Thursday, January 23, 2025
ಸುದ್ದಿ

ಭಾರತೀಯ ಜೈನ್ ಮಿಲನ್ ಮಂಗಳೂರು ಶಾಖೆಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ –ಕಹಳೆ ನ್ಯೂಸ್

ಭಾರತೀಯ ಜೈನ್ ಮಿಲನ್ ಮಂಗಳೂರು ಶಾಖೆಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಎಸ್ ಡಿ ಎಂ ಕಾನೂನು ಮಹಾವಿದ್ಯಾಲಯದ  ಸಭಾಂಗಣದಲ್ಲಿ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಭಾರತೀಯ ಜೈನ್ ಮಿಲನ್ ನ ರಾಷ್ಟ್ರೀಯ ಕಾರ್ಯಾಧ್ಯಕ್ಷರಾದ ಧರ್ಮಸ್ಥಳ ಸುರೇಂದ್ರ ಕುಮಾರ್ ರವರು ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ, ನೂತನ ಪದಾಧಿಕಾರಿಗಳಿಗೆ ಪ್ರಮಾಣವಚನ ನೀಡಿ ನೂತನ ತಂಡಕ್ಕೆ ಅಭಿನಂದನೆ ಸಲ್ಲಿಸಿ ಶಾಖೆಯ ಮುಂದಿನ ಬೆಳವಣಿಗೆಗೆ ಪೂರಕವಾಗಿ ಸಲಹೆಗಳನ್ನು ನೀಡಿದರು ಹಾಗೂ ಮಿಲನ್ ವತಿಯಿಂದ ಡಿ ಸುರೇಂದ್ರ ಕುಮಾರ್ ರವರನ್ನು ಸನ್ಮಾನಿಸಲಾಯಿತು.

ಶಾಶ್ವತಿ ಸಚಿನ್ ತಂಡದ ಪ್ರಾರ್ಥನೆಯೊಂದಿಗೆ ಆರಂಭವಾದ ಸಮಾರಂಭದಲ್ಲಿ ಮಿಲನ್ ನ ಶ್ರೀ ಪ್ರಮೋದ್ ಕುಮಾರ್ ರವರು ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಭಾರತೀಯ ಜೈನ್ ಮಿಲನ್ ವಲಯ 8 ರ ಉಪಾಧ್ಯಕ್ಷರು ಹಾಗೂ ಮಂಗಳೂರು ವಿಭಾಗದ ಅಧ್ಯಕ್ಷರಾದ ಸುದರ್ಶನ್ ರವರು ಮಿಲನ್ ನ ಕಾರ್ಯಯೋಜನೆಯ ಬಗಗೆ ಪರಿಚಯಿಸಿ ದರು. ನೂತನ ಪದಾಧಿಕಾರಿಗಳಿಗೆ ಶ್ರೀ ಪುಷ್ಪರಾಜ್ ಜೈನ್ ಶುಭ ಹಾರೈಸಿದರು. ಸುಕುಮಾರ್ ಬಳ್ಳಾಲ್ ಸಹಿತ ಮಿಲನ್ ನ ಹಲವು ಗಣ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.

ಸಭೆಯಲ್ಲಿ ಮಿಲನ್ ಹಾಗೂ ಸಾಮಾಜಿಕವಾಗಿ ಸೇವೆ ಸಲ್ಲಿಸಿದ ಹಿರಿಯರನ್ಬು ವಿಶೇಷವಾಗಿ ಗುರುತಿಸಿ ಫಲಕ ಸಹಿತ ಗೌರವ ಸನ್ಮಾನ ಮಾಡಲಾಯಿತು. ಮಂಗಳೂರು ಮಿಲನ್ ಸ್ಥಾಪಕಾಧ್ಯಕ್ಷರಾದ ಶ್ರೀ ಸುರೇಶ್ ಬಳ್ಳಾಲ್, ಮಿಲನ್ ನ ವಲಯ ಮಾಜಿ ಅಧ್ಯಕ್ಷರಾದ ಶ್ರೀ ವಿಧ್ಯಾದರ್ ಶೆಟ್ಟಿ ಹಾಗೂ ಜನಾನುರಾಗಿ ವೈಧ್ಯೆ ಮಾಲತಿ ಹೆಗ್ಡೆಯರ ಸಾಧನೆಗಳನ್ನು ಸಭೆಗೆ ಪರಿಚಯಿಸಿ ಗೌರವಿಸಲಾಯಿತು.

ನೂತನ ಖಜಾಂಚಿಯಾಗಿ ಆಯ್ಕೆಯಾದ ಪ್ರಿಯ ಸುದೇಶ್ ರವರ ಸುಂದರ ನಿರೂಪಣೆಯಲ್ಲಿ ಜರುಗಿದ ಈ ಸಭೆಯಲ್ಲಿ ನೂತನ ಅಧ್ಯಕ್ಷರಾದ ರತ್ನಾಕರ್ ಜೈನ್ ರವರ ಆಶಯ ನುಡಿಗಳನ್ನಾಡಿ ವಂದನಾರ್ಪಣೆ ನೆರವೇರಿಸಿದರು. ಕಾರ್ಯಕ್ರಮ ಸಂಯೋಜನೆಯಲ್ಲಿ ಮಿಲನ್ ನ ರಾಜೇಶ್ ಎಂ ,ಶಿಲ್ಪ ಸಂದೀಪ್ ಹಾಗೂ ಸಿದ್ದಾರ್ಥ ಅಜ್ರಿಯವರು ಸಹಕರಿಸಿದರು.

ರತ್ನಾಕರ್ ಜೈನ್ ರವರು ಜೈನ್ ಮಿಲನ್ ಮಂಗಳೂರು ಶಾಖೆಯ ನೂತನ ಅಧ್ಯಕ್ಷರಾಗಿ ಉಪಾಧ್ಯಕ್ಷರಾಗಿ ನಿರ್ಮಲ್ ಕುಮಾರ್ ಹಾಗೂ ಮಹಾವೀರ್ ಪ್ರಸಾದ್, ಕಾರ್ಯದರ್ಶಿಗಳಾಗಿ ವೈಶಾಲಿ ಪಡಿವಾಳ್, ಸಹ ಕಾರ್ಯದರ್ಶಿಗಳಾಗಿ ಸನತ್ ಕುಮಾರ್ ಜೈನ್ ಮತ್ತು ಸಂತೋಷ್ ಜೈನ್ ಹಾಗೂ ಖಜಾಂಚಿಗಳಾಗಿ ಪ್ರಿಯ ಸುದೇಶ್ ಪ್ರಮಾಣವಚನ ಸ್ವೀಕರಿಸಿದರು