Friday, January 24, 2025
ಸುದ್ದಿ

ಈಜಲು ತೆರಳಿದ ಬಾಲಕ ಸಹಿತ ಇಬ್ಬರು ಸಾವು : ಮೂವರು ಬಾಲಕರ ರಕ್ಷಣೆ – ಕಹಳೆ ನ್ಯೂಸ್

ಕುಂದಾಪುರ : ಮದಗದಲ್ಲಿ ಈಜಲು ತೆರಳಿದ ಇಬ್ಬರು ನೀರಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಸೋಮವಾರ ಸಂಜೆ ಕಂದಾವರ ಗ್ರಾಮದ ಮೂಡ್ಲಕಟ್ಟೆಯಲ್ಲಿ ಸಂಭವಿಸಿದೆ‌. ಭರತ್ ಶೆಟ್ಟಿಗಾರ್ (16) ಹಾಗೂ ರಾಜೇಂದ್ರ ಶೆಟ್ಟಿಗಾರ್ (27) ಸಾವನ್ನಪ್ಪಿದವರು.

ಸೋಮವಾರ ಸಂಜೆ ಕಂದಾವರ – ಮೂಡ್ಲಕಟ್ಟೆಯ ಸಮೀಪದ ಮದಗದಲ್ಲಿ ರಾಜೇಂದ್ರ, ಭರತ್ ಹಾಗೂ ಇನ್ನು ಮೂವರು ಬಾಲಕರು ಈಜಲು ನೀರಿಗಿಳಿದಿದ್ದು, ಈ ವೇಳೆ ನಾಲ್ವರು ನೀರಲ್ಲಿ ಮುಳುಗುತ್ತಿದ್ದುದನ್ನು ಕಂಡ ರಾಜೇಂದ್ರ ಅವರು ಮೂವರನ್ನು ರಕ್ಷಿಸಿದ್ದು, ಆದರೆ ಭರತ್ ನನ್ನು ರಕ್ಷಿಸುವಷ್ಟರಲ್ಲಿ ತಾನು ಸಹ ಈಜಲು ಸಾಧ್ಯವಾಗದೇ ಸಾವನ್ನಪ್ಪಿರುವುದಾಗಿ ಸ್ಥಳೀಯರು ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಶಂಕರನಾರಾಯಣ ಸಮೀಪದ ನಿವಾಸಿ ಗಣೇಶ್ ಶೆಟ್ಟಿಗಾರ್ ಅವರ ಪುತ್ರ ಭರತ್ ಎಸೆಸೆಲ್ಸಿ ವಿದ್ಯಾರ್ಥಿಯಾಗಿದ್ದು, ಅಜ್ಜಿಮನೆಗೆ ಬಂದಿದ್ದರು. ರಾಜೇಂದ್ರ ಅವರು ಶಂಕರನಾರಾಯಣದ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕರಾಗಿದ್ದರು ಎಂದು ತಿಳಿದು ಬಂದಿದೆ.

ಕುಂದಾಪುರ ಅಗ್ನಿ ಶಾಮಕ ದಳದ ಸಿಬಂದಿ ಸ್ಥಳಕ್ಕೆ ಆಗಮಿಸಿ, ಸ್ಥಳೀಯರ ಸಹಕಾರದೊಂದಿಗೆ ಮೃತದೇಹಗಳನ್ನು ಮೇಲೇತ್ತುವಲ್ಲಿ ಸಹಕರಿಸಿದರು.
ಕುಂದಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.