Recent Posts

Tuesday, November 26, 2024
ಸುದ್ದಿ

ಬಂಟ್ವಾಳ ಪುರಸಭಾ ವ್ಯಾಪ್ತಿಯ ಗೂಡಿನ ಬಳಿ ಗುಡ್ಡ ಕುಸಿತ : ಅಧಿಕಾರಿಗಳ ನಿರ್ಲಕ್ಷ –ಕಹಳೆ ನ್ಯೂಸ್

ಬಂಟ್ವಾಳ ಪುರಸಭಾ ವ್ಯಾಪ್ತಿಯ ಗೂಡಿನಬಳಿಯಲ್ಲಿ ಗುಡ್ಡ ಕುಸಿದು ಅಪಾಯದ ಸ್ಥಿತಿ ಇದ್ದು, ಆದರೆ ಸ್ಥಳದಲ್ಲಿ ಕನಿಷ್ಠ ಕಾಮಗಾರಿಯನ್ನೂ ನಡೆಸದೆ ಹಾಗೇ ಬಿಡಲಾಗಿದೆ. ಕಳೆದ ವರ್ಷ ಗೂಡಿನಬಳಿ ಗುಡ್ಡದ ಮೇಲ್ಭಾಗಕ್ಕೆ ತೆರಳಿದ ಅರ್ಧ ರಸ್ತೆಯೇ ಕುಸಿದರೂ, ಬರೀ ಮರಳು ತುಂಬಿದ ಗೋಣಿಚೀಲಗಳನ್ನಿಟ್ಟು ಪರಿಹಾರ ಕಲ್ಪಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು


ಈ ಭಾಗದ ಗುಡ್ಡವು ಹಲವು ವರ್ಷಗಳ ಹಿಂದೆಯೇ ಕುಸಿದಿದ್ದು, ಬಳಿಕ ಗೋಣಿ ಚೀಲಗಳನ್ನು ಇಡಲಾಗಿತ್ತು. ಆದರೆ ಕಳೆದ ವರ್ಷ ಅರ್ಧ ರಸ್ತೆಯೇ ಕುಸಿದು ಅಪಾಯಕ್ಕೆ ಸಿಲುಕಿತ್ತು. ಗುಡ್ಡದ ಮೇಲ್ಭಾಗದಲ್ಲಿ ಪುರಸಭಾ ವ್ಯಾಪ್ತಿಯ ಬಹುತೇಕ ಪ್ರದೇಶಗಳಿಗೆ ನೀರನ್ನು ಒದಗಿಸುವ ಟ್ಯಾಂಕ್ ಇದ್ದು, ಕುಸಿದ ರಸ್ತೆಯ ತಳಭಾಗದಲ್ಲೇ ಈ ಪೈಪುಲೈನ್ ಹಾದುಹೋಗಿದೆ. ಕಳೆದ ವರ್ಷ ರಸ್ತೆ ಕುಸಿದ ಸಂದರ್ಭದಲ್ಲಿ ಪೈಪುಲೈನ್ ಕಂಡುಬoದಿತ್ತು. ಆದರೆ ಈಗ ಅದಕ್ಕೆ ಅಡ್ಡಲಾಗಿ ಗೋಣಿಗಳನ್ನು ಇಡಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಆದರೆ ಈ ಬಾರಿ ಕುಸಿದರೆ ರಸ್ತೆ ಪೂರ್ತಿ ಸಂಪರ್ಕ ಕಡಿತವಾಗುವ ಜತೆಗೆ ನೀರಿನ ಪೈಪು ಲೈನ್‌ಗೂ ಪೂರ್ತಿ ಹಾನಿಯಾಗುತ್ತದೆ. ಹೆಚ್ಚಿನ ಹಾನಿ ಸಂಭವಿಸದoತೆ ಈ ಹಿಂದೆಯೇ ಕಾಮಗಾರಿ ನಡೆಸಬಹುದಾಗಿತ್ತಾದರೂ, ಇನ್ನೂ ಕೂಡ ಕನಿಷ್ಠ ಕಾಮಗಾರಿಯನ್ನೂ ಮಾಡಿಲ್ಲ. ಗೂಡಿನಬಳಿಯ ಅಪಾಯದ ಸ್ಥಿತಿ ೨ ವರ್ಷಗಳ ಹಿಂದೆ ಗುರುಪುರ ಮಠದಗುಡ್ಡೆ(ಬಂಗ್ಲೆಗುಡ್ಡೆ)ಯಲ್ಲಿ ನಡೆದ ಘಟನೆಯನ್ನು ನೆನಪಿಸುತ್ತದೆ. ಗೂಡಿನಬಳಿಯ ಪ್ರದೇಶವೂ ಅದೇ ರೀತಿಯ ಜನವಸತಿಯ ಪ್ರದೇಶವಾಗಿದ್ದು, ಗುಡ್ಡದ ತಳಭಾಗದಲ್ಲಿ ಹತ್ತಾರು ಮನೆಗಳಿವೆ.

ಮನೆಗಳಿಗೆ ಹಾನಿ ಸಾಧ್ಯತೆ
ಗುಡ್ಡ ಕುಸಿತದ ಪಕ್ಕದಲ್ಲೇ ಹತ್ತಾರು ಮನೆಗಳಿದ್ದು, ಒಂದು ವೇಳೆ ಈ ಬಾರಿಯೂ ಗುಡ್ಡ ಕುಸಿದಲ್ಲಿ ಹತ್ತಾರು ಮನೆಗಳಿಗೆ ಹಾನಿಯಾಗಲಿದೆ. ಈ ಹಿಂದೆಯೇ ಸಾಕಷ್ಟು ಬಾರಿ ಅಧರಿಕಾರಿಗಳು, ಜನಪ್ರತಿನಿಽಗಳು ಪರಿಶೀಲನೆ ನಡೆಸಿದ್ದರೂ, ಯಾವುದೇ ಪರಿಹಾರವನ್ನೂ ಕಲ್ಪಿಸಿಲ್ಲ. ಇದು ಅಪಾಯಕಾರಿ ಸ್ಥಿತಿಯಾಗಿದ್ದು, ಹೀಗಾಗಿ ತಡೆಗೋಡೆಯಂತಹ ಪರಿಹಾರವನ್ನು ಕಲ್ಪಿಸುವುದು ಕೂಡ ಸವಾಲಿನ ವಿಚಾರವಾಗಿದೆ. ಆದರೆ ಹಾಗೇ ಬಿಟ್ಟರೆ ಇನ್ನಷ್ಟು ಕುಸಿತ ಉಂಟಾಗಿ ಸ್ಥಳೀಯ ಮನೆಗಳು ಅಪಾಯಕ್ಕೆ ಸಿಲುಕುವ ಸಾಧ್ಯತೆಯೂ ಇದೆ.

ರಸ್ತೆಯೂ ಅಪಾಯಕಾರಿ.!
ಗುಡ್ಡದ ಮೇಲ್ಭಾಗದಲ್ಲಿಯೂ ಹೆಚ್ಚಿನ ಮನೆಗಳಿದ್ದು, ರಸ್ತೆಯ ಅರ್ಧ ಭಾಗ ಕುಸಿದರೂ, ಇನ್ನೊಂದು ಬದಿಯಲ್ಲಿ ಸಂಚಾರಕ್ಕೆ ಸ್ಥಳಾವಕಾಶವಿದೆ. ಆದರೆ ಇನ್ನಷ್ಟು ಕುಸಿದರೆ ಗುಡ್ಡದ ಮೇಲಿನ ಮನೆಗಳಿಗೆ ಸಂಚಾರವೇ ಕಡಿತಗೊಳ್ಳಲಿದೆ. ಆದರೆ ಕುಸಿತವಾದ ಸ್ಥಳವೂ ವಾಹನಗಳಿಗೆ ಅಪಾಯಕಾರಿಯಾಗಿದ್ದು, ಸ್ವಲ್ಪ ಎಚ್ಚರ ತಪ್ಪಿದರೂ ಜೀವಕ್ಕೆ ಕುತ್ತು ತರುವ ಸಾಧ್ಯತೆಯೂ ಇದೆ.