Thursday, January 23, 2025
ಸುದ್ದಿ

ವಿದ್ಯುತ್ ಕಂಬದಲ್ಲಿ ದುರಸ್ತಿ ವೇಳೆ ಲೈನ್ ಮ್ಯಾನ್ ಮೃತ್ಯು – ಕಹಳೆ ನ್ಯೂಸ್

ವಿದ್ಯುತ್ ಕಂಬವೇರಿದ್ದ ಲೈನ್ ಮ್ಯಾನ್ ವಿದ್ಯುತ್ ಆಘಾತಕ್ಕೊಳಗಾಗಿ ಮೃತಪಟ್ಟ ಘಟನೆ ಇಂದು ಕಡಬದಲ್ಲಿ ನಡೆದಿದೆ. ಕಡಬ ಮೆಸ್ಕಾಂನ ಲೈನ್ ಮ್ಯಾನ್ ಬಾಗಲಕೋಟೆ ಮೂಲದ ದಾಮಣ್ಣ ಮೃತಪಟ್ಟವರಾಗಿದ್ದಾರೆ. ಕಡಬದ ಮುಳಿಮಜಲು ಸಮೀಪದ ಕಾಯರಡ್ಕ ಎಂಬಲ್ಲಿ ವಿದ್ಯುತ್‌ನಲ್ಲಿ ಸಮಸ್ಯೆ ಕಂಡು ಬಂದು ಕಂಬವೇರಿದ್ದ ಲೈನ್ ಮ್ಯಾನ್‌ಗೆ ವಿದ್ಯುತ್ ಶಾಕ್ ಹೊಡೆದ ಪರಿಣಾಮ ಗಂಭೀರ ಗಾಯಗೊಂಡಿದ್ರು. ತಕ್ಷಣವೇ ಕಡಬ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಿ ಬಳಿಕ ಪುತ್ತೂರಿಗೆ ಕರೆದೊಯ್ಯಲಾಗಿತ್ತು. ಆದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು