Friday, January 24, 2025
ಸುದ್ದಿ

ಪಥ ಕಿರುಚಿತ್ರದ ಪೋಸ್ಟರ್ ಬಿಡುಗಡೆ – ಕಹಳೆ ನ್ಯೂಸ್

ಪುತ್ತೂರು: ಜೂನ್.3; ಎ.ಯು ಕ್ರಿಯೇಷನ್ಸ್ ನಿರ್ಮಾಣದಲ್ಲಿ ಮತ್ತು ಪುತ್ತೂರಿನ ವಿವೇಕಾನಂದ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿ ಅಚಲ್ ಉಬರಡ್ಕ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಕನ್ನಡ ಕಿರುಚಿತ್ರ ಪಥದ ಪೋಸ್ಟರ್ ಬಿಡುಗಡೆ ಶಾಂತಿನಗರದ ಶ್ರೀ ಮಹಾವಿಷ್ಣು ದೇವಾಲಯದಲ್ಲಿ ಇಂದು ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಕಿರುಚಿತ್ರದ ಕಥೆ ಮತ್ತು ಛಾಯಾಗ್ರಹಣವನ್ನು ಪತ್ರಿಕೋದ್ಯಮ ವಿದ್ಯಾರ್ಥಿ ಗಳಾದ ಯೋಶಿತ್ ಬನ್ನೂರು ಮಾಡಿದರೆ ನಮನ್ ಶೆಟ್ಟಿ ಸಂಕಲನ ಮಾಡಿದ್ದಾರೆ. ಹಾಗೂ ಅಶ್ವಿನ್ ಬಾಬಣ್ಣ ಸಂಗೀತ ನಿರ್ದೇಶನ ಮಾಡಿರುತ್ತಾರೆ.

ಪಥ ಕಿರುಚಿತ್ರದ ನಾಯಕರಾಗಿ ಅಚಲ್ ಉಬರಡ್ಕ ಹಾಗೂ ನಾಯಕಿಯಾಗಿ ವಿಶ್ರಿತ ಆಚಾರ್ಯ ಇವರು ಬಣ್ಣ ಹಚ್ಚಿದ್ದು, ಶರತ್ ಕೆ ಎನ್, ಸ್ವಸ್ತಿಕ್ ಶೆಟ್ಟಿ, ಅರಹಂತ್ ಜೈನ್, ಗಗನ್ ದೀಪ್, ಮಂಜುನಾಥ್ ಜೋಡುಕಲ್ಲು ಮುಂತಾದವರು ಅಭಿನಯಿಸಿದ್ದಾರೆ.

ಇದರ ಪೋಸ್ಟರ್ ಬಿಡುಗಡೆಯನ್ನು ತಲಕಾವೇರಿಯ ಅನುವಂಶಿಕ ಅರ್ಚಕರಾದ ಟಿ.ಎಸ್ ಸುಧೀರ್ ಆಚಾರ್ ಇವರು ಬಿಡುಗಡೆಗೊಳಿಸಿದರು. ಈ ಸಂಧರ್ಭದಲ್ಲಿ ಅರ್ಚಕರಾದ ನಾಗರಾಜ ಭಟ್, ಸಾಯಿಗೀತ, ಸೀತಾರಾಮ ಆಚಾರ್ಯ ಹಾಗೂ ಚಿತ್ರ ತಂಡದವರು ಉಪಸಿತರಿದ್ದರು. ಇದರ ಚಿತ್ರೀಕರಣ ಪೂರ್ಣಗೊಂಡಿದ್ದು, ಟೀಸರ್ ಬಿಡುಗಡೆಯ ದಿನಾಂಕವನ್ನು ಚಿತ್ರತಂಡ ಸಧ್ಯದಲ್ಲೇ ತಿಳಿಸಲಿದ್ದಾರೆ.

ಚಿತ್ರವು ಸಾಮಾಜಿಕ ಕಳಕಳಿಯನ್ನು ಒಳಗೊಂಡಿದ್ದು ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗುವುದರ ಪರಿಣಾಮ ಹಾಗೂ ಹೆಲ್ಮೆಟ್ ಧರಿಸದೇ ಇರುವುದರಿಂದ ಆಗುವ ಸಮಸ್ಯೆಗಳ ಬಗೆಗೆ ಜಾಗೃತಿಯನ್ನು ಮೂಡಿಸುವ ಪ್ರಯತ್ನವನ್ನು ಚಿತ್ರಿಕರಿಸಲಾಗಿದೆ.