ಪಾಕೃತಿಕ ವಿಕೋಪದ ತುರ್ತು ಸಂದರ್ಭದಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮುನ್ನೆಚ್ಚರಿಕೆ ವಹಿಸುವಂತೆ ಮನವಿ; ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ – ಕಹಳೆ ನ್ಯೂಸ್
ಬಂಟ್ವಾಳ: ಪಾಕೃತಿಕ ವಿಕೋಪದ ತುರ್ತು ಸಂದರ್ಭದಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಪೋನ್ ಆಫ್ ಮಾಡದೆ ಜನರ ಸೇವೆಗೆ ಸದಾ ಸಿದ್ದರಾಗಿ ಮತ್ತು ಎಲ್ಲಾ ತಾಲೂಕು ಮಟ್ಟದ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ವಾಸ್ತವ್ಯ ಇರಿ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅಧ್ಯಕ್ಷತೆಯಲ್ಲಿ ಮುಂಗಾರು ಮುನ್ನೆಚ್ಚರಿಕೆ, ವಿವಿಧ ಸಮಸ್ಯೆಗಳ ಕುರಿತ ಸಿದ್ಧತಾ ಸಭೆ ತಾಲೂಕು ಪಂಚಾಯತ್ ನ ಎಸ್.ಜಿಎಸ್.ವೈ ಸಭಾಂಗಣದಲ್ಲಿ ನಡೆಯಿತು.
ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಜೊತೆಯಾಗಿ ಕೆಲಸ ಮಾಡಿದರೆ , ನಮ್ಮನ್ನು ನಂಬಿರುವ ಕ್ಷೇತ್ರದ ಜನರಿಗೆ ಸಹಾಯ ಮಾಡಲು ಸಾಧ್ಯ ವಾಗಬಹುದು. ನಮಗೆ ಎಷ್ಡು ಸಾಧ್ಯ ವಿದೆಯೋ ಅಷ್ಟು ಕೆಲಸ ಮಾಡಲು ಅವರು ತಿಳಿಸಿದರು.
ಮಳೆಗಾಲದ ಆರಂಭ ಹಾಗೂ ನೆರೆಯ ಸಮಯದಲ್ಲಿ ತುರ್ತಾಗಿ ಸಮಸ್ಯೆಗಳಿಗಡ ಸ್ಪಂದಿಸಿ ಎಂದು ಅಧಿಕಾರಿಗಳಿಗೆ ತಿಳಿಸಿದರು.
ಮುಂಗಾರುಪೂರ್ವ ಸಿದ್ಧತೆಗಳ ಕುರಿತ ಅರಣ್ಯ ಇಲಾಖಾ ವ್ಯಾಪ್ತಿಯಲ್ಲಿ ಗೆಲ್ಲುಗಳನ್ನು ಕಡಿಯುವ ಕೆಲಸವನ್ನು ಮಾಡುತ್ತಿಲ್ಲ ಯಾಕೆ ಎಂದು ಶಾಸಕರು ಕೇಳಿದ ಸಂದರ್ಭ ಅರಣ್ಯ ಇಲಾಖಾ ವ್ಯಾಪ್ತಿಯ ಅಧಿಕಾರಿ ತನಗೆ ಗೊತ್ತಿಲ್ಲ ಎಂದರು. ಈ ಸಂದರ್ಭ ತರಾಟೆಗೆ ತೆಗೆದುಕೊಂಡ ಶಾಸಕರು, ಗೊತ್ತಿಲ್ಲ ಎನ್ನುವುದಲ್ಲ, ಸೂಕ್ತವಾಗಿ ಗಮನಹರಿಸಲು ಸೂಚನೆ ನೀಡಿದರು.
ಎಲ್ಲ ಅಧ್ಯಕ್ಷರು, ಪಿಡಿಒಗಳಿಗೂ ಸೂಚನೆ ನೀಡಿದ ಶಾಸಕರು, ಕುಡಿಯುವ ನೀರಿಗೆ ಸಂಬoಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು. ಯಾವುದೇ ಕುಡಿಯುವ ನೀರಿನ ಸಮಸ್ಯೆಗೆ ತೊಂದರೆ ಉಂಟಾಗಬಾರದು ಎಂದು ಶಾಸಕರು ಸೂಚನೆ ನೀಡಿದರು. ಟ್ಯಾಂಕರ್ ಮಾಡಿಯಾದರೂ ಕುಡಿಯುವ ನೀರೊದಗಿಸುವ ಕೆಲಸ ಮಾಡಬೇಕು ಎಂದು ಹೇಳಿದರು.
ಕುಡಿಯುವ ನೀರಿನ ಸಮಸ್ಯೆ: 40 ಅಂಗನವಾಡಿ ಕೇಂದ್ರಗಳಲ್ಲಿ ಮತ್ತು 64 ಶಾಲೆಗಳಿಗೆ ಕುಡಿಯುವ ನೀರಿನ ಸಮಸ್ಯೆ ಇದೆ ಎಂದು ಸಂಬAಧಪಟ್ಟ ಇಲಾಖೆಯವರು ತಿಳಿಸಿದರು.
ಕೆಆರ್ ಡಿಎಲ್ ನವರು 22 ಶಾಲೆಗಳ ಮಳೆಹಾನಿ ಕೆಲಸ ಮಾಡುತ್ತಿಲ್ಲ ಎಂದರೆ, 12 ಅಂಗನವಾಡಿ ಕೇಂದ್ರಗಳು ಶಿಥಿಲಾವಸ್ಥೆಯಲ್ಲಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಗ್ರಾಮೀಣ ಭಾಗದಲ್ಲಿ ಮಳೆ ಆರಂಭವಾಗುವ ಮೊದಲು ರಸ್ತೆಯ ಬದಿಯ ಚರಂಡಿಗಳನ್ನು ಹೂಳೆತ್ತುವ ಕಾರ್ಯ ಮಾಡಬೇಕು.
ನೀರು ಸರಾಗವಾಗಿ ಹರಿದುಹೋಗಲು ಎಲ್ಲಾ ರಸ್ತೆ ಬದಿಯಲ್ಲಿ ಚರಂಡಿ ನಿರ್ಮಾಣ ಮಾಡಿ ಎಂದು ಸೂಚಿಸಿದರು.
ಬಂಟ್ವಾಳ ತಾಲೂಕಿನಲ್ಲಿ ಲಾ ಆಂಡ್ ಆರ್ಡರ್ ನಲ್ಲಿ ಲೋಪವಾಗದಂತೆ ನೋಡಿಕೊಳ್ಳಿ, ಮಳೆಗಾಲದಲ್ಲಿ ಎಲ್ಲಾ ಇಲಾಖೆಯ ದೂರುಗಳು ನಿಮ್ಮ ಬಳಿಗೆ ಬರುತ್ತದೆ, ಅಂತಹ ಸಂದರ್ಭದಲ್ಲಿ ಯಾವುದೇ ಗೊಂದಲವಾಗದAತೆ ಹೊಂದಾಣಿಕೆಯಿAದ ಕೆಲಸ ಮಾಡಿಕೊಂಡು ಉತ್ತಮವಾಗಿ ನಿಭಾಯಿಸಿಕೊಂಡು ಹೋಗಿ ಎಂದು ಸೂಚಿಸಿದರು.
ಉಪ್ಪುಗುಡ್ಡೆ ನೀರಿನ ಟ್ಯಾಂಕ್ ಮತ್ತೆ ಮಳೆಗಾಲದಲ್ಲಿ ಬೀಳುವ ಅವಕಾಶಗಳಿವೆ ಎಂದು ಪಿಡಿಒ ಶಾಸಕರಲ್ಲಿ ತಿಳಿಸಿದಾಗ ಪುರಸಭಾ ಇಲಾಖೆಯವರು ಯಾವ ಕ್ರಮ ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿದರು.
ಜೊತೆಗೆ ಪಾಣೆಮಂಗಳೂರು ಮಿಲಿಟರಿ ಗ್ರೌಂಡ್ ಹಾಗೂ ಇಲ್ಲಿನ ತಗ್ಗು ಪ್ರದೇಶಗಳಲ್ಲಿ ನೆರೆ ಪ್ರತಿ ವರ್ಷವೂ ಬರುತ್ತದೆ, ಆದರೆ ಇಲ್ಲಿರುವ ಸಣ್ಣ ತೋಡುಗಳ ಬದಿಯಲ್ಲಿರುವ ಗಿಡಗಂಟಿಗಳು,ಪೊದೆಗಳನ್ನು ಕಡಿದು ಬಳಿಕ ಹೂಳೆತ್ತುವ ಕಾರ್ಯವನ್ನು ಪುರಸಭಾ ಇಲಾಖೆಯವರು ಮಾಡಬೇಕು ಎಂದು ಸೂಚಿಸಿದರು.
ಗ್ರಾಮೀಣ ಭಾಗದಲ್ಲಿ ರಸ್ತೆ ಬದಿಯಲ್ಲಿ ರಸ್ತೆ ಕೆಟ್ಟು ಹೋಗುವ ರೀತಿಯಲ್ಲಿ ಅಗೆದು ಕೇಬಲ್ ವಯರ್ ಗಳನ್ನು ಹಾಕಲಾಗುತ್ತಿದ್ದು, ಇದರ ಬಗ್ಗೆ ಸಂಬAಧಿಸಿದವರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಶಾಸಕರಲ್ಲಿ ಗ್ರಾ.ಪಂ.ಅಧ್ಯಕ್ಷರುಗಳು ದೂರು ನೀಡಿದರು.
ಇದಕ್ಕೆ ಸ್ಪಂದಿಸಿದ ಶಾಸಕರು ತಹಶಿಲ್ದಾರ್ ಅವರಿಗೆ ಲಿಖಿತ ದೂರು ನೀಡಿ ಮತ್ತು ಕಾನೂನು ಮೀರಿ ರಸ್ತೆಯನ್ನು ಕೆಡಿಸಿ ಸಾರ್ವಜನಿಕರಿಗೆ ತೊಂದರೆಯಾದರೆ ಕೆಲಸ ನಿಲ್ಲಿಸಿ ಎಂದು ತಹಶಿಲ್ದಾರ್ ಅವರಿಗೆ ಸೂಚಿಸಿದರು.
ಚುನಾವಣಾ ಸಂದರ್ಭದಲ್ಲಿ ಬೇಸಿಗೆಕಾಲದ ಮೇ ತಿಂಗಳಿನ ನೀರಿಲ್ಲದ ಸಮಯದಲ್ಲಿ ಪುಚ್ಚೇರಿ ಡ್ಯಾಂನಿAದ ಉದ್ದೇಶಪೂರ್ವಕವಾಗಿ ನೀರನ್ನು ಬಿಡಲಾಗಿದೆ ,ಇದರಿಂದ ಆ ಭಾಗದ ಜನರು ಕುಡಿಯುವ ನೀರಿಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣ ಮಾಡಿದ್ದರು, ಆದರೆ ನಾನು ಜನರಿಗೆ ಕುಡಿಯುವ ನೀರು ಒದಗಿಸಿದ್ದೇನೆ. ಉದ್ದೇಶ ಪೂರ್ವಕವಾಗಿ ಮಾಡಿದ ಈ ಕೃತ್ಯದ ಬಗ್ಗೆ ಕ್ರಮ ಜರಗಿಸಬೇಕು ಎಂದು ಜಿಲ್ಲಾಧಿಕಾರಿಗೆ ಸೂಚಿಸಿದ್ದೇನೆ ಎಂದು ಅವರು ತಿಳಿಸಿದರು. ಸಭೆಯಲ್ಲಿ ತಹಶಿಲ್ದಾರ್ ಎಸ್.ಬಿ.ಕೂಡಲಗಿ,ತಾ.ಪಂ.ಇ.ಒ.ರಾಜಣ್ಣ ಉಪಸ್ಥಿತರಿದ್ದರು.