Recent Posts

Tuesday, November 26, 2024
ಸುದ್ದಿ

ಕಲ್ಮಂಜೆ ಶ್ರೀ ಬೊಬ್ಬರ್ಯ ದೈವಸ್ಥಾನದಲ್ಲಿ ಮಹಿಳಾ ಸಂಘದ ವತಿಯಿಂದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ವಿಶಿಷ್ಟ ಸಾಧನೆಯನ್ನು ಮಾಡಿರುವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ – ಕಹಳೆನ್ಯೂಸ್

ಉಡುಪಿ : ಕಲ್ಮಂಜೆ ಶ್ರೀ ಬೊಬ್ಬರ್ಯ ದೈವಸ್ಥಾನದಲ್ಲಿ ಬೊಬ್ಬರ್ಯ ಮಹಿಳಾ ಸಂಘದ ವತಿಯಿಂದ 2022-23 ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ 70% ರಿಂದ ಶೇಕಡಾ 95% ಅಂಕಗಳನ್ನು ಪಡೆದು ವಿಶಿಷ್ಟ ಸಾಧನೆಯನ್ನು ಮಾಡಿರುವ ಕಲ್ಮಂಜೆ ಗ್ರಾಮದ ಸುಮಾರು 16 ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ಬೊಬ್ಬರ್ಯ ದೈವಸ್ಥಾನದ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರಾದ ಶ್ರೀಯುತ ಭೂವರಾಹ ಆಚಾರ್ಯರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಬೊಬ್ಬರ್ಯ ದೈವಸ್ಥಾನ ಕಲ್ಮಂಜೆ , ಇದರ ಆಡಳಿತ ಮೊಕ್ತೇಸರರಾದ, ಭಂಡಾರದ ಮನೆಯ ಶ್ರೀಯುತ ದಯಾನಂದ ಶೆಟ್ಟಿ ಕಡಂಬೆಟ್ಟು, ಮಣಿಪುರ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀಯುತ ದಿವಾಕರ್ ಶೆಟ್ಟಿ, ಹಿರಿಯರಾದ ಸುಂದರ್ ಶೆಟ್ಟಿ, ಭಂಡಾರದ ಮನೆ ಉಮೇಶ್ ಶೆಟ್ಟಿ ಕಡಂಬೆಟ್ಟು, ಕರುಣಾಕರ್ ಶೆಟ್ಟಿ ಕಡಂಬೆಟ್ಟು,ಶ್ರೀಯುತ ಶಂಕರ್ ಶೇರಿಗಾರ್, ಶ್ರೀಯುತ ದಾಮೋದರ ಬಂಗೇರ, ಜವನೆರೆ ಸಂಘದ ಅಧ್ಯಕ್ಷರಾದ ಶ್ರೀಯುತ ಲಕ್ಷ್ಮೀಶ ಪೂಂಜಾ,ಖಜಾಂಚಿ ಕಾರ್ತಿಕ್ ಕುಲಾಲ್, ಬೊಬ್ಬರ್ಯ ಮಹಿಳಾ ಸಂಘದ ಅಧ್ಯಕ್ಷೆ, ಶ್ರೀಮತಿ ಸುಜಯಾ ಸುರೇಶ್, ಕಾರ್ಯದರ್ಶಿ ಶ್ರೀಮತಿ ವನಿತಾ ಶಂಕರ್, ಖಜಾಂಚಿ ಶ್ರೀಮತಿ, ಸುಜಾತಾ ಲಕ್ಷ್ಮೀಶ್ ಪೂಂಜಾ, ಬೊಬ್ಬರ್ಯ ಜವನೆರೆ ಸಂಘ ಹಾಗೂ ಮಹಿಳಾ ಸಂಘದ ಸದಸ್ಯರು, ಸಾಧಕ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು, ಹಾಗೂ ಕಲ್ಮಂಜೆಯ ಗ್ರಾಮಸ್ಥರು ಸೇರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕು. ದುರ್ಗಾ ಎಲ್.ಪೂಂಜಾ ಪ್ರಾರ್ಥನೆಯನ್ನು ನಡೆಸಿಕೊಟ್ಟರು. ಶ್ರೀಮತಿ ತಾರಾ ಉಮೇಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.