Friday, January 24, 2025
ಸುದ್ದಿ

ಗೃಹಪ್ರವೇಶದ ಎರಡೇ ದಿನದಲ್ಲಿ ಮನೆ ಯಜಮಾನ ನೇಣು ಬಿಗಿದು ಆತ್ಮಹತ್ಯೆ – ಕಹಳೆ ನ್ಯೂಸ್

ಪುತ್ತೂರು: ಗೃಹಪ್ರವೇಶದ ಎರಡೇ ದಿನದಲ್ಲಿ ಮನೆ ಯಜಮಾನ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಕ್ಕಮುಟ್ನೂರು ಗ್ರಾಮದ ಬೀರ್ನಹಿತ್ಲಿನಲ್ಲಿ ಮೇ 29ರಂದು ಸಂಭವಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಬೀರ್ನಹಿತ್ಲು ನಿವಾಸಿ ವಿಜಯ ಕುಮಾರ್‌ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡವರು. ಮನೆಯ ಹಿಂದುಗಡೆಯ ಶೆಡ್‌ನ‌ ಮೇಲ್ಛಾವಣಿಗೆ ಅಳವಡಿಸಿದ ಕಬ್ಬಿಣದ ರಾಡ್‌ಗೆ ಲುಂಗಿಯನ್ನು ಕಟ್ಟಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೇ 27ರಂದು ಮನೆಯ ಗೃಹಪ್ರವೇಶ ನಡೆದಿತ್ತು. ಮೇ 28ರಂದು ಅಮಲು ಪದಾರ್ಥ ಸೇವಿಸಿ ಕ್ಷುಲ್ಲಕ ಕಾರಣಕ್ಕೆ ಪತ್ನಿಯೊಂದಿಗೆ ಗಲಾಟೆ ಮಾಡಿದ್ದರು ಎನ್ನಲಾಗಿದೆ. ಪುತ್ತೂರು ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.