ಬಂಟ್ವಾಳ ಶಾಸಕರ ಈ ನಡೆ ಎಲ್ಲಾ ಜನಪ್ರತಿನಿಧಿಗಳಿಗೂ ಮಾದರಿ ಈ ಬಾರಿ ಬಂಟ್ವಾಳದಲ್ಲಿ ಬಿಜೆಪಿ ಗೆಲುವಿನ ಸಂಭ್ರಮಾಚರಣೆಯ ತಾಲೂಕು ಮಟ್ಟದ ಬೃಹತ್ ಕಾರ್ಯಕ್ರಮದ ಬದಲಿಗೆ ಚುನಾವಣಾ ಸಮಯದಲ್ಲಿ ಬೇರೆ ಬೇರೆ ಕಾರಣಗಳಿಂದ ಮೃತಪಟ್ಟ 4 ಬಿಜೆಪಿ ಕಾರ್ಯಕರ್ತರ ಕುಟುಂಬಗಳಿಗೆ ತಲಾ 2 ಲಕ್ಷ ರೂ ನಂತೆ ಒಟ್ಟು 8 ಲಕ್ಷ ರೂ ವೈಯಕ್ತಿಕವಾಗಿ ನೀಡುವ ಮೂಲಕ ಬಿಜೆಪಿ ಕಾರ್ಯಕರ್ತರಾದ ಜನಾರ್ಧನ ಬಾರಿಂಜೆ,ಪ್ರವೀಣ್ ಚಂದ್ರ ನಾಯಕ್ ಕಾವಳಮೂಡೂರು,ನಿತಿನ್ (ರೂಪೇಶ್) ಸರಪಾಡಿ,ವಿಜಿತ್ ಗುರುವಾಯನಕೆರೆ ಇವರುಗಳ ಕುಟುಂಬಗಳ ಸಂಕಷ್ಟಕ್ಕೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ತಮ್ಮ ಕಿರುಕಾಣಿಕೆ ಸಲ್ಲಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಬಂಟ್ವಾಳದಲ್ಲಿ ಇದೇ ಕಾರಣಕ್ಕಾಗಿ ಬಿಜೆಪಿ, ಸಂಘಪರಿವಾರದ ಕಾರ್ಯಕರ್ತರು ರಾಜೇಶಣ್ಣನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡುವುದಿಲ್ಲ. ಹಾಗಾಗಿ ಯಾವತ್ತಿಗೂ ಕಾರ್ಯಕರ್ತರುಗಳಿಗೆ ಇವರು ಮಾಣಿಕ್ಯ.