Recent Posts

Monday, January 20, 2025
ಸುದ್ದಿ

ಸೃಷ್ಟಿಗೆ ನಾವೇನು ಕೊಡುತ್ತೇವೊ ಅದು ತಿರುಗಿ ಬರುತ್ತದೆ: ಅತುಲ್ ಶೆಣೈ – ಕಹಳೆ ನ್ಯೂಸ್

ಪುತ್ತೂರು: ಪ್ರಕೃತಿ ನಮ್ಮ ಕಣ್ಣಿಗೆ ಎಷ್ಟು ಸುಂದರವಾಗಿ ಕಾಣುತ್ತದೆಯೋ ಅದು ಅಷ್ಟೆ ಭಯಾನಕವು ಆಗಿರುತ್ತದೆ. ಇತ್ತೀಚಿಗೆ ನಡೆದ ನೆರೆಗಳು ಮಾನವರಿಗೆ ಪರಿಸರ ನೀಡಿದ ಪ್ರತ್ಯಕ್ಷ ಉತ್ತರ ಎಂದು ವಿವೇಕಾನಂದ ಕಾಲೇಜಿನ ವಾಣಿಜ್ಯ ವಿಭಾಗದ ಉಪನ್ಯಾಸಕ ಅತುಲ್ ಶೆಣೈ ಹೇಳಿದರು.

ಅವರು ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ತೃತೀಯ ಪತ್ರಿಕೋದ್ಯಮ ವಿದ್ಯಾರ್ಥಿಗಳು ಆಯೋಜಿಸಿದ ಮಣಿಕರ್ಣಿಕ ಮಾತುಗಾರರ ವೇದಿಕೆಯಲ್ಲಿ ಪ್ರಕೃತಿ ಮುನಿದಿದೆಯೆ ಎಂಬ ವಿಷಯದ ಬಗೆ ನಡೆದ ಕಾರ್ಯಕ್ರಮ ಅತಿಥಿಯಾಗಿ ಭಾಗವಹಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ತಮ್ಮ ಸ್ವಾರ್ಥಕ್ಕಾಗಿ ಮಾನವರು ಪ್ರಕೃತಿಯನ್ನು ತಮಗೆ ಬೇಕಾದ ಹಾಗೆ ಉಪಯೋಗಿಸಿಕೊಳ್ಳುತ್ತಾರೆ.  ಇತ್ತೀಚಿಗೆ ನಾವು ಕಾಣುವಂತೆ ಮಾನವ ಸಂಕುಲವು ಪರಿಸರದಲ್ಲಿ ಇರುವ ಮರ ಗಿಡಗಳನ್ನು ಸುಖಾ ಸುಮ್ಮನೆ ತುಂಡರಿಸುವುದನ್ನು ಕಾಣುತ್ತಿದ್ದೇವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅದೇ ರೀತಿ ಅಭಿವೃದ್ದಿಯ ಹೆಸರಿನಲ್ಲಿ ಸಸ್ಯ ರಾಶಿಯನ್ನು ನಾಶ ಮಾಡುತ್ತಾ ಇರುವುದರಿಂದ ಇಂದು ಮನುಷ್ಯರು ಪ್ರಾಕೃತಿಕ ವಿಕೋಪಗಳಂತಹ  ಸಮಸ್ಯೆಯನ್ನು ಎದುರಿಸುತ್ತಿದ್ದೇವೆ. ಹಾಗೆಯೇ ಅತಿಯಾದ ಪ್ಲಾಸ್ಟಿಕ್ ವಸ್ತುಗಳ ಬಳಕೆಯು ಪ್ರಕೃತಿ ಮಾತೆಯ ತಾಳ್ಮೆಯನ್ನು ಒಡೆಯುವಂತೆ ಮಾಡುತ್ತದೆ.

ಸೃಷ್ಟಿಗೆ ನಾವೇನು ಕೊಡುತ್ತೇವೆಯೋ ಅದು ನಮಗೆ ಮರಳಿ ದೊರಕುತ್ತದೆ. ಆದ್ದರಿಂದ ನಮ್ಮ ಮುಂದಿನ ಪೀಳಿಗೆಗೆ ಪ್ರಕೃತಿಯನ್ನು ರಕ್ಷಿಸಿ, ಬೆಳೆಸುವುದು ನಮ್ಮ ಆದ್ಯ ಕರ್ತವ್ಯವಾಗಬೇಕು ಎಂದು ನುಡಿದರು.

ವಿದ್ಯಾರ್ಥಿಗಳಾದ ಅರುಣ್ ಕುಮಾರ್,ಕಾರ್ತಿಕ್ ಕುಮಾರ್,ಅನಘಾ, ಸಂಕೇತ್ ಕುಮಾರ್, ದೀಕ್ಷಿತ, ರಾಮ್‍ಕಿಶನ್,ವಿನೀತಾ, ಆಶಿಕಾ, ತೇಜಶ್ರೀ, ಗೌತಮ್ ಮತ್ತು ಸುಕನ್ಯಾ ವೇದಿಕೆಗೆ ಬಂದು ತಮ್ಮ ಅನುಭವಗಳನ್ನು ಹಂಚಿಕೊಂಡರು. ದ್ವಿತೀಯ ಪತ್ರಿಕೋದ್ಯಮ ವಿದ್ಯಾರ್ಥಿನಿ ತೇಜಶ್ರೀ ವಾರದ ಉತ್ತಮ ಮಾತುಗಾರ್ತಿಯಾಗಿಯೂ ದ್ವಿತೀಯ ಪತ್ರಿಕೋದ್ಯಮ ವಿದ್ಯಾರ್ಥಿಗಳ ತಂಡ ವಾರದ ಮಾತುಗಾರರ ತಂಡವಾಗಿ ಮೂಡಿಬಂದಿತು.

ಕಾರ್ಯಕ್ರಮದಲ್ಲಿ ವಿಭಾಗದ ಉಪನ್ಯಾಸಕಿ ಭವ್ಯಪಿ ಆರ್ ನಿಡ್ಪಳ್ಳಿ, ಮಣಿಕರ್ಣಿಕ ವೇದಿಕೆಯ ಕಾರ್ಯದರ್ಶಿ ಮೇಘ ಹೆಚ್ ಆರ್ ಉಪಸ್ಥಿತರಿದ್ದರು, ತೃತೀಯ ವರ್ಷದ ವಿದ್ಯಾರ್ಥಿ ಅರುಣ್ ಸ್ವಾಗತಿಸಿ ವಿದ್ಯಾರ್ಥಿ ಪ್ರಶಾಂತ್ ಕುಮಾರ್ ವಂದಿಸಿರು. ವಿದ್ಯಾರ್ಥಿನಿ ಜೀವಿತಾ ಕಾರ್ಯಕ್ರಮ ನಿರ್ವಹಿಸಿದರು.