Thursday, January 23, 2025
ದಕ್ಷಿಣ ಕನ್ನಡಬೆಳ್ತಂಗಡಿಯಕ್ಷಗಾನ / ಕಲೆರಾಜ್ಯಸುದ್ದಿ

ಶ್ರೀ ಧರ್ಮಸ್ಥಳ ಮೇಳದ ಸೇವೆಯಾಟ ಸಂಪನ್ನ – ಕಹಳೆ ನ್ಯೂಸ್

ಬೆಳ್ತಂಗಡಿ: ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಯಕ್ಷಗಾನ ಮಂಡಳಿಯ ಈ ಸಾಲಿನ ಕೊನೆಯ ಸೇವೆಯಾಟಗಳು ಮೇ 26, 27 ಮತ್ತು 28ರಂದು ಕ್ಷೇತ್ರದ ಅಮೃತವರ್ಷಿಣಿ ಸಭಾಭವನದಲ್ಲಿ ರಾತ್ರಿ 7ರಿಂದ 12ರ ವರೆಗೆ ನಡೆಯಿತು.

ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು, ಡಾ| ಹೇಮಾವತಿ ವೀ. ಹೆಗ್ಗಡೆಯವರು, ಮೇಳದ ಯಜಮಾನ ಡಿ.ಹರ್ಷೇಂದ್ರ ಕುಮಾರ್ ಕುಮಾರ್‌ ಮತ್ತು ಹೆಗ್ಗಡೆ ಕುಟುಂಬದವರು ಹಾಗೂ ಹರಕೆ ಸೇವೆಯ ಸೇವಾರ್ಥಿಗಳು, ಕ್ಷೇತ್ರದ ಸಿಬಂದಿ ವರ್ಗ ಹಾಗೂ ಭಕ್ತರು ಭಾಗವಹಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮೇ 26ರಂದು ಸಹಸ್ರ ಕವಚ ಮೋಕ್ಷ, ಮೇ 27ರಂದು ಕನಕಾಂಗಿ ಕಲ್ಯಾಣ-ಆಗ್ರ ಪೂಜೆ ಹಾಗೂ ಮೇ 28ರಂದು ವೇದೋದ್ಧರಣ-ರುಕ್ಮಿಣಿ ಕಲ್ಯಾಣ ಪೌರಾಣಿಕ ಪ್ರಸಂಗದ ಯಕ್ಷಗಾನ ಸೇವಾ ಬಯಲಾಟ ಪ್ರದರ್ಶನದೊಂದಿಗೆ ಈ ಸಾಲಿನ ಯಕ್ಷಗಾನ ತಿರುಗಾಟ ಸಮಾಪನಗೊಂಡಿದೆ