ಚೀನಾ: ಟಿಯಾಂಗಾಂಗ್ ಬಾಹ್ಯಾಕಾಶ ನಿಲ್ದಾಣಕ್ಕೆ ಸಿಬ್ಬಂದಿ ಕಾರ್ಯಾಚರಣೆಯ ಭಾಗವಾಗಿ ಮಂಗಳವಾರ ಮೇ 30ರಂದು ಇದೇ ಮೊದಲ ಬಾರಿಗೆ ಚೀನಾ ನಾಗರಿಕ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುತ್ತಿದೆ ಎಂದು ಇಲ್ಲಿಯ ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ.
ಈವರೆಗೆ ಬಾಹ್ಯಾಕಾಶಕ್ಕೆ ತೆರಳಿದ್ದ ಎಲ್ಲಾ ಗಗನಯಾತ್ರಿಗಳು ಪೀಪಲ್ಸ್ ಲಿಬರೇಶನ್ ಆರ್ಮಿಯ ಭಾಗವಾಗಿದ್ದರು.
ಬೀಜಿಂಗ್ ಏರೋನಾಟಿಕ್ಸ್ ಮತ್ತು ಆಸ್ಟ್ರೋನಾಟಿಕ್ಸ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕ ಪೇಲೋಡ್ ತಜ್ಞ ಗುಯಿ ಹೈಚಾವೋ ಬಾಹ್ಯಾಕಾಶ ವಿಜ್ಞಾನದ ಪ್ರಾಯೋಗಿಕ ಪೇಲೋಡ್‌ಗಳ ಆನ್-ಆರ್ಬಿಟ್ ಕಾರ್ಯಾಚರಣೆಗೆ ಪ್ರಮುಖ ಭಾಗವಾಗಲಿದ್ದಾರೆ.