ಬಂಟ್ವಾಳ: ನೇಣು ಬಿಗಿದ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯೋರ್ವನ ಮೃತದೇಹ ಬಂಟ್ವಾಳ ನಗರ ಪೋಲೀಸ್ ಠಾಣಾ ವ್ಯಾಪ್ತಿಯ ನರಿಕೊಂಬುವಿನಲ್ಲಿ ಪತ್ತೆಯಾಗಿದೆ.
ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ಅಂತರ ಎಂಬಲ್ಲಿರುವ ಗುಡ್ಡವೊಂದರಲ್ಲಿ ಸುಮಾರು 40 ರಿಂದ 50 ವಯಸ್ಸಿನ ಗಂಡಸಿನ ಮೃತದೇಹ ಪತ್ತೆಯಾಗಿದೆ.
ಗುಡ್ಡದ ಪಕ್ಕದ ಜಮೀನಿನವರು ತೋಟಕ್ಕೆ ನೀರು ಬಿಡಲು ಹೋದ ವೇಳೆ ಗುಡ್ಡೆಯಲ್ಲಿ ವಾಸನೆ ಬರುತ್ತಿದೆ ಎಂದು ಹೋಗಿ ನೋಡಿದಾಗ ಮರದಲ್ಲಿ ಮೃತದೇಹ ನೇತಾಡುತ್ತಿರುವುದು ಗಮನಕ್ಕೆ ಬಂದಿದೆ. ಅವರು ಬಂಟ್ವಾಳ ನಗರ ಠಾಣಾ ಪೋಲೀಸರಿಗೆ ಮಾಹಿತಿ ನೀಡಿದ್ದಾರೆ.
ಮೃತದೇಹದಕ್ಕೆ ಸುಮಾರು 10 ದಿನಗಳ ಕಾಲ ಆಗಿರಬಹುದು ಎಂದು ಅಂದಾಜಿಸಲಾಗಿದೆ.
ಕೊಳೆತ ಸ್ಥಿತಿಯಲ್ಲಿರುವುದರಿಂದ ಮುಖದ ಗುರುತು ಹಿಡಿಯಲು ಸ್ವಲ್ಪ ಮಟ್ಟಿಗೆ ಕಷ್ಟಸಾಧ್ಯ ಎನ್ನಲಾಗಿದೆ.ಅಂದಾಜು ಹದಿಹರೆಯದ ವ್ಯಕ್ತಿಯ ದೇಹವನ್ನು ಹೋಲುತ್ತಿದ್ದು, ಪ್ಯಾಂಟ್ ಮತ್ತು ಟೀ ಶರ್ಟ್ ಧರಿಸಿದ್ದಾನೆ.
ಸದ್ಯಕ್ಕೆ ತಾಲೂಕಿನ ಠಾಣೆಗಳಲ್ಲಿ ಯಾವುದೇ ಕಾಣೆಯಾದ ಪ್ರಕರಣ ದಾಖಲಾಗಿರುವುದು ಕಂಡುಬAದಿಲ್ಲವಾದ್ದರಿAದ ತಾಲೂಕಿನ ವ್ಯಕ್ತಿಯಾ? ಅಥವಾ ಬೇರೆ ತಾಲ್ಲೂಕಿನ ವ್ಯಕ್ತಿ ಯಾ ಎಂಬುದು ಸಂಶಯ ವ್ಯಕ್ತವಾಗಿದೆ.
ಇದೊಂದು ಆತ್ಮಹತ್ಯೆ ಪ್ರಕರಣವಾಗಿರಬಹುದ ಅಥವಾ ಇನ್ನು ಬೇರೆ ಕಾರಣಗಳಿರಬಹುದಾ? ಎಂಬುದು ಪೋಲೀಸ್ ತನಿಖೆ ಹಾಗೂ ಮೃತದೇಹದ ಮರಣೋತ್ತರ ಪರೀಕ್ಷೆ ಬಳಿಕ ವಾಸ್ತವ ಅಂಶ ಬೆಳಕಿಗೆ ಬರಬಹುದು.
ಸ್ಥಳಕ್ಕೆ ಬಂಟ್ವಾಳ ನಗರ ಠಾಣಾ ಎಸ್. ಐ.ರಾಮಕೃಷ್ಣ ಅವರು ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದರೆ.ಅಪರಿಚಿತ ಶವವನ್ನು ಗುರುತು ಪತ್ತೆ ಹಚ್ಚಲು ಕೋರಿದ ಅವರು ಮೃತದೇಹವನ್ಹು ಬಂಟ್ವಾಳ ಸರಕಾರಿ ಆಸ್ಪತ್ರೆಯ ಶವಗಾರದಲ್ಲಿ ಇಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.