ಉಡುಪಿ: ಅಕ್ರಮ ಗಾಂಜಾ ಮಾರಾಟ ಮಾಡಲು ಯತ್ನಿಸಿದ ಇಬ್ಬರನ್ನು ಉಡುಪಿ ಸೆನ್ ಅಪರಾಧ ಪೊಲೀಸರು ಹೆರ್ಗಾ ಗ್ರಾಮದ ಈಶ್ವರ ನಗರ ಎಂಬಲ್ಲಿರುವ ಐಡಿಯಲ್ ಅಪಾರ್ಟ್ ಮೆಂಟ್ ಬಳಿಇಂದು ಮುಂಜಾನೆ ಸುಮಾರು 11 ಗಂಟೆಗೆ ಬಂಧಿಸಿದ್ದಾರೆ.
ತೆಲಂಗಾಣ ರಾಜ್ಯದ ರಾಜ್ ಪ್ರಶಾಂತ್ ಸಿಂಗ್, ಶಾಂತನ್ ರೆಡ್ಡಿ ಬಂಧಿತ ಆರೋಪಿಗಳು. ಇವರಿಂದ ಒಂದು ಕಿಲೋ 166 ಗ್ರಾಂ ತೂಕದ ಗಾಂಜಾ, ಬ್ಯಾಗ್ ಮತ್ತು ಎರಡು ಮೊಬೈಲ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇವುಗಳ ಒಟ್ಟು ಮೌಲ್ಯ 42,000 ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.