Saturday, January 25, 2025
ಸುದ್ದಿ

ಬರೆಪ್ಪಾಡಿ ಶ್ರೀ ಕ್ಷೇತ್ರ ಶ್ರೀ ನಾಗ ಸನ್ನಿಧಾನದಲ್ಲಿ ಜೂ. 04ರಿಂದ ಜೂ.05ರವರೆಗೆ ನಾಗ ಪ್ರತಿಷ್ಠಾ ಕಾರ್ಯಕ್ರಮ – ಕಹಳೆ ನ್ಯೂಸ್

ಪುತ್ತೂರು : ಶ್ರೀ ಕ್ಷೇತ್ರ ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಬಳಿಯಲ್ಲಿರುವ ನಾಗ ಸನ್ನಿಧಾನದಲ್ಲಿ ಜೂ. 04ರಿಂದ ಜೂ.05ರವರೆಗೆ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ನಾಗ ಪ್ರತಿಷ್ಠಾ ಕಾರ್ಯಕ್ರಮ ನಡೆಯಲಿದೆ.

ಜೂ.4ರಂದು ಸಂಜೆ 6.00ರಿಂದ ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹವಾಚನ, ಪ್ರಸಾದ ಶುದ್ಧಿ, ಬಿಂಬಜಲಾಧಿವಾಸ, ರಕ್ಷೋಘ್ನ ಹೋಮ, ವಾಸ್ತು ಹೋಮ ವಾಸ್ತು ಪೂಜಾ ಬಲಿ, ದಿಕ್ಬಾಲ ಬಲಿ, ಹಾಗೂ ಅನ್ನಸಂತರ್ಪಣೆ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಜೂ. 5ರಂದು ಬೆಳಿಗ್ಗೆ 6.30ರಿಂದ ಮಹಾಗಣಪತಿ ಹೋಮ, ಪ್ರತಿಷ್ಠಾ ಹೋಮ, ಕಲಶ ಪೂಜೆ ನಡೆಯಲಿದ್ದು, 9.30ರ ಕರ್ಕಾಟಕ ಲಗ್ನದ ಶುಭಮುಹೂರ್ತದಲ್ಲಿ ನಾಗದೇವರ ಪ್ರತಿಷ್ಠೆ, ಆಶ್ಲೇಷಾಬಲಿ, ಪಂಚಾಮೃತ ಅಭಿಷೇಕ, ಕಲಶಾಭಿಷೇಕ, ತಂಬಿಲ ಸೇವೆ, ಮಂಗಳಾರತಿ ನಡೆದು ಪ್ರಸಾದ ವಿತರಣೆ ನಡೆಯಲಿದೆ.