Thursday, January 23, 2025
ಸುದ್ದಿ

ಜರ್ನಿ ಥಿಯೇಟರ್ ಕುಡ್ಲ ಇವರಿಂದ ನರಿಕೊಂಬು ಗ್ರಾಮದ ಮೋಗರ್ನಾಡಿನಲ್ಲಿ ನಡೆದ ಬೀದಿ ನಾಟಕ – ಕಹಳೆ ನ್ಯೂಸ್

ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಜಲಜೀವನ್ ಮಿಷನ್ ಮತ್ತು ಸ್ವಚ್ಛ ಭಾರತ ಮಿಷನ್ ಯೋಜನೆಯ ಅಡಿಯಲ್ಲಿ ಮಾಹಿತಿ ಶಿಕ್ಷಣ ಮತ್ತು ಸಂವಹನ ಹಾಗೂ ಮಾನವ ಸಂಪನ್ಮೂಲ ಅಭಿವೃದ್ಧಿ ಕಾರ್ಯಕ್ರಮಗಳ ಅಂಗವಾಗಿ ಬೀದಿ ನಾಟಕ ಚಾಲನೆಯನ್ನು ಬಂಟ್ವಾಳ ತಾಲೂಕು ನರಿಕೊಂಬು ಗ್ರಾಮದ ಮೋಗರ್ನಾಡು ಎಂಬಲ್ಲಿ ಜರ್ನಿ ಥಿಯೇಟರ್ ಕುಡ್ಲ ಇವರು ನಡೆಸಿಕೊಟ್ಟರು.

ನರಿಕೊಂಬು ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀಮತಿ ವಿನುತಾ ಪುರುಷೋತ್ತಮ್ ತಾಸೆ ಬಡಿವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದಲ್ಲಿ ಪಂಚಾಯತ್ ಉಪಾಧ್ಯಕ್ಷ ಪ್ರಕಾಶ್ ಮಡಿಮಗೆರು, ಸದಸ್ಯರಾದ ಕಿಶೋರ್ ಶೆಟ್ಟಿ ಅಂತರ, ರಂಜಿತ್ ಕೆದ್ಧೇಲ್ , ಶ್ರೀಮತಿ ಉಷಾಲಾಕ್ಷಿರಮಾನಂದ,ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶಿವ ಬಿರಾದಾರ್, ಗ್ರಾಮ ವ್ಯಾಪ್ತಿಯ ಆಶಾ ಕಾರ್ಯಕರ್ತೆಯರು, ಎನ್ ಎಂ ಆರ್ ಸದಸ್ಯರುಗಳು ಉಪಸ್ಥಿತರಿದ್ದರು.