Thursday, January 23, 2025
ಸುದ್ದಿ

ಬಂದಾರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಜೂ. 6ರಂದು ನಡೆಯಲಿದೆ ಜನವಸತಿ ವಾರ್ಡ್ ಸಭೆ ಮತ್ತು ಗ್ರಾಮ ಸಭೆ – ಕಹಳೆ ನ್ಯೂಸ್

ಬೆಳ್ತಂಗಡಿ : ಬಂದಾರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಜೂ. 6ರಂದು ಜನವಸತಿ ವಾರ್ಡ್ ಸಭೆ ಮತ್ತು ಗ್ರಾಮ ಸಭೆ ನಡೆಯಲಿದೆ.
ಜೂ.6 ರಂದು ಬೆಳಗ್ಗೆ 10.00 ಗಂಟೆಗೆ ಬಂದಾರು ಒಂದನೇ ವಾರ್ಡ್ನವರಿಗೆ ಬಂದಾರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಸಭೆ ನಡೆಯಲಿದ್ದು, ವಾರ್ಡ್ ನಂ.2ನವರಿಗೆ ಮೈಲೋಳ್ತಡ್ಕ ದ.ಕ.ಜಿ.ಪ.ಹಿ.ಪ್ರಾ. ಶಾಲೆಯಲ್ಲಿ ಅಪರಾಹ್ನ 1.30ಕ್ಕೆ ಸಭೆ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಬಂದಾರು 3ನೇ ವಾರ್ಡ್ಗೆ ಅಪರಾಹ್ನ 3:30ಕ್ಕೆ ಬೈಪಾಡಿಯ ದ.ಕ.ಜಿ.ಪ. ಹಿ.ಪ್ರಾ. ಶಾಲೆಯಲ್ಲಿ ಸಭೆ ನಡೆಯಲಿದ್ದು, ಮುಗೇರಡ್ಕ ದ.ಕ.ಜಿ.ಪ.ಕಿ.ಪ್ರಾ.ಶಾಲೆಯಲ್ಲಿ ಬೆಳಗ್ಗೆ 11 ಗಂಟೆಗೆ ಮೊಗ್ರು 1ನೇ ವಾರ್ಡ್ನವರಿಗೆ ಹಾಗೂ ಬುಳೇರಿಯ ದ.ಕ.ಜಿ.ಪಂ.ಹಿ.ಪ್ರಾ.ಶಾಲೆಯಲ್ಲಿ ಮಧ್ಯಾಹ್ನ 2.30ಕ್ಕೆ ಮೊಗ್ರು 2ನೇ ವಾರ್ಡ್ನವರಿಗೆ ವಾರ್ಡ್ ಸಭೆ ನಡೆಯಲಿದೆ.

ಗ್ರಾಮ ಸಭೆ ಬಂದಾರು ಗ್ರಾಮ ಪಂಚಾಯತ್‌ನ 2022-23ನೇ ದ್ವಿತೀಯ ಸುತ್ತಿನ ಗ್ರಾಮ ಸಭೆಯನ್ನು ಜೂ. 09 ರಂದು ಬಂದಾರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಲಿದ್ದು, ಗ್ರಾಮಸ್ಥರೆಲ್ಲರೂ ವಾರ್ಡ್ ಸಭೆ ಹಾಗೂ ಗ್ರಾಮ ಸಭೆಯಲ್ಲಿ ಭಾಗವಹಿಸಿ ಸೂಕ್ತ ಸಲಹೆ ಸೂಚನೆಗಳನ್ನಿತ್ತು ಸಹಕರಿಸುವಂತೆ ಗ್ರಾಮ ಪಂಚಾಯತ್‌ನ ಅಧ್ಯಕ್ಷರು ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರು ಮನವಿ ಮಾಡಿಕೊಂಡಿದ್ದಾರೆ.

ಗ್ರಾಮ ಸಭೆಯ ಕಾರ್ಯಸೂಚಿ :
1. ಕಳೆದ ಗ್ರಾಮ ಸಭೆಯ ನಡವಳಿಗಳ ಕುರಿತು.
2. ವಿವಿಧ ಶೀರ್ಷಿಕೆಯಡಿ ಜಮಾ ಖರ್ಚಿನ ವಿವರ ಮಂಡನೆ
3. ವಾರ್ಡ್ ಸಭೆಯಲ್ಲಿ ಬಂದ ಪ್ರಸ್ತಾವನೆಗಳ ಅನುಮೋದನೆ ಕುರಿತು
4. ವಿವಿಧ ಇಲಾಖೆಗಳ ಮಾಹಿತಿ
5. ಅಧ್ಯಕ್ಷರ ಅನುಮತಿ ಮೇರೆಗೆ ಚರ್ಚಿಸತಕ್ಕ ಇತರ ವಿಷಯಗಳು.