Thursday, January 23, 2025
ಸುದ್ದಿ

ಮಂಗಳೂರಿನಲ್ಲಿ ಎರಡು ಬೈಕ್‌ಗಳ ಕಳವು :ಪ್ರತ್ಯೇಕ ಪ್ರಕರಣ ದಾಖಲು –ಕಹಳೆ ನ್ಯೂಸ್

ಮಂಗಳೂರು: ನಗರ ವ್ಯಾಪ್ತಿಯ ಎರಡು ಪ್ರತ್ಯೇಕ ಪ್ರಕರಣದಲ್ಲಿ ಎರಡು ಬೈಕ್‌ಗಳು ಕಳವಾಗಿರುವ ಕುರಿತಂತೆ ದೂರು ದಾಖಲಾಗಿದೆ.

ಮೇ 23ರಂದು ಮಧ್ಯಾಹ್ನ ಗಣೇಶ್‌ ಅವರು ಅಪರಾಹ್ನ 2.45ಕ್ಕೆ ಕುಂಟಿಕಾನದ ಬಿಎಂಎಸ್‌ ಹೊಟೇಲ್‌ ಎದುರುಗಡೆ ಬೈಕ್‌ ನಿಲ್ಲಿಸಿ ಪಕ್ಕದ ಶೋರೂಂ ಒಂದಕ್ಕೆ ಕೆಲಸಕ್ಕೆ ಹೋಗಿದ್ದರು. ಸಂಜೆ 6 ಗಂಟೆಗೆ ವಾಪಸು ಬಂದು ನೋಡಿದಾಗ ನಿಲ್ಲಿಸಿದ ಸ್ಥಳದಲ್ಲಿ ಬೈಕ್‌ ಇರಲಿಲ್ಲ. ಕಳವಾದ ಬೈಕ್‌ನ ಮೌಲ್ಯ 75 ಸಾವಿರ ರೂ. ಎಂದು ಅಂದಾಜಿಸಲಾಗಿದ್ದು, ಈ ಕುರಿತಂತೆ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನೊಂದು ಪ್ರಕರಣದಲ್ಲಿ ಮೇ 11ರಂದು ಸಂಜೆ 6 ಗಂಟೆಯಿಂದ ಮೇ 12ರ ಬೆಳಗ್ಗೆ 7.15ರ ಮಧ್ಯಾವಧಿಯಲ್ಲಿ ಹಂಪನಕಟ್ಟೆಯ ವೆನಾÉಕ್‌ ಆಸ್ಪತ್ರೆ ಆವರಣದ ಬರ್ನ್ ವಾರ್ಡ್‌ ಬಳಿ ಪಾರ್ಕ್‌ ಮಾಡಿದ್ದ ಬೈಕ್‌ ಕಳವಾಗಿದೆ. ವಿಶ್ವನಾಥ್‌ ಧನ್‌ರಾಜ್‌ ಓಲೇಕರ್‌ ಅವರಿಗೆ ಸೇರಿದ ಪಲ್ಸರ್‌ ಬೈಕ್‌ ಆಗಿದ್ದು, 75 ಸಾವಿರ ರೂ. ಮೌಲ್ಯ ಅಂದಾಜಿಸಲಾಗಿದೆ. ಮಂಗಳೂರು ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು