Thursday, January 23, 2025
ಸುದ್ದಿ

ಕರಾವಳಿಯಲ್ಲೂ ಇತ್ತು “ಸೆಂಗೋಲ್” : ಫೋಟೋ ವೈರಲ್ – ಕಹಳೆ ನ್ಯೂಸ್

ಉಡುಪಿ : ಇತ್ತೀಚೆಗೆ ನೂತನ ಸಂಸತ್ತಿನ ಉದ್ಘಾಟನೆ ಸಂದರ್ಭದಲ್ಲಿ “ಸೆಂಗೋಲ್ ” ಭಾರಿ ಸುದ್ದಿಯಲ್ಲಿತ್ತು. ಇದೇ ಸೆಂಗೋಲ್ ಮಾದರಿಯ ರಾಜದಂಡದ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗುತ್ತಿದೆ ,ಅದು ಉಡುಪಿಗೆ ಸಂಬಂಧಿಸಿದ ಚಿತ್ರ.

ಜಾಹೀರಾತು
ಜಾಹೀರಾತು
ಜಾಹೀರಾತು

ಉಡುಪಿಯ ಬಿಜೆಪಿ ಮುಖಂಡ,ಮಾಜಿ ಬಿಜೆಪಿ ಜಿಲ್ಲಾಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ಅವರು ಪಟ್ಟದ ಕತ್ತಿ ಹಿಡಿದು ಕೈಯಲ್ಲಿ ಸೆಂಗೋಲ್ ಹಿಡಿದ ಭಂಗಿಯಲ್ಲಿರುವ ಚಿತ್ರ ಇದಾಗಿದೆ. ಈ ಬಗ್ಗೆ ತಿಂಗಳೆ ವಿಕ್ರಮಾರ್ಜುನ ಹೆಗ್ಡೆಯವರು ಸ್ಪಷ್ಟನೆ ನೀಡಿದ್ದಾರೆ. ಈ ಹಿಂದೆ ದ. ಕ. ಹಾಗೂ ಉಡುಪಿ ಜಿಲ್ಲೆಯಲ್ಲಿ ಹಲವು ಅರಮನೆಗಳಿದ್ದವು. ಆ ಅರಮನೆಗಳಿಗೆ ಪಟ್ಚದರಸ ಎಂದು ನೇಮಕ ಮಾಡುವ ಪರಿಪಾಠವಿತ್ತು. ಮಕ್ಕಳ ಕಟ್ಟು,ಅಳಿಯಕಟ್ಚು ಪ್ರಕಾರ ಪುರುಷನೊಬ್ಬನಿಗೆ ಪಟ್ಟಾಭಿಷೇಕ ಮಾಡಲಾಗುತ್ತದೆ. ತಿಂಗಳೆ ವಿಕ್ರಮಾರ್ಜುನ ಹೆಗ್ಗಡೆಯವರದ್ದು ತಿಂಗಳೆ ಅರಸು ಮನೆತನ. ಅವರ ಅಜ್ಜ ಶಿವರಾಮ ಹೆಗ್ಡೆ, ತಂದೆ ರವೀಂದ್ರ ಹೆಗ್ಡೆಯವರಿಗೆ ಅರಸು ಪಟ್ಟವಾಗಿರಲಿಲ್ಲ, ನಂತರದ ದಿನಗಳಲ್ಲಿ ದೈವ ದೇವರ ಅಪೇಕ್ಷೆಯಂತೆ ವಿಕ್ರಮಾರ್ಜುನ ಹೆಗ್ಡೆಯವರಿಗೆ ಪಟ್ಟಾಭಿಷೇಕವಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಪಟ್ಟದ ಅರಮನೆಯಲ್ಲಿ ಪ್ರಸಿದ್ಧ ಕುಲ ದೇವರು, ಪ್ರಸಿದ್ಧ ದೈವ ಸಾನಿಧ್ಯ ಇದ್ದೇ ಇರುತ್ತದೆ. ಅದರ ಆಜ್ಞಾಪಾಲಕನಾಗಿರುವ ಅರಸುವಿನ ಮೂಲಕ ನ್ಯಾಯ ಪರಿಪಾಲಿಸುವ ಪರಿಪಾಠವಿದೆ ಎಂದಿದ್ದಾರೆ.ತಿಂಗಳೆಯವರು ” ಸೆಂಗೋಲ್ ” ಹಿಡಿದಿರುವ ಈ ಚಿತ್ರ ವೈರಲ್ ಆಗಿದ್ದು ಪರ ವಿರೋಧ ಚರ್ಚೆಯೂ ಜೋರಾಗಿ ನಡೆಯುತ್ತಿದೆ.