Thursday, January 23, 2025
ಸುದ್ದಿ

ಅಟೋರಿಕ್ಷಾ ಮತ್ತು ಬೈಕ್ ನಡುವೆ ಬೀಕರ ಅಪಘಾತ ; ಇಬ್ಬರಿಗೆ ಗಂಭೀರ ಗಾಯ – ಕಹಳೆ ನ್ಯೂಸ್

ಬಂಟ್ವಾಳ: ಅಟೋರಿಕ್ಷಾ ಮತ್ತು ಬೈಕ್ ನಡುವೆ ಸಂಭವಿಸಿದ ಡಿಕ್ಕಿಯಲ್ಲಿ ಬೈಕ್ ಸವಾರ ಹಾಗೂ ರಿಕ್ಷಾ ಚಾಲಕ ಸಹಿತ ಪ್ದಯಾಣಿಕರಿಬ್ಬರಿಗೆ ಗಂಭೀರವಾಗಿ ಗಾಯಗೊಂಡ ಘಟನೆ ಭಂಡಾರಿ ಬೆಟ್ಟು ಎಂಬಲ್ಲಿ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ರಿಕ್ಷಾ ಚಾಲಕ ಬಂಟ್ವಾಳ ನಾವೂರ ನಿವಾಸಿ ತಾರನಾಥ, ರಿಕ್ಷಾ ಪ್ರಯಾಣಿಕ ಶಂಕರ ಹಾಗೂ ಬೈಕ್ ಸವಾರ ಬೆಳ್ತಂಗಡಿ ಉಜಿರೆ ನಿವಾಸಿ ಜೊಸ್ಟಿಲಿನ್ ಡಿ.ಸೋಜ, ಸಹಸವಾರ ರಶ್ಮಿತ್ ಹೀಗೆ ನಾಲ್ವರು ಗಾಯಗೊಂಡವರು.
ಇಂದು ಮೇ. 30 ರಂದು ಮಧ್ಯಾಹ್ನದ ಸಮಯದಲ್ಲಿ ಬಂಟ್ವಾಳದ ಭಂಡಾರಿಬೆಟ್ಟು ಎಂಬಲ್ಲಿ ಅಪಘಾತ ಸಂಭವಿಸಿದೆ.ಬೈಕ್ ಸವಾರ ಬೆಳ್ತಂಗಡಿ ಕಡೆಯಿಂದ ಬರುತ್ತಿದ್ದ ವೇಳೆ ಭಂಡಾರಿಬೆಟ್ಟು ಎಂಬಲ್ಲಿ ಬಿಸಿರೋಡಿನಿಂದ ಬಂಟ್ವಾಳ ಕಡೆಗೆ ಹೋಗುವ ಸಂದರ್ಭದಲ್ಲಿ ಎರಡು ವಾಹನಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ.
ಡಿಕ್ಕಿಯ ರಭಸಕ್ಕೆ ರಿಕ್ಷಾ ಹಾಗೂ ಬೈಕ್ ಎರಡು ವಾಹನಗಳು ಜಖಂಗೊoಡಿದೆ.ಹಾಗೂ ಎರಡು ವಾಹನಗಳ ಚಾಲಕರಿಗೆ ಗಂಭೀರವಾದ ಗಾಯವಾಗಿದ್ದು ನಾಲ್ವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಟ್ರಾಫಿಕ್ ಎಸ್.ಐ.ಮೂರ್ತಿ ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ