Friday, September 20, 2024
ಸುದ್ದಿ

ತೀರ್ಪು ನಿರೀಕ್ಷಿತ ; ಆದರೆ, ಇನ್ನೂ ಎರಡು ಅರ್ಜಿ ವಿಚಾರಣೆ ಬಾಕಿ ಇದೆ ಕಾದುನೋಡುತ್ತೇವೆ – ಡಾ. ನಿರಂಜನ್ ರೈ

ಮಂಗಳೂರು : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಎತ್ತಿನಹೊಳೆ ಯೋಜನೆಯ ಮೊದಲ ಹಂತದ ಕಾಮಗಾರಿಗೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ(ಎನ್ ಜಿಟಿ) ಶುಕ್ರವಾರ ಷರತ್ತುಬದ್ಧ ಅನುಮತಿಯನ್ನು ನೀಡಿರುವುದಾಗಿ ಮಾಧ್ಯಮದ ವರದಿ ತಿಳಿಸಿದ ಬನ್ನಲ್ಲೆ ಈ ಕುರಿತು ಕಹಳೆ ನ್ಯೂಸ್ ಜೊತೆ ಮಾತನಾಡಿದ ಎತ್ತಿನಹೊಳೆ ವಿರೋಧಿ ಹೋರಾಟ ಸಮಿತಿ ಸಂಚಾಲಕರಾದ ಡಾ. ನಿರಂಜನ್ ರೈ ಯಾವುದೇ ಕಾರಣಕ್ಕೂ ನಾವು ಈ ತೀರ್ಪನ್ನು ಒಪ್ಪಿಕೊಳ್ಳುದಿಲ್ಲ ಮತ್ತು ಇನ್ನೂ ಎರಡು ಅರ್ಜಿಗಳ ವಿಚಾರಣೆ ಬಾಕಿ ಉಳಿದಿದ್ದು, ಮಲೆನಾಡು ರಕ್ಷಣಾ ವೇದಿಕೆಯ ಕಿಶೋರ್ ಕುಮಾರ್ ಶಿರಾಡಿಯವ ಪಿ.ಪಿ.ಟಿ. ಯನ್ನು ಹಸಿರು ನ್ಯಾಯಾಧೀಕರಣ ಕೇಳಿದ್ದು, ಅವರ ವಿಚಾರ ಮಂಡನೆ ಹಸಿರು ನ್ಯಾಯಾಧೀಕರಣದ ಕಣ್ಣು ತೆರೆಸಲಿದೆ. ಯಾವುದೇ ಕಾರಣಕ್ಕೂ ದಕ್ಷಿಣ ಕನ್ನಡ ಜಿಲ್ಲೆಯ ಜನರಿಗೆ ಅನ್ಯಾಯ ಆಗೂದನ್ನು ನೋಡಿಕೊಂಡು ಕುಳಿತುಕೊಳ್ಳುವುದಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

ಜಾಹೀರಾತು

ಜಾಹೀರಾತು
ಜಾಹೀರಾತು

ಜಾಹೀರಾತು

Leave a Response