ಪಾಗಲ್ ಪ್ರೇಮಿಯೊಬ್ಬ ತನ್ನ ಪ್ರಿಯತಮೆಗೆ 20 ಬಾರಿ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ದೆಹಲಿಯ ರೋಹಿಣಿ ಸ್ಲಮ್ ಬಳಿ ನಡೆದಿದೆ.
16 ವರ್ಷದ ಯುವತಿ ಹಾಗೂ 20 ವರ್ಷದ ಶಾಹೀಲ್ ಇವರಿಬ್ಬರು ರಿಲೇಷನ್ಶಿಪ್ನಲ್ಲಿದ್ದರು. ಹಲವು ದಿನಗಳಿಂದ ಇಬ್ಬರ ಮಧ್ಯೆ ವೈಮನಸ್ಸು ಉಂಟಾಗಿತ್ತು ಎಂದು ತಿಳಿದುಬಂದಿದೆ. ಹತ್ಯೆಗೊಳಗಾದ ಯುವತಿಯು ಸಂಬAಧಿಕರೊಬ್ಬರ ಪುತ್ರನ ಬರ್ತಡೇ ಆಚರಣೆಗೆ ಹೋಗುತ್ತಿದ್ದಳು. ಈ ವೇಳೆ ಆಕೆಯನ್ನ ಆರೋಪಿ ಶಾಹೀಲ್ ತಡೆದಿದ್ದಾನೆ. ಮಾತ್ರವಲ್ಲ ಮಾತಿಗೆ ಮಾತು ಬೆಳೆಸಿ ಚಾಕುವಿನಿಂದ 20ಬಾರಿ ಇರಿದು ಸಾಯಿಸಿದ್ದಾನೆ. ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 302 ಅಡಿಯಲ್ಲಿ ಕೇಸ್ ದಾಖಲಿಸಿಕೊಂಡು ಹುಡುಕಾಟ ನಡೆಸುತ್ತಿದ್ದಾರೆ. ಕೃತ್ಯದ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.