿಸಿದರು.