Friday, September 20, 2024
ಸುದ್ದಿ

ಇಸ್ಲಾಂನಲ್ಲಿ ಮಸೀದಿ ಅವಿಭಾಜ್ಯ ಅಂಗ ಅಲ್ಲ: ಸುಪ್ರೀಂ ಕೋರ್ಟ್ – ಕಹಳೆ ನ್ಯೂಸ್

ನವದೆಹಲಿ :  ಮಸೀದಿಯು ಇಸ್ಲಾಂನ ಅವಿಭಾಜ್ಯ ಅಂಗ ಅಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ. ಈ ಮೂಲಕ ಮುಸ್ಲಿಮರು ಪ್ರಾರ್ಥನೆ ಮಾಡಲು ಮಸೀದಿಯೇ ಆಗಬೇಕೆಂದಿಲ್ಲ ಎಂಬ 1994ರ ತೀರ್ಪನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ.

ವಿಸ್ತೃತ ಸಾಂವಿಧಾನಿಕ ಪೀಠಕ್ಕೆ ಈ ವಿಚಾರವನ್ನು ವರ್ಗಾವಣೆ ಮಾಡುವುದಿಲ್ಲ ಎಂದು ಹೇಳಿದ್ದು, ದೀಪಕ್ ಮಿಶ್ರಾ ನೇತೃತ್ವದ ನ್ಯಾಯಪೀಠ 1994ರ ತೀರ್ಪನ್ನೇ ಮತ್ತೊಮ್ಮೆ ಎತ್ತಿ ಹಿಡಿದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

1994 ರಲ್ಲಿ ನಮಾಜನ್ನು ಎಲ್ಲಾದರೂ ಮಾಡಬಹುದು. ಮಸೀದಿಯಲ್ಲೇ ಮಾಡಬೇಕಿಲ್ಲ. ನಮಾಜ್ ಗಾಗಿ ಪ್ರತ್ಯೇಕ ಜಾಗವನ್ನು ಸರ್ಕಾರ ನೀಡಬೇಕು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಆದರೆ ಈ ತೀರ್ಪನ್ನು ಮುಸ್ಲಿಂ ಸಂಘಟನೆಗಳು ಪ್ರಶ್ನಿಸಿದ್ದವು.

ಜಾಹೀರಾತು

ಈ ಕುರಿತು ಸುದೀರ್ಘ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ತ್ರಿ ಸದಸ್ಯ ಪೀಠ, ಇಸ್ಲಾಂನಲ್ಲಿ ಮಸೀದಿ ಇಸ್ಲಾಂ ನ ಅವಿಭಾಜ್ಯ ಅಂಗ ಅಲ್ಲ ಎಂದು ಅಭಿಪ್ರಾಯಪಟ್ಟಿದೆ.

ಧಾರ್ಮಿಕ ಕಾರಣಕ್ಕಾಗಿ ಅಯೋಧ್ಯೆ ಬಾಬ್ರಿ ಮಸೀದಿ ಜಾಗಕ್ಕೆ ಮುಸ್ಲಿಂ ಸಮುದಾಯ ಪಟ್ಟು ಹಿಡಿದಿರುವ ಹಿನ್ನೆಲೆಯಲ್ಲಿ ಈ ತೀರ್ಪು ಮಹತ್ವವಾದುದಾಗಿದೆ.

ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ಜಸ್ಟೀಸ್ ಅಶೋಕ್ ಭೂಷಣ್ ಮತ್ತು ಜಸ್ಟೀಸ್ ಅಬ್ದುಲ್ ನಜೀರ್ ನೇತೃತ್ವದ ತ್ರಿ ಸದಸ್ಯ ಪೀಠದಲ್ಲಿ ತೀರ್ಪು 2-1 ರ ಬಹುಮತದಲ್ಲಿ ಪ್ರಕಟಗೊಂಡಿತು.