ದುಬೈ : ಕರಾವಳಿಯಲ್ಲಿ ಕಂಬಳದ ಆಚರಣೆ ಸುಮಾರು 800-900 ವರುಷಗಳ ಹಿಂದಿನಿAದಲೇ ಬಂದಿರುವ ಇತಿಹಾಸ.ಆದರೇ ಇಷ್ಟರ ತನಕ ಪುರುಷರು ಅಷ್ಟೆ ಕಂಬಳದ ಕೋಣಗಳನ್ನು ಓಡಿಸುತಿದ್ದು ಇನ್ನೂ ಮಹಿಳೆಯರು ಈ ಕ್ಷೇತ್ರಕ್ಕೂ ಇಳಿಯಲಿದ್ದರೆ.ಮೊದಲ ಬಾರಿಗೆ ಮಹಿಳೆಯರು ಕಂಬಳದ ಕೋಣಗಳನ್ನು ಓಡಿಸಲಿದ್ದು ಅವರಿಗೆ ಅಗಸ್ಟ್ ತಿಂಗಳಿನಿAದ ತರಬೇತಿ ನೀಡಲು ದಕ್ಷಿಣ ಕನ್ನಡ ಕಂಬಳ ಅಕಾಡೆಮಿಕ್ ಸಿದ್ದತೆ ನಡೆಸಿತ್ತಿದೆ.
ನಮ್ಮ ಕಂಬುಳ ಟೀಮ್ ದುಬೈ ಅಭಿಪ್ರಾಯ.
ಆಧುನಿಕ ಕಾಲದಲ್ಲಿ ಕಂಬಳವನ್ನು ಇಂದಿನ ಅಧುನಿಕ ಜಗತ್ತಿನ ದಾವಂತದ ಬದುಕಿನಲ್ಲಿ ಸಾಂಪ್ರದಾಯಿಕ ಆಚರಣೆಗಳೆಲ್ಲವು ಪ್ರಶ್ನಾರ್ಹವೆಂದು ತಿಳಿದಿರುವಾಗ ಕಂಬಳವು ಸಹ ಕಾಲಕ್ಕೆ ತಕ್ಕಂತೆ ಬದಲಾಗಿದೆ. ಈ ಹಿಂದೆ ಕೋಣಗಳ ಓಟ ಸ್ಪರ್ಧೆಯ ಹಿಂದಿದ್ದ ಧಾರ್ಮಿಕ ಶ್ರದ್ಧೆ ಮಾಯವಾಗಿ ಮನೋರಂಜನಾತ್ಮಕ ಕ್ರೀಡೆಯಾಗಿ ಮಾರ್ಪಟ್ಟಿದೆ.
ಕಂಬುಳ ಒಂದು ಕ್ರೀಡೆ ಮಾತ್ರವಲ್ಲ ಅದು ನಮ್ಮ ದೈವ ದೇವರ ನಂಬಿಕೆ, ನಮ್ಮ ಸಂಸ್ಕೃತಿ,ಆಚಾರ ವಿಚಾರ ಇತಿಹಾಸ ಇರುವ ಕಲೆ.ಅದನ್ನು ಆಧುನಿಕದ ಜತೆಗೆ ಅದರ ಆಚಾರ ವಿಚಾರ ಇತಿಹಾಸವನ್ನು ಕಾಪಾಡಿಕೊಂಡು ಬರುವುದು ನಮ್ಮ ಕರ್ತವ್ಯ. ಕಂಬಳ ಕ್ಷೇತ್ರದಲ್ಲಿ ಮಹಿಳೆಯರ ಬೆಂಬಲ ಹಾಗು ಸಹಕಾರ ಅಪಾರವಾದದು.ಆದರೆ ಕಂಬಳದ ಕೋಣಗಳನ್ನು ಓಡಿಸೊದು ಸರಿಯಲ್ಲ. ಇದರಿಂದ ಆಗುವ ತೊಂದರೆ ಹಾಗೂ ಧಾರ್ಮಿಕ ಶ್ರದ್ಧೆಗೆ ಆಗುವ ಅಡಚನೆ ಬಗ್ಗೆ ಗಮನಿಸಿ. ಕಂಬಳದ ಕ್ಷೇತ್ರದ ಹಿರಿಯರ ಅಭಿಪ್ರಾಯವನ್ನು ಪಡೆದು ಕಂಬಳ ಅಕಾಡೆಮಿಕ್ ಮಹಿಳೆಯರ ತರಬೇತಿ ಬಗ್ಗೆ ನಿರ್ಧರಿಸೊದು ಉತ್ತಮ. ಬೇಕಾದರೆ ಮಹಿಳೆಯರಿಗೆ ಕಂಬುಳದ ಉದ್ಘೋಷಕರಾಗಿ ಅಥವಾ ಕಂಬಳದ ಬರವಣಿಗೆಯ ಬಗ್ಗೆ ತರಬೇತಿ ನೀಡಲಿ ಎಂದು ನಮ್ಮ ಕಂಬಳ ಟೀಮ್ ದುಬೈಯ ಸನತ್ ಕುಮಾರ್ ಶೆಟ್ಟಿ ಮಾಧ್ಯಮದ ಮೂಲಕ ತಿಳಿಸಿದ್ದಾರೆ.
ಆಧುನಿಕ ಕಂಬಳದಲ್ಲಿ ಹೊಸ ಹೊಸ ಪ್ರಯೋಗಗಳು ನಡೆಯುತ್ತಿವೆ. ಕೋಣಗಳನ್ನು ಓಡಿಸಲು ಪುರುಷ ರಿಗೆ ಶಿಸ್ತು ಬದ್ದವಾದ ತರಬೇತಿ ನೀಡಲು ಅಕಾಡೆಮಿಕ್ ಕೇಂದ್ರವನು ಸ್ಥಾಪಿಸಲಾಗಿದೆ. ಇದರಲ್ಲಿ ಕ್ರೀಡಾಳು,ದೈಹಿಕ ಶಿಕ್ಷಕರು ಮತ್ತು ಸಮಾಜದ ಎಲ್ಲ ವರ್ಗದವರು ಪಡೆದಿರುತ್ತಾರೆ. ಅತ್ಯಂತ ನಿಕಟ ಸ್ಪರ್ಧೆಗಳು ನಡೆಯುವುದರಿಂದ ಫಲಿತಾಂಶ ನಿಖರತೆಗೆ ಟಿವಿ ಥರ್ಡ್ ಅಂಪೈರ್, ಸೆನ್ಸಾರ್ ಪಟ್ಟಿಗಳ ವ್ಯವಸ್ಥೆ ಮಾಡಲಾಗಿರುತ್ತದೆ. ಕಂಬಳದ ವೇಳೆ ಕೋಣಗಳಿಗೆ ಒಂದೇ ಒಂದು ಪೆಟ್ಟು ಕೊಡದೆ ಓಡಿಸುವ ಬಗ್ಗೆ ತರಬೇತಿ ನೀಡಲಾಗುತ್ತದೆ. ಇದು ದಕ್ಷಿಣ ಕನ್ನಡ ಕಂಬಳ ಅಕಾಡೆಮಿಕ್ ನ ಕೊಡುಗೆ ಪ್ರಶಂಸನೀಯ ಎಂದು ತಿಳಿಸಿದರು.