Thursday, January 23, 2025
ಸುದ್ದಿ

ಬೆಳಾಲು-ಪೆರಿಯಡ್ಕ ಸರಕಾರಿ ಕಿರಿಯ ಪ್ರಾಥಮಿಕ‌ ಶಾಲೆಯ ಶಾಲಾ ಪ್ರಾರಂಭೋತ್ಸವ. – ಕಹಳೆ ನ್ಯೂಸ್

ಬೆಳಾಲು : ಮೇ 31 ಬೆಳಾಲು ಗ್ರಾಮದ‌ ಪೆರಿಯಡ್ಕ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಇಲ್ಲಿನ 2023-24 ಸಾಲಿನ ಶಾಲಾ ಪ್ರಾರಂಭೋತ್ಸವವನ್ನು ಸಡಗರದಿಂದ ಆಚರಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷರಾದ ಸಂತೋಷ ಮಡಿವಾಳ ಇವರು ದೀಪ ಬೆಳಗಿಸಿ ಈ ಶೈಕ್ಷಣಿಕ ವರ್ಷಕ್ಕೆ ಚಾಲನೆ ನೀಡಿದರು.ಈ ಸಂಧರ್ಭದಲ್ಲಿ ಬೆಳಾಲು ಗ್ರಾ.ಪಂ ಸದಸ್ಯೆ ಶ್ರೀಮತಿ ‌ವಿದ್ಯಾ ಶ್ರೀನಿವಾಸ್ ಗೌಡ ಮತ್ತು ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ವಿಜಯ ಹಾಗು ಉದ್ಯಮಿ ಜಯಣ್ಣ ಮಿನಂದೇಲು ಉಪಸ್ಥಿತರಿದ್ದರು.

ಮುಖ್ಯೋಪಾಧ್ಯಾಯರು ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು,ಸಹ ಶಿಕ್ಷಕಿ ಜಯಶ್ರೀ ವಂದಿಸಿದರು.ಗೌರವ ಶಿಕ್ಷಕಿ ಭವ್ಯಶ್ರೀ ಸಹಕರಿಸಿದರು ಜಯಣ್ಣ ಮಿನಂದೇಲು ಇವರನ್ನು ಗೌರವಿಸಲಾಯಿತು.

ಎಸ್.ಡಿ.ಎಂ.ಸಿ ಸದಸ್ಯರು ,ಪೋಷಕರು,ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.ಒಂದನೇ ತರಗತಿಯ ವಿದ್ಯಾರ್ಥಿಗಳನ್ನು ಪುಷ್ಪಗುಚ್ಚ ನೀಡಿ ಆರತಿ ಎತ್ತಿ ತಿಲಕವಿಟ್ಟು ಶಾಲೆಗೆ ಬರಮಾಡಿಕೊಳ್ಳಲಾಯಿತು,ವಿದ್ಯಾರ್ಥಿಗಳಿಗೆ ಬರವಣಿಗೆ ಪುಸ್ತಕ,ಓದುವ ಪುಸ್ತಕ‌, ಕ್ರೇಯಾನ್ಸ್, ರಬ್ಬರ್ ಪೆನ್ಸಿಲ್ ನ್ನು ಉದ್ಯಮಿ ಜಯಣ್ಣ ಮಿನಂದೇಲು ನೀಡಿ ಸಹಕರಿಸಿದರು ಹಾಗೂ ಮಕ್ಕಳಿಗೆ ಸಮವಸ್ತ್ರ ವಿತರಿಸಲಾಯಿತು.

ಸಿಹಿಯಾದ ಪಾಯಸದ ಜೊತೆ ಊಟ ನೀಡಿ ಮಕ್ಕಳಿಗೆ‌ ಮೊದಲ‌ ದಿನದ ಶಾಲೆ ಸವಿ ಸವಿಯಾಗಿರುವಂತೆ ಕಾರ್ಯಕ್ರಮ‌ ಆಯೋಜಿಸಲಾಗಿತ್ತು.ಶಾಲೆಯನ್ನು ತಳಿರು ತೋರಣಗಳಿಂದ ಸಿಂಗರಿಸಿದ್ದು ಆಕರ್ಷಣಿಯವಾಗಿತ್ತು.