Friday, January 24, 2025
ಸುದ್ದಿ

ಮಗಳನ್ನು 25 ಬಾರಿ ಇರಿದು ಕೊಂದ ಪಾಪಿ ತಂದೆ..! ಅಷ್ಟಕ್ಕೂ ಕಾರಣ ಕೇಳಿದ್ರೆ ಬೆಚ್ಚಿ ಬೀಳ್ತೀರಾ..! – ಕಹಳೆ ನ್ಯೂಸ್

ಗುಜರಾತ್‌: ಸ್ವತಃ ತಂದೆಯೇ 19 ವರ್ಷದ ಮಗಳನ್ನು ಚಾಕುವಿನಿಂದ ಚುಚ್ಚಿ ಹತ್ಯೆ ಮಾಡಿರುವ ಘಟನೆ ಗುಜರಾತಿನ ಸೂರತ್‌ನ ಕಡೋದರಲ್ಲಿ ನಡೆದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಈ ಘಟನೆ ನಡೆದದ್ದು ಮೇ 18ರಂದು. ಈತ ಚಾಕುವಿನಿಂದ ತನ್ನ ಮಗಳಿಗೆ 25 ಬಾರಿ ಇರಿದು ಕೊಂದಿದ್ದಾನೆ. ಈ ಮಧ್ಯೆ ತಾಯಿಗೂ ಇರಿದಿದ್ದು, ಗಂಭೀರ ಗಾಯಗಳಾಗಿ ಆಸ್ಪತ್ರೆಯಲ್ಲಿದ್ದಾರೆ. ಈ ಘಟನೆ ಸಂಬAಧ ಆರೋಪಿಯನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಗಳನ್ನು ಬರ್ಬರವಾಗಿ ಕೊಂದ ಆರೋಪಿಯನ್ನು ರಾಮನುಜಾ ಸಾಹು ಎಂದು ಗುರುತಿಸಲಾಗಿದೆ. ಈತ ಸೂರತ್ ನ ಸತ್ಯ ನಗರ್ ಸೊಸೈಟಿಯ ಬಾಡಿಗೆ ಅಪಾರ್ಟ್ ಮೆಂಟ್ ನಲ್ಲಿ ಕುಟುಂಬದ ಜೊತೆ ವಾಸವಾಗಿದ್ದ. ಆತ ರಾಮನುಜಾ ಟೆಕ್ಸ್ ಟೈಲ್ ಮಿಲ್ ನಲ್ಲಿ ಕೆಲಸ ಮಾಡುತ್ತಿದ್ದ. ಮಗಳು ರಾತ್ರಿ ವೇಳೆ ಟೆರೇಸ್ ಮೇಲೆ ಮಲಗಿದ್ದ ಕಾರಣ ರಾಮನುಜ ಸಾಹು ತನ್ನ ಪತ್ನಿ ರೇಖಾ ಜೊತೆ ಜಗಳವಾಡಿದ್ದಾನೆ. ಈ ಜಗಳ ಮಗಳನ್ನು ಬರ್ಬರವಾಗಿ ಕೊಲ್ಲುವ ಮೂಲಕ ಅಂತ್ಯಗೊAಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸೂರತ್‌ನ ಕಡೋದರಾದಲ್ಲಿ ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸುಮಾರು ರಾತ್ರಿ 11.20ಕ್ಕೆ ರಾಮಾನುಜ, ಮಗಳ ವಿಷಯ ಸಂಬAಧ ಮೊದಲು ಪತ್ನಿ ರೇಖಾಗೆ ಚಾಕುವಿನಿಂದ ಇರಿಯಲು ಹೋಗಿದ್ದಾನೆ. ಇದರಿಂದ ಪತ್ನಿಯು ಗಾಯಗೊಂಡಿದ್ದಾರೆ.

ನAತರ ಮಕ್ಕಳು ತಂದೆಯಿAದ ತಾಯಿಯನ್ನು ತಪ್ಪಿಸಲು ಮುಂದಾಗಿದ್ದಾರೆ. ಆಗ ತನ್ನ ಮಗಳನ್ನು ಹಿಡಿದು ಚಾಕುವಿನಿಂದ ಇರಿಯಲು ಮುಂದಾಗಿದ್ದಾನೆ. ಆದರೆ ಅಪ್ಪನಿಂದ ತಪ್ಪಿಸಿಕೊಂಡು ಕೋಣೆಯೊಳಗೆ ಹೋಗಲು ಪ್ರಯತ್ನಿಸುತ್ತಿದ್ದಾಗ ಮಗಳ ಬೆನ್ನಟ್ಟಿದ ತಂದೆ ಅವಳನ್ನು ಇರಿದು ಕೊಂದಿದ್ದಾನೆ.