Friday, January 24, 2025
ಸುದ್ದಿ

ನಂದಾವರ ರಸ್ತೆ ಕಾಮಗಾರಿ ತಾತ್ಕಾಲಿಕ ಸ್ಥಗಿತ – ಕಹಳೆ ನ್ಯೂಸ್

ಬಂಟ್ವಾಳ: ನಂದಾವರ ರಸ್ತೆಯಿಂದ ಅರಮನೆ ರಸ್ತೆಗೆ ತಿರುಗುವ ರಸ್ತೆಯನ್ನು ಅತಿಕ್ರಮಿಸಿ ಇಲ್ಲಿನ ನಿವಾಸಿಯೋರ್ವ ಕೆಂಪು ಕಲ್ಲಿನ ಅವರಣಗೋಡೆ ಕಟ್ಟಲು ಮುಂದಾದಾಗ ಸ್ಥಳೀಯ ಸಾರ್ವಜನಿಕರ ದೂರಿನಂತೆ ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳ ತಂಡ ಕಾಮಗಾರಿಯನ್ನು ತಾತ್ಕಾಲಿಕ ಸ್ಥಗಿತಗೊಳಿಸಿದ ಘಟನೆ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇಲ್ಲಿ ರಸ್ತೆಯನ್ನು ಅತಿಕ್ರಮಣ ಮಾಡಿ ಕಾಂಪೌಂಡ್ ಕಟ್ಟಲು ಪೂರ್ವಯೋಜನೆಗಳು ಸಿದ್ದವಾಗುತ್ತಿದ್ದು, ನಿಲ್ಲಿಸಿ ಎಂದು ಗ್ರಾಮಸ್ಥರು ಸ್ಥಳೀಯ ಮುನ್ನೂರು ಗ್ರಾಮಪಂಚಾಯತ್ ಗೆ ದೂರು ನೀಡಿದ್ದರು.

ಈ ದೂರಿನ ಅನ್ವಯ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ ಪಿ.ಡಿ.ಒ.ಲಕ್ಷಣ್ ಅವರು ಕಾಮಗಾರಿಯಗೆ ಪೂರ್ವ ತಯಾರಿ ನಡೆಸುತ್ತಿದ್ದ ವ್ಯಕ್ತಿಗೆ ನೋಟೀಸ್ ನೀಡಿ ಅವರಣ ಗೋಡೆ ಕಟ್ಟದಂತೆ ಎಚ್ಚರಿಕೆ ನೀಡಿ ಕಾನೂನಿನಲ್ಲಿ ಅವಕಾಶವಿಲ್ಲ ಎಂಬ ಬಗ್ಗೆ ಮಾಹಿತಿ ನೀಡಿದ್ದರು.

ಇದಲ್ಲದೆ ಈ ರಸ್ತೆಯ ವಿಚಾರದಲ್ಲಿ ನ್ಯಾಯಾಲಯದಲ್ಲಿ ವ್ಯಾಜ್ಯವಿದ್ದು, ಕೋರ್ಟ್ ಯಥಾಸ್ಥಿತಿ ಕಾಯ್ದುಕೊಳ್ಳಲು ಅದೇಶ ನೀಡಿದೆ.
ನ್ಯಾಯಾಲಯದ ಅದೇಶ ಮತ್ತು ಪಿ.ಡಿ.ಒ.ಅದೇಶವನ್ನು ಉಲ್ಲಂಘನೆ ಮಾಡಿ ಇಂದು ಅವರಣಗೋಡೆ ಕಾಮಗಾರಿ ನಡೆಸಲಾಗಿತ್ತು.
ಇದನ್ನು ನಿಲ್ಲಿಸಿ ಆತನ ಮೇಲೆ ಕಾನೂನು ಕ್ರಮ ಜರಗಿಸಿ ಎಂದು ಗ್ರಾಮಸ್ಥರು ಮತ್ತು ಬಿಜೆಪಿ ಕಾರ್ಯಕರ್ತರು ಬಂಟ್ವಾಳ ತಹಶಿಲ್ದಾರ್ ಕಚೇರಿ ಮುಂಭಾಗದಲ್ಲಿ ಧರಣಿ ಕುಳಿತರು.

ಸಾಕಷ್ಟು ವಿರೋಧಗಳ ನಡುವೆ ಕಳೆದ ಕೆಲ ಸಮಯಗಳ ಹಿಂದೆ ಅರಮನೆ ರಸ್ತೆಗೆ ಶಾಸಕರ ಅನುದಾನದ ಮೂಲಕ ಕಾಂಕ್ರೀಟ್ ಮಾಡಲಾಗಿತ್ತು.
ಆದರೆ ಇದೀಗ ರಸ್ತೆಗೆ ತಾಗಿಕೊಂಡಿರುವ ಮನೆಗೆ ಮಳೆಗಾಲದಲ್ಲಿ ನೀರು ಹೋಗುತ್ತದೆ ಎಂಬ ಕಾರಣ ನೀಡಿ ರಸ್ತೆಯನ್ನು ಅತಿಕ್ರಮಿಸಿಕೊಂಡು ಕೆಂಪುಕಲ್ಲುಗಳನ್ನು ಬಳಸಿಕೊಂಡು ಅವರಣಗೋಡೆ ಕಟ್ಟಲು ಮುಂದಾದ ಘಟನೆ ನಡೆದಿದೆ.
ರಶೀದ್ ನಂದಾವರ ಎಂಬವರು, ಇದು ನಮ್ಮ ಖಾಸಗಿ ಜಾಗ ಎಂದು ಹೇಳಿಕೊಂಡಿದ್ದು,ಕಲ್ಲಿನ ಅವರಣ ಗೋಡೆ ಕಟ್ಟಲು ಅವಕಾಶ ನೀಡಿ ಎಂದು ಹೇಳುತ್ತಿದ್ದಾರೆ.
‌ಇದು ಸರಕಾರಿ ಜಾಗ,ಇಲ್ಲಿ ನೀವು ಅವರಣಗೋಡೆ ಕಟ್ಟಿದರೆ ಘನ ವಾಹನಗಳು ಈ ರಸ್ತೆಗೆ ತಿರುಗಲು ಸಾಧವಾಗುವುದಿಲ್ಲ ಎಂಬ ಆರೋಪ ಇಲ್ಲಿನ ಸಾರ್ವನಿಕರದ್ದು.
ಆದರೆ ಇದೊಂದು ಕೋರ್ಟು ವ್ಯಾಜ್ಯವನ್ನು ಹೊಂದಿರುವ ಪ್ರಕರಣವಾದ್ದರಿಂದ ಜಾಗ ಯಾರಿಗೆ ಸೇರಿದೆ ಎಂಬುದರ ಬಗ್ಗೆ ಅಧಿಕಾರಿಗಳಿಗೆ ತಲೆನೋವಿನ ವಿಚಾರವಾಗಿ ಕಂಡು ಬಂದಿದೆ.
ಕೆಂಪು ಕಲ್ಲು ಕಟ್ಟಲು ಪ್ರಾರಂಭ ಮಾಡಿದ ಕ್ಷಣದಲ್ಲಿ ಇಲ್ಲಿನ ಸಾರ್ವಜನಿಕರು ಸಂಬಂಧಿಸಿದ ಅಧಿಕಾರಿಗಳಿಗೆ ದೂರು ನೀಡಿದ್ದು, ತಹಶಿಲ್ದಾರ್ ಎಸ್.ಬಿ.ಕೂಡಲಗಿ, ಪಿಡಿಒ ಲಕ್ಣಣ್ ,ನಗರ ಠಾಣಾ ಪೋಲೀಸ್ ಇನ್ಸ್ ಪೆಕ್ಟರ್ ವಿವೇಕಾನಂದ, ಎಸ್.ಐ.ರಾಮಕೃಷ್ಣ, ಕಂದಾಯ ಅಧಿಕಾರಿ ವಿಜಯ್ , ಪಿಡಿಒ ಲಕ್ಷಣ್ ಗ್ರಾಮ ಆಡಳಿತ ಅಧಿಕಾರಿ ಸ್ವಾತಿ ಸಹಿತ ಪಂಚಾಯತ್ ಕಾರ್ಯದರ್ಶಿ ಸಹಿತ ಅನೇಕ ಅಧಿಕಾರಿಗಳು ಸ್ಥಳಕ್ಕೆ ಬೇಟಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಸಾರ್ವಜನಿಕರು ಹಾಗೂ ಮನೆಯರ ಜೊತೆ ವಾಗ್ವಾದಗಳು ನಡೆದು ಪರಿಸ್ಥಿತಿ ಬಿಗಡಾಯಿಸುವ ಹಂತದಲ್ಲಿರುವಾಗ ಕೆ.ಎಸ್.ಆರ್.ಪಿ. ಸಹಿತ ನಗರ ಠಾಣಾ ಪೋಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಯಾವುದೇ ಗೊಂದಲವಾಗದಂತೆ ಕ್ರಮಕೈಗೊಂಡಿದ್ದಾರೆ.

ಆದರೆ ಸ್ಥಳದಲ್ಲಿ ಸಮಸ್ಯೆ ಬಗೆಹರಿಸಲು ಸಾಧ್ಯವಿಲ್ಲ ಎಂದು ಅಧಿಕಾರಿಗಳ ಗಮನಕ್ಕೆ ಬಂದಾಗ ಮಧ್ಯ ಪ್ರವೇಶ ಮಾಡಿದ ಇನ್ಸ್ ಪೆಕ್ಟರ್ ವಿವೇಕಾನಂದ ಅವರು ತಹಶಿಲ್ದಾರ್ ಅವರಲ್ಲಿ ಮಾತನಾಡಿ ಸುಮ್ಮನೆ ಇಲ್ಲಿ ಕಾಲ ಹರಣ ಮಾಡುವುದು ಸರಿಯಲ್ಲ, ಪ್ರಸ್ತುತ ಕಟ್ಟಲಾದ ಕಲ್ಲನ್ನು ತೆರವುಗೊಳಿಸುವ ಕ್ರಮ ಕೈಗೊಂಡರೆ ನಿಮಗೆ ಬಂದೋಬಸ್ತ್ ಒದಗಿಸಿ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳುವ ಜವಬ್ದಾರಿ ನನ್ನದು. ಆದರೆ ನಿಮ್ಮ ಅದೇಶ ಮಾತ್ರ ಬೇಕಾಗಿದೆ ಎಂದು ಹೇಳಿದಾಗ, ತಹಶಿಲ್ದಾರ್ ಅವರು ತಾ.ಪಂ.ನ ಇ.ಒ.ಅವರ ಕಚೇರಿಯಲ್ಲಿ ಮಾತುಕತೆ ನಡೆಸಿ ಬಳಿಕ ವಿಚಾರ ಮಾಡುವ ಎಂದು ಮನೆಯವರನ್ನು ಹಾಗೂ ಸ್ಥಳೀಯ ಪ್ರಮುಖರನ್ನು ಕರೆದಿದ್ದು, ಸಭೆಯಲ್ಲಿ ಅತಿಕ್ರಮಣ ಮಾಡಿ ಕಟ್ಟಿದ ಅವರಣಗೋಡೆಯನ್ನು ತೆರವುಗೊಳಿಸುವ ತೀರ್ಮಾನ ಕೈಗೊಳ್ಳಲಾಯಿತು. ಆದರೆ ಅದಾಗಲೇ ಈ ರಸ್ತೆಯ ವಿಚಾರದಲ್ಲಿ ಕೋರ್ಟ್ ಯಥಾಸ್ಣತಿ ಕಾಪಾಡಲು ಸೂಚನೆ ನೀಡಿದ ನ್ಯಾಯಾಲಯದ ಅದೇಶ ಹಾಗೂ ಅತಿಕ್ರಮಣ ಮಾಡಿ ಅವರಣಗೋಡೆ ನಿರ್ಮಸಿದಂತೆ ಇಲ್ಲಿನ ಪಿ.ಡಿ.ಒ.ನೀಡಿದ ಎರಡು ಅದೇಶವನ್ನು ಗಾಳಿಗೆ ತೂರಿ ಕಾನೂನುಬಾಹಿರವಾಗಿ ಮಾಡುತ್ತಿರುವ ಕಾಮಗಾರಿಯನ್ನು ನಿಲ್ಲಿಸಿ ಆತನ ಮೇಲೆ ಸುಮೋಟೋ ಕೇಸ್‌ ದಾಖಲಿಸಿ ಎಂದು ಬಂಟ್ವಾಳ ಕ್ಷೇತ್ರ ಬಿಜೆಪಿ ಸಹಕಾರದಲ್ಲಿ ಊರಿನ ಸಾರ್ವಜನಿಕ ರು ತಹಶಿಲ್ದಾರ್ ಕಚೇರಿಯಲ್ಲಿ ಪ್ರತಿಭಟನೆ ನಡೆಸಿದರು.

ಈಗಾಗಲೇ ಅತಿಕ್ರಮಣ ಮಾಡಿ ನಿರ್ಮಿಸಿದ ತಡೆಗೋಡೆಯನ್ನು ತೆರವು ಮಾಡಲಾಗಿದೆ, ಆದರೆ ಮುಂದಿನ ಕ್ರಮವನ್ನು ಸಂಬಂಧಿಸಿದ ಅಧಿಕಾರಿಗಳ ಮೂಲಕ ಮಾಡಿಸುವ ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಮೊಟಕುಗೊಳಿಸಿದರು.
‌ ಪ್ರತಿಭಟನೆಯಲ್ಲಿ ಬಿಜೆಪಿ ಮಂಡಲದ ಅಧ್ಯಕ್ಷ ದೇವಪ್ಪ ಪೂಜಾರಿ, ಪ್ರಧಾನ ಕಾರ್ಯದರ್ಶಿ ಡೊಂಬಯ್ಯ ಅರಳ,ಬೂಡ ಮಾಜಿ ಅಧ್ಯಕ್ಷ ದೇವದಾಸ್ ಶೆಟ್ಟಿ, ಪ್ರಮುಖರಾದ ರಮನಾಥ ರಾಯಿ, ಪುರುಷೋತ್ತಮ ಶೆಟ್ಟಿ ವಾಮದಪದವು, ಶರ್ಮಿತ್ ಜೈನ್, ಸುರೇಶ್ ಕೋಟ್ಯಾನ್, ಪ್ರವೀಣ್ ಗಟ್ಟಿ, ಪ್ರಭಾಕರ್ ಪ್ರಭು, ಪ್ರಶಾಂತ್ ಕೆಂಪುಗುಡ್ಡೆ,ಕಾರ್ತಿಕ್ ಬಳ್ಳಾಲ್, ಧನಂಜಯ ಶೆಟ್ಟಿ, ನಂದರಾಮ ರೈ, ಶಾಸಕರ ಆಪ್ತ ಸಹಾಯಕ ಪವನ್ ಕುಮಾರ್ ಶೆಟ್ಟಿ, ದಿನೇಶ್ ಶೆಟ್ಟಿ ದಂಬೆದಾರ್, ಪುರುಷೋತ್ತಮ ಸಾಲಿಯಾನ್ ಮತ್ತಿತರರು ಉಪಸ್ಥಿತರಿದ್ದರು.