Friday, January 24, 2025
ಸುದ್ದಿ

ಮದಗಕ್ಕೆ ಈಜಲು ತೆರಳಿದ ಉಪನ್ಯಾಸಕ ಸೇರಿ ಇಬ್ಬರು ನೀರು ಪಾಲು –  ಕಹಳೆ ನ್ಯೂಸ್ 

ಕುಂದಾಪುರ : ಕುಂದಾಪುರ ತಾಲೂಕಿನ ಕಂದಾವರ ಗ್ರಾಮದ ಉಳ್ಳೂರು – ಕಾಡಿನಕೊಂಡ ಎಂಬಲ್ಲಿ ಕಂದಾವರ ಡಂಪಿಂಗ್ ಯಾರ್ಡ್ ಹತ್ತಿರದ ಮದಗಗಕ್ಕೆ ಈಜಲು ತೆರಳಿದ ಶಂಕರನಾರಾಯಣ ಮದರ್ ಥೇರಸಾ ಕಾಲೇಜಿನ ಉಪನ್ಯಾಸಕ ಸೇರಿ ಇಬ್ಬರು ನೀರು ಪಾಲಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಶಂಕರನಾರಾಯಣ ಮದರ್ ಥೆರೆಸಾ ಕಾಲೇಜಿನ ಉಪನ್ಯಾಸಕ ರಾಜೇಂದ್ರ ಶೆಟ್ಟಿಗಾರ (28) ಶಂಕರನಾರಾಯಣ ಹೈಸ್ಕೂಲ್ ವಿದ್ಯಾರ್ಥಿ ಭರತ್ ಶೆಟ್ಟಿಗಾರ (15) ನೀರಲ್ಲಿ ಮುಳುಗಿ ಮೃತರಾಗಿದ್ದಾರೆ.

ಇಲ್ಲಿನ ನಾಲ್ಕು ಎಕರೆ ವಿಸ್ತಾರದ ಮದಗಕ್ಕೆ ವಾರಾಹಿ ಏತ ನೀರಾವರಿ ಯೋಜನೆಯ ಮೂಲಕ ನೀರು ಹರಿದು ಬಂದಿರುವ ಉಳ್ಳೂರು – ಕಂದಾವರದ ಬೊಬ್ಬಯ೯ ಕೊಡ್ಲು ಮದಗಕ್ಕೆ 6 ಜನ ಈಜಲು ತೆರಳಿದ್ದಾರೆ. ಸುಮಾರು 10 ಫೀಟ್ ನೀರಿರುವ ಮದಗದಲ್ಲಿ ಭರತ್ ಆಯತಪ್ಪಿ ಮುಳುಗಿದ್ದನ್ನು ನೋಡಿದ ರಾಜೇಂದ್ರ ರಕ್ಷಣೆಗೆ ತೆರಳಿದಾಗ ಈಜು ಬಾರದ ಇಬ್ಬರೂ ನೀರಿನಲ್ಲಿ ಮುಳುಗಿದ್ದಾರೆ.

ಭರತ್ ರಜೆಯ ಕಾರಣ ತನ್ನ ತಾಯಿಯ ಮನೆಗೆ ಬಂದಿದ್ದ, ಬಹುಮುಖ ಪ್ರತಿಭಾವಂತ ರಾಜೇಂದ್ರ ಮಂಗಳೂರಿನ ಎಕ್ಸ್ ಪಟ್೯ ಕಾಲೇಜಿನಲ್ಲಿ ಸೇವೆ ಸಲ್ಲಿಸಿ, ಇತ್ತೀಚೆಗೆ ಶಂಕರನಾರಾಯಣ ಕಾಲೇಜಿಗೆ ಸೇರಿದ್ದರು.

ಅಗ್ನಿ ಶಾಮಕ ದಳದವರು ಆಗಮಿಸಿ ಇಬ್ಬರ ಶವವನ್ನು ಮೇಲಕ್ಕೆತ್ತಿದ್ದಾರೆ. ಕಂಡ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.