Recent Posts

Tuesday, November 26, 2024
ಸುದ್ದಿ

19 ತಿಂಗಳಿಗೊಮ್ಮೆ ಗೋಚರಿಸುವ ಬೆಳ್ಳಿ ಚುಕ್ಕಿ ಶುಕ್ರಗ್ರಹದ ವಿಶೇಷತೆ ಏನೂ..?? – ಕಹಳೆ ನ್ಯೂಸ್

ಉಡುಪಿ: ಸುಮಾರು 19 ತಿಂಗಳಿಗೊಮ್ಮೆ ಸಂಜೆಯ ಪಶ್ಚಿಮ ಆಕಾಶದಲ್ಲಿ ವಿಜೃಂಭಿಸುವ ಶುಕ್ರ ಮೇ 30ರಂದು ಅತೀ ಎತ್ತರದಲ್ಲಿ ಸುಮಾರು 43 ಡಿಗ್ರಿ ಎತ್ತರದಲ್ಲಿ ಹೊಳೆಯುತ್ತಿದೆ.

ಮೇ 30ರಿಂದ ಜುಲೈ ಅಂತ್ಯದವರೆಗೂ ಹೊಳೆಯುತ್ತಾ ಆಗಸ್ಟ್ ಪ್ರಾರಂಭದಲ್ಲಿ ಕಣ್ಮರೆಯಾಗುತ್ತದೆ. ಆಗಸ್ಟ್ 8ರಿಂದ ಆಗಸ್ಟ್ 19ರವರೆಗೆ ಸೂರ್ಯನಿಗೆ ನೇರ ಬಂದು ಕಾಣದಾಗ “ಅಸ್ತ“ ಎನ್ನುವರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ನಂತರ ಪೂರ್ವ ಆಕಾಶದಲ್ಲಿ ಬೆಳಗಿನ ಜಾವ ಗೋಚರ. ಈಗ ಮೇ 30ರಿಂದ ಭೂಮಿಗೆ ಸಮೀಪಿಸುತ್ತಿದ್ದಂತೆ ದಿನದಿಂದ ದಿನಕ್ಕೆ ದಿಗಂತದೆಡೆಗೆ ಕೆಳಗಿಳಿಯುತ್ತಾ, ಪ್ರಭೆ ಹೆಚ್ಚಿಸಿಕೊಳ್ಳುತ್ತಾ ಜುಲೈ 7ರಂದು ಅತಿ ಹೆಚ್ಚಿನ ಪ್ರಭೆಯಲ್ಲಿ ಕಂಗೊಳಿಸುತ್ತದೆ. ಶುಕ್ರ ಈಗ ಭೂಮಿಯಿಂದ ಸುಮಾರು 15 ಕೋಟಿ ಕಿ.ಮೀ ದೂರದಿಂದ ಆಗಸ್ಟ್ 8ರ ಹೊತ್ತಿಗೆ 4 ಕೋಟಿ ಕಿ.ಮೀ ಗೆ ಸಮೀಪಿಸುತ್ತದೆ.

ಹೀಗೆ ಶುಕ್ರ ಗ್ರಹ ಕಾಣಿಸಲು ಪ್ರಮುಖ ಕಾರಣ ಶುಕ್ರ, ಬುಧಗ್ರಹದಂತೆ ಸೂರ್ಯ ಭೂಮಿ ದೂರಕ್ಕಿಂತ ಕಡಿಮೆ ದೂರದಲ್ಲಿ ಇರುವುದು. ಸೂರ್ಯನಿಂದ ಬುಧ ಸುಮಾರು 6 ಕೋಟಿ , ಶುಕ್ರ 11ಕೋಟಿ ಕಿ.ಮೀ ಆದರೆ ಭೂಮಿ 15 ಕೋಟಿ ಕಿ.ಮೀ ದೂರ.

ಹೀಗಾಗಿ ಸೌರವ್ಯೂಹದಲ್ಲಿ ಭೂಮಿಗಿಂತ ಒಳಗಿರುವ ಈ ಎರಡು ಗ್ರಹಗಳು ರಾತ್ರಿ ಇಡೀ ಕಾಣುವುದಿಲ್ಲ. ಕಾಣುವುದೇ ಪಶ್ಚಿಮ ಆಕಾಶದಲ್ಲಿ ಸಂಜೆ ಹಾಗೂ ಪೂರ್ವ ಆಕಾಶದಲ್ಲಿ ಬೆಳಗಿನ ಜಾವ.

ಸಂಜೆ ಆಕಾಶದಲ್ಲಿ ಸೂರ್ಯಾಸ್ತದ ನಂತರ ಕೆಲ ಗಂಟೆ, ಹೆಚ್ಚೆಂದರೆ ದಿಗಂತದಿಂದ 47 ಡಿಗ್ರಿ ಎತ್ತರದಲ್ಲಿ ಹಾಗೂ ಬುಧ 27 ಡಿಗ್ರಿ ಎತ್ತರದಲ್ಲಿ. ಮತ್ತೆ ಕೆಲ ಸಮಯ ಪೂರ್ವ ಆಕಾಶದಲ್ಲಿ ಸೂರ್ಯೋದಯಕ್ಕಿಂತ ಮೊದಲು. ಸೂರ್ಯನಿಂದ ಶುಕ್ರ ಸುಮಾರು 11 ಕೋಟಿ ಒಂದೇ ದೂರದಲ್ಲಿದೆಯಾದರೂ ಭೂಮಿಯಿಂದ ಯಾವಾಗಲೂ ಒಂದೇ ಇರುವುದಿಲ್ಲ. 19 ತಿಂಗಳಿಗೊಮ್ಮೆ ಅತೀ ಸಮೀಪ ದೂರ 4 ಕೋಟಿ ( ಆಗಸ್ಟ್ 13 ಇನ್ಫೀರಿಯರ್ ಕಂಜಂಕ್ಷನ್ ) ನಂತರ ಜನವರಿ 2025 ರಲ್ಲಿ ಅತ್ಯಂತ ದೂರ 26 ಕೋಟಿ ಕಿಮೀ (ಸುಪೀರಿಯರ್ ಕಂಜಂಕ್ಷನ್.)

ಗ್ರಹಗಳಲ್ಲಿ ಬರಿಗಣ್ಣಿಗೆ ಶುಕ್ರನೇ ಚೆಂದ. ಸುಮಾರು 95% ಇಂಗಾಲದ ಆಕ್ಸೈಡ್‍ಗಳ ವಾತಾವರಣ ಸ್ವಲ್ಪ ರಂಜಕದ ಡೈಆಕ್ಸೈಡ್‍ಗಳಿಂದ ಅತೀ ಹೆಚ್ಚು ಸೂರ್ಯನ ಬೆಳಕನ್ನು ಪ್ರತಿ ಫಲಿಸುವುದರಿಂದ ಶುಕ್ರ ಫಳ ಫಳ.

ದೂರದರ್ಶಕದಲ್ಲೀಗ ಶುಕ್ರಗ್ರಹ ಚೌತಿಯ ಚಂದ್ರನಂತೆ ಕಾಣುತ್ತದೆ. ಜುಲೈ ಕೊನೆಯ ವಾರ ಬಿದಿಗೆ ಚಂದ್ರನಿಗಿಂತ ಕ್ಷೀಣ.

ಲೇಖಕರು: ಡಾ. ಎ.ಪಿ ಭಟ್, ಉಡುಪಿ.