
ಬೈಂದೂರು: ಶಂಕರನಾರಾಯಣ ಗ್ರಾಮ ಪಂಚಾಯತ್‍ನ ಎಸ್.ಎಲ್.ಆರ್.ಎಂ. ಘಟಕದ ಸ್ವಚ್ಚತಾ ಸಿಬ್ವಂದಿ ದೇವಕಿ ಎಂಬವರಿಗೆ ಘನ ತ್ಯಾಜ್ಯದಲ್ಲಿ ಸಿಕ್ಕಿದ ಚಿನ್ನದ ಉಂಗುರವನ್ನು ವಾರೀಸುದಾರರಿಗೆ ಹಸ್ತಾಂತರಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.
ಪ್ರತಿದಿನ ಕಸ ನೀಡುವ ಮನೆಯವರ 2 ಗ್ರಾಂ ತೂಕದ ಚಿನ್ನ ಉಂಗುರ ಕಳೆದು ಹೋಗಿತ್ತು. ಈ ಬಗ್ಗೆ ಕಸ ವಿಲೇವಾರಿ ಘಟಕದವರಿಗೆ ಮಾಹಿತಿ ನೀಡಿ, ಕಸದ ಜೊತೆ ಬಂದಿದ್ದರೆ ನೀಡುವಂತೆ ವಿನಂತಿಸಿಕೊಂಡಿದ್ದರು. ಅದರಂತೆ ಬೈಲೂರು ಮೂಡುಬೈಲೂರಿನಲ್ಲಿ ಕಸ ವಿಲೇವಾರಿ ಮಾಡುವಾಗ ಕಸದಲ್ಲಿ ಚಿನ್ನದ ಉಂಗುರ ದೇವಕಿ ಅವರಿಗೆ ಸಿಕ್ಕಿತ್ತು. ಕೂಡಲೇ ಅವರು ಸಂಬಂಧಪಟ್ಟ ಮನೆಯವರಿಗೆ ಮಾಹಿತಿ ನೀಡಿ ವಾರೀಸುದಾರರಿಗೆ ಹಸ್ತಾಂತರಿಸಿದ್ದಾರೆ.