Recent Posts

Monday, January 27, 2025
ಸುದ್ದಿ

ಪಕ್ಷಿಯೊಂದನ್ನು ರಕ್ಷಿಸಲು ಹೋಗಿ ಒಂದು ಲಕ್ಷ ರೂ ಕಳೆದುಕೊಂಡ ಮಹಿಳೆ –ಕಹಳೆ ನ್ಯೂಸ್

ಒಂದು ಜೀವಕ್ಕೆ ಸಹಾಯ ಮಾಡಲು ಹೋಗಿ ಮಹಿಳೆಯೊಬ್ಬರು 1 ಲಕ್ಷ ರೂ.ಕಳೆದುಕೊಂಡಿರುವ ಘಟನೆ ಮುಂಬಯಿಯಲ್ಲಿ ನಡೆದಿದೆ.

ಪ್ರಸಿದ್ದ ಸ್ಟುಡಿಯೋವೊಂದರಲ್ಲಿ ಕೆಲಸ ಮಾಡುವ ಧ್ವನಿ ಮೆಹ್ತಾ ಎಂಬ ಮಹಿಳೆ ಇತ್ತೀಚೆಗೆ ರಸ್ತೆಯಲ್ಲಿ ಗಾಯಗೊಂಡು ಅರೆ ಜೀವ ಸ್ಥಿತಿಯಲ್ಲಿದ್ದ ಹಕ್ಕಿಯೊಂದನ್ನು ನೋಡಿದ್ದಾರೆ. ಕೂಡಲೇ ಅದನ್ನು ರಕ್ಷಿಸಿ ಕೈಯಲ್ಲಿಡಿದು ಅದರ ಸಹಾಯಕ್ಕೆ ಹೋಗಿದ್ದಾರೆ. ಧ್ವನಿ ಮೆಹ್ತಾ ಅವರಿಗೆ ಹಕ್ಕಿಗೆ ಚಿಕಿತ್ಸೆ ನೀಡುವ ಯಾವುದೇ ವೈದ್ಯರು ಗೊತ್ತಿಲ್ಲದ ಕಾರಣ ಗೂಗಲ್‌ ನಲ್ಲಿ ಈ ಕುರಿತು ಹುಡುಕಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಗೂಗಲ್‌ ನಲ್ಲಿ ಸಿಕ್ಕ ಟೋಲ್‌ ಫ್ರೀ ನಂಬರ್‌ ವೊಂದಕ್ಕೆ ಕರೆ ಮಾಡಿದ್ದಾರೆ. ಬಳಿಕ ಅತ್ತ ಕಡೆಯಿಂದ ದೂರು ನೀಡಲು ಅಪ್ಲೀಕೇಶನ್‌ ವೊಂದನ್ನು ಭರ್ತಿ ಮಾಡಿ ಎಂದು ಧ್ವನಿ ಮೆಹ್ತಾ ಅವರಿಗೆ ಹೇಳಿದ್ದಾರೆ. ಎನ್‌ ಜಿಒ ಹೇಳಿದ್ದೆಂದು ಈ ಕೆಲಸವನ್ನು ಧ್ವನಿ ಮೆಹ್ತಾ ಮಾಡಿದ್ದಾರೆ. ಅದರಲ್ಲಿದ್ದ ಮಾಹಿತಿಯನ್ನು ಹಾಕಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅಪ್ಲೀಕೇಶನ್‌ ಫಿಲ್‌ ಮಾಡಲು ನಿಗದಿತ ಶುಲ್ಕವಿದ್ದರೂ ಧ್ವನಿ ಮೆಹ್ತಾ ಅವರು ಇದನ್ನು ಪೂರ್ತಿಗೊಳಿಸಿದ್ದಾರೆ. ಈ ಪ್ರಕ್ರಿಯೆ ನಡೆದ ಬಳಿಕವೂ ಅತ್ತ ಕಡೆಯಿಂದ ಯಾವ ಸಹಾಯವೂ ಬಂದಿಲ್ಲ. ಇದಾದ 4 ದಿನಗಳ ಬಳಿಕ ರೈಲಿನಲ್ಲಿ ಸಂಚರಿಸುತ್ತಿದ್ದ ಧ್ವನಿ ಮೆಹ್ತಾ ಅವರ ಮೊಬೈಲ್‌ ಗೆ 99,988 ರೂ. ಕಡಿತವಾಗಿರುವ ಸಂದೇಶ ಬಂದಿದೆ. ಈ ವೇಳೆಯೇ ಅವರಿಗೆ ತಾನು ವಂಚಕರ ಬಲೆಗೆ ಬಿದ್ದಿದ್ದೇನೆ ಎನ್ನುವುದರ ಅರಿವು ಬಂದಿದೆ. ಆಕೆ ಘಟನೆಯ ಬಗ್ಗೆ ಸೈಬರ್ ಕ್ರೈಂ ಇಲಾಖೆಗೆ ಆನ್‌ಲೈನ್‌ನಲ್ಲಿ ಲಿಖಿತ ದೂರು ಸಲ್ಲಿಸಿದ್ದಾಳೆ.