Thursday, January 23, 2025
ಸುದ್ದಿ

ಬಂಟ್ವಾಳದಲ್ಲಿ ಬತ್ತಿದ ನೇತ್ರಾವತಿ ನದಿ – ಕಹಳೆ ನ್ಯೂಸ್

ಬಂಟ್ವಾಳ: ನೇತ್ರಾವತಿ ನದಿಯಲ್ಲಿ ಕಲ್ಲುಬಂಡೆಗಳ ಸಹಿತ ಮರಳಿನ ರಾಶಿ ಕಾಣತೊಡಗಿದೆ, ನೀರಿಲ್ಲದೆ ಸೊರಗುತ್ತಿದೆ ನೇತ್ರಾವತಿ.
ಇನ್ನೆರೆಡು ದಿನಗಳಲ್ಲಿ ಮಳೆ ಬಾರದೆ ಇದ್ದರೆ ಜನರಿಗೆ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಬಹುದು ಎಂಬ ಲೆಕ್ಕಾ ಚಾರ ಅಧಿಕಾರಿಗಳಲ್ಲಿ ಮೂಡಲು ಪ್ರಾರಂಭವಾಗಿದೆ. ಆದರೆ ಜೂನ್ 4 ರ ಬಳಿಕ ಮಳೆ ಬರುತ್ತದೆ ಎಂಬ ಮುನ್ಸೂಚನೆ ಯನ್ನು ಹವಾಮಾನ ಇಲಾಖೆ ನೀಡಿದೆ.
ದ.ಕ.ಜಿಲ್ಲೆಯ ಹೊರತು ಪಡಿಸಿ ಉಳಿದ ಜಿಲ್ಲೆಯಲ್ಲಿ ಸಾದಾರಣ ಮಳೆಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ನೇತ್ರಾವತಿ ನದಿಯಲ್ಲಿ ನೀರಿನ ಆದರೆ ಈವರೆಗೆ ಮಂಗಳೂರು ಮಹಾಜನತೆಗಾಗಲಿ ಅಥವಾ ತಾಲೂಕಿನ ಜನರಿಗಾಗಲಿ ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಉಂಟಾಗಿಲ್ಲ.
ಈ ಬಾರಿ ಮಳೆ ಇಲ್ಲದ ಕಾರಣ ನೇತ್ರಾವತಿಯಲ್ಲಿ ನೀರಿನ ಮಟ್ಟ ಇಳಿಮುಖವಾಗತೊಡಗಿದೆ.
ತುಂಬೆಯಲ್ಲಿರುವ ನೀರಿನಮಟ್ಟ
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಜನತೆಗೆ ನೀರನೀಡುವ ತುಂಬೆ ವೆಂಟೆಡ್ ಡ್ಯಾಂ ನಲ್ಲಿ ನೀರು ಕಡಿಮೆಯಾಗುತ್ತಿದ್ದು ಮುಂದಿನ ಐದಾರು ದಿನಗಳಿಗೆ ಸಾಕಾಗುವಷ್ಟು ನೀರು ಶೇಖರಣೆ ಇದೆ, ಬಿಸಿಲು ಅತಿಯಾಗಿ ಇರುವ ಕಾರಣ ಕಾರಣ ದಿನೇ ದಿನೇ ನೀರಿನ ಮಟ್ಟದಲ್ಲಿ ಕುಸಿತ ಕಾಣುತ್ತಾ ಇದೆ.
ಇಂದಿನ ನೀರಿನ ಮಟ್ಟ 2.ಮೀ.11 ಸೆಂಮೀ ಇದೆ ಎಂದು ತಿಳಿಸಿದ ತುಂಬೆ ವೆಂಟೆಡ್ ಡ್ಯಾಂ ನ ಅಧಿಕಾರಿ ಅವರು ಈವರೆಗೆ ರೇಶನಿಂಗ್ ಇಲ್ಲದೆ ಮಂಗಳೂರಿಗೆ ನೀರು ನೀಡಿದ್ದೇವೆ.
ಈವರೆಗೆ ನೀರಿಗೆ ಕೊರತೆಯಾಗಿಲ್ಲ, ಮಳೆ ಬೇಗ ಬಂದರೆ ಅನುಕೂಲವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಡ್ಯಾಂನಿAದ ತಾಂತ್ರಿಕ ದೋಷಗಳಿಂದ ಸಣ್ಣ ಮಟ್ಟಿನ ನೀರು ಸೋರಿಕೆಯಾಗುವುದನ್ನು ಎಂ.ಆರ್.ಪಿ.ಎಲ್.ಕAಪನಿಯ ಮತ್ತು ಮಂಗಳೂರು ಮಹಾನಗರ ಪಾಲಿಕೆಯ ಸಹಕಾರದಲ್ಲಿ ಪಂಪ್ ಅಳವಡಿಸಿ ನೀರನ್ನು ಡ್ಯಾಂ ಗೆ ಹಾಕಲಾಗುತ್ತಿದೆ.

ಜಿಲ್ಲಾಧಿಕಾರಿಗಳ ಅದೇಶಕ್ಕೆ ಬದ್ದ
ವಿದ್ಯುತ್ ಉತ್ಪಾದನೆಗಾಗಿ ನರಿಕೊಂಬು ಎಂಬಲ್ಲಿ ನೇತ್ರಾವತಿ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಬ್ಯಾರೇಜ್ ನಲ್ಲಿ ಶೇಖರಣೆಗೊಂಡಿರುವ ನೀರನ್ನು ಮಂಗಳೂರು ಸಹಿತ ಇತರ ಗ್ರಾಮೀಣ ಭಾಗದ ಜನರಿಗೆ ಕುಡಿಯುವ ನೀರಿಗೆ ತೊಂದರೆಯಾದ ಸಂದರ್ಭದಲ್ಲಿ ಬಿಡಬೇಕು ಎಂದು ಶಾಸಕರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಲ್ಲದೆ ,ಜಿಲ್ಲಾಧಿಕಾರಿ ಜೊತೆ ಮಾತುಕತೆ ನಡೆಸಿದ್ದರು.
ಎ.ಎಂ.ಆರ್.ಡ್ಯಾA ನಲ್ಲಿ ಈ ದಿನ 18.53 ಮೀ.ನೀರಿನ ಮಟ್ಟ ಆಗಿದ್ದು, 18.9 ಮೀ ಮಟ್ಟದಲ್ಲಿ ನೀರು ಶೇಖರಣೆ ಮಾಡಲಾಗುತ್ತದೆ. ಇದಕ್ಕಿಂತ ಹೆಚ್ಚುವರಿಯಾದ ನೀರು ಬ್ಯಾರೇಜ್ ನಿಂದ ಹೊರಹೋಗುತ್ತದೆ. ವರ್ಷದ 365 ದಿನಗಳ ಕಾಲ ಇದೇ ಮಾದರಿಯಲ್ಲಿರುತ್ತದೆ.
ಎ.ಎಂ.ಆರ್ ನ ನಿಯಮಗಳಿಗೆ ಅನುಸಾರವಾಗಿ ನೀರಿನ ಶೇಖರಣೆ ಬಳಕೆ ಮತ್ತು ನೀರನ್ನು ಹೊರಗೆ ಬಿಡುವ ಕಾರ್ಯವನ್ನು ಮಾಡಲಾಗುತ್ತಿದೆ.ಇದರ ಹೊರತುಪಡಿಸಿ ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಗೆ ನೀರು ನೀಡುವ ತುಂಬೆ ವೆಂಟೆಡ್ ಡ್ಯಾಂನಲ್ಲಿ ನೀರಿನ ಕೊರತೆಯಾದ ಸಂದರ್ಭದಲ್ಲಿ ಅಥವಾ ಯಾವುದೇ ಸಂದರ್ಭದಲ್ಲಿ ನೀರನ್ನು ಹೊರಗೆ ಬಿಡಬೇಕು ಎಂದಾದರೆ ಜಿಲ್ಲಾಧಿಕಾರಿ ಅದೇಶ ಬೇಕು.
ಜಿಲ್ಲಾಧಿಕಾರಿಗಳ ಆದೇಶದ ಮೇಲೆ ನಾವು ಕಾರ್ಯನಿರ್ವಹಿಸಲಿದ್ದೇವೆ.
ಪ್ರಸ್ತುತ ನೀರು ಡ್ಯಾಂ ನಿಂದ ಹೊರಗೆ ಬಿಟ್ಟಿಲ್ಲ.ಜಿಲ್ಲಾಧಿಕಾರಿ ಅದೇಶವನ್ನು ಪಾಲಿಸಿಕೊಂಡು ನೀರಿನ ಬಗ್ಗೆ ಕ್ರಮಕೈಗೊಳ್ಳುತ್ತೇವೆ.ಅವರ ಹೊರತು ಯಾರ ಮಾತಿಗೆ ಬೆಲೆ ಇರುವುದಿಲ್ಲ ಎಂಬುದನ್ನು ಎ.ಎಂಆರ್.ನ ಪ್ಲಾಂಟ್ ಮ್ಯಾನೇಜರ್ ಗುರುದಾಸ್ ಮೆಸ್ತಾ ತಿಳಿಸಿದ್ದಾರೆ.