Thursday, January 23, 2025
ಸುದ್ದಿ

ಮುಂಜಾನೆ ಸುರಿದ ಮಳೆ, ಗಾಳಿಗೆ ಹೆಬ್ರಿ ಪರಿಸರದಲ್ಲಿ ಮನೆಗಳು, ತೋಟಕ್ಕೆ ಹಾನಿ –ಕಹಳೆ ನ್ಯೂಸ್

ಉಡುಪಿ: ಜಿಲ್ಲೆಯ ಹಲವೆಡೆ ಗುರುವಾರ ಸಾಧಾರಣ ಮಳೆಯಾಗಿದೆ. ಬುಧವಾರ ತಡರಾತ್ರಿ, ಗುರುವಾರ ಮುಂಜಾನೆ ಸುರಿದ ಮಳೆ, ಗಾಳಿಗೆ ಹೆಬ್ರಿ ಭಾಗದಲ್ಲಿ ಮನೆಗಳು, ತೋಟಕ್ಕೆ ಹಾನಿ ಸಂಭವಿಸಿದೆ.

ಬ್ರಹ್ಮಾವರ, ಉಡುಪಿ, ಹೆಬ್ರಿ ಭಾಗದಲ್ಲಿ ಹೆಚ್ಚು ಮಳೆ ಸುರಿದಿದೆ. ಹೆಬ್ರಿ ತಾಲೂಕಿನ ಬೆಳ್ವೆಯಲ್ಲಿ ಭಾರತಿ, ಗಿರಿಯ ಪೂಜಾರಿ ಅವರ ಮನೆಗೆ ಹಾನಿ ಸಂಭವಿಸಿದೆ. ಶ್ರೀಮತಿ, ಬಚ್ಚಹಾಂಡ, ಶೀನಹಾಂಡ ಅವರ ಅಡಿಕೆ, ತೆಂಗು, ಮಾವಿನ ಮರಗಳಿಗೆ ಹಾನಿಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು